Advertisement

ತೈಲ ಬೆಲೆ ಇಳಿಕೆ

11:39 PM Mar 15, 2020 | Hari Prasad |

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ರವಿವಾರ ಪ್ರತಿ ಲೀಟರ್‌ಗೆ ಕ್ರಮವಾಗಿ 12 ಪೈಸೆ ಹಾಗೂ 14 ಪೈಸೆ ಇಳಿಕೆಯಾಗಿದೆ. ಇದರಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ಹೊಸದಿಲ್ಲಿಯಲ್ಲಿ 69.75 ರೂ., ಪ್ರತಿ ಲೀಟರ್‌ ಡೀಸೆಲ್‌ 62.44 ರೂ. ಆಗಿದೆ. ಶನಿವಾರ ಕೇಂದ್ರ ಸರಕಾರ ತೈಲದ ಮೇಲಿನ ಅಬಕಾರಿ ಸುಂಕ 3 ರೂ. ಏರಿಕೆ ಮಾಡಿತ್ತು.

Advertisement

ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಶೇ.30ರ ವರೆಗೆ ಇಳಿಕೆಯಾಗಿದ್ದರೂ, ಗ್ರಾಹಕರಿಗೆ ಅದರ ಲಾಭ ಸಿಕ್ಕಿಲ್ಲ ಎಂಬ ಕೊರಗಿನ ನಡುವೆ ತೈಲ ಕಂಪೆನಿಗಳು ದರ ಇಳಿಕೆ ಮಾಡಿವೆ. ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಈ ಅಲ್ಪ ಇಳಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next