Advertisement

Petrol, ಡೀಸೆಲ್‌ ಬೆಲೆ ಶೀಘ್ರದಲ್ಲೇ ಇಳಿಕೆ ಸಾಧ್ಯತೆ

01:11 AM Sep 13, 2024 | Team Udayavani |

ಹೊಸದಿಲ್ಲಿ: ವಾಹನ ಸವಾರರಿಗೆ ಕೇಂದ್ರ ಸರಕಾರ ಸಿಹಿಸುದ್ದಿ ಕೊಡಲಿದೆಯೇ? ಶೀಘ್ರದಲ್ಲಿಯೇ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗಲಿದೆಯೇ? ಇಂಥ ಸುಳಿವನ್ನು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್‌ ಜೈನ್‌ ನೀಡಿದ್ದಾರೆ.

Advertisement

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಲ್ಲಿದ್ದು, ಇನ್ನೂ ಸ್ವಲ್ಪ ಸಮಯದವರೆಗೆ ಇದು ಹೀಗೆಯೇ ಮುಂದುವರಿದರೆ ದೇಶದಲ್ಲಿ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಸುವ ಕುರಿತು ಪರಿಗಣಿಸಬಹುದು. ಭಾರತದ ತೈಲ ಸಚಿವಾಲ ಯವು ಈ ಬಗ್ಗೆ ಹಣಕಾಸು ಸಚಿವಾಲ ಯದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್‌ 2021ರ ಬಳಿಕ ಬ್ರೆಂಟ್‌ ಕಚ್ಚಾ ತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಬ್ಯಾರೆಲ್‌ಗೆ ಶೇ.3.69ರಷ್ಟು ಇಳಿಕೆ ಯಾಗಿ 69.19 ಡಾಲರ್‌ಗೆ ತಲುಪಿದೆ. ಯುಎಸ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್‌ ಮೀಡಿಯೇಟ್‌ (WTI) ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ. 4.31ಕ್ಕೆ ಇಳಿಕೆ ಯಾಗಿ 65.75 ಡಾಲರ್‌ ತಲುಪಿದೆ. ಈ ವೇಳೆ ಎರಡೂ ಮಾದರಿಯ ಕಚ್ಚಾತೈಲಗಳೂ 3 ಡಾಲರ್‌ಗಿಂತ ಹೆಚ್ಚು ಕುಸಿತವನ್ನು ಕಂಡಿವೆ. ಸೋಮವಾರ ಶೇ. 1ರಷ್ಟು ಏರಿಕೆಯಾದರೂ, ಮಂಗಳವಾರ ಶೇ.5ಕ್ಕಿಂತ ಹೆಚ್ಚು ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next