Advertisement

‘ಪೆಟ್‌’ನಿಷೇಧಕ್ಕೆ ಮನವಿ

09:51 AM Dec 02, 2019 | Team Udayavani |

ಹೊಸದಿಲ್ಲಿ: ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ವತಿಯಿಂದ ಮಾರಾಟ ಮಾಡಲಾಗುವ ಪಾಲಿಥೀನ್‌ ಟೆರೆಫ‌§ಲೇಟ್‌ ಬಾಟಲಿಗಳಲ್ಲಿನ (ಪೆಟ್‌ ಬಾಟಲಿಗಳಲ್ಲಿ) ಪೇಯ ಅಥವಾ ತಂಪು ಪಾನೀಯಗಳನ್ನು ನಿಷೇಧಿಸುವಂತೆ ಆಗ್ರಹಿಸಿ, ಆದಿತ್ಯ ದುಬೆ (16) ಎಂಬ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ (ಎನ್‌ಜಿಟಿ) ಮನವಿ ಸಲ್ಲಿಸಿದ್ದಾನೆ.

Advertisement

ರೈಲುಗಳಲ್ಲಿ ಐಆರ್‌ಸಿಟಿಸಿ ವತಿಯಿಂದ ಕೋಕಾಕೋಲ, ಪೆಪ್ಸಿ, ಬಿಸ್ಲೇರಿ, ಪತಂಜಲಿ ಪೇಯ ಸೇರಿದಂತೆ ಇನ್ನೂ ಹಲವಾರು ಪೇಯಗಳನ್ನು ನಿಷೇಧಿಸುವಂತೆ ಆತ ಕೋರಿದ್ದಾನೆ. ಈತನ ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next