Advertisement

ಜೂಬ್ಲಿಯಂಟ್‌ ಕಂಪೆನಿ ಮಾಲಕನ ವಿರುದ್ಧ ಅರ್ಜಿ

11:31 PM Apr 08, 2020 | Sriram |

ಬೆಂಗಳೂರು: ಮೈಸೂರು ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಕೋವಿಡ್ 19 ಸೋಂಕು ಹರಡಲು ಕಾರಣವಾಗಿರುವ ನಂಜನಗೂಡಿನ ಜೂಬ್ಲಿಯಂಟ್‌ ಜನರಿಕ್ಸ್‌ ಕಂಪೆನಿ ಲಿಮಿಟೆಡ್‌ನ‌ ಮಾಲಕರ ವಿರುದ್ಧ ಕ್ರಮ ಜರಗಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಮಧ್ಯಾಂತರ ಅರ್ಜಿ ಸಲ್ಲಿಕೆಯಾಗಿದೆ.

Advertisement

ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಈ ಅರ್ಜಿ ಸಲ್ಲಿಸಿದ್ದಾರೆ. ವಿದೇಶಕ್ಕೆ ತೆರಳದ, ವಿದೇಶದಿಂದ ಹಿಂದಿರುಗಿದವರ ಸಂಪರ್ಕ ಹೊಂದಿರದ ಜೂಬ್ಲಿಯಂಟ್‌ ಕಂಪೆನಿಯ ನೌಕರರೊಬ್ಬರಿಗೆ ಕೊರೊನಾ ಸೋಂಕು ತಗಲಿದೆ. ಆ ವ್ಯಕ್ತಿಯಿಂದ ಅದೇ ಸಂಸ್ಥೆಯ ಇತರ ನೌಕರರಿಗೂ ಸೋಂಕು ಹರಡಿದೆ. ಅದು ಮೈಸೂರು ಸಹಿತ ಕೆಲವು ಜಿಲ್ಲೆಗಳಿಗೂ ವ್ಯಾಪಿಸಿದೆ.

ಜೂಬ್ಲಿಯಂಟ್‌ ಕಂಪೆನಿಗೆ ಚೀನದಿಂದ ಹವಾನಿಯಂತ್ರಿತ ಟ್ರಕ್‌ ಒಂದರಲ್ಲಿ ರಾಸಾಯನಿಕ ವಸ್ತುಗಳನ್ನು ತರಿಸಿಕೊಂಡಿರುವುದೇ ಇದಕ್ಕೆ ಮೂಲ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಹಿತ ಯಾವ ಪ್ರಾಧಿಕಾರಗಳೂ ಕಂಪನಿಯ ಮಾಲಕರನ್ನು ವಿಚಾರಣೆಗೊಳಪಡಿಸಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಎ. 6ರಂದು ಮನವಿ ಸಲ್ಲಿಸಲಾಗಿದ್ದು, ಆ ಮನವಿ ಪರಿಗಣಿಸಿ, ಪ್ರಕರಣದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರಗಿಸಲು ಸಿಎಸ್‌ಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next