Advertisement

ಕ್ಯಾನ್ಸರ್‌ಗೆ ಬಲಿಯಾದ ಆಸೀಸ್‌ ಟೆನಿಸಿಗ

12:25 AM Jul 23, 2019 | Team Udayavani |

ಮೆಲ್ಬರ್ನ್: ಕಳೆದ ಕೆಲವು ವರ್ಷಗಳಿಂದ ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಸ್ಟ್ರೇಲಿಯದ ಖ್ಯಾತ ಟೆನಿಸಿಗ ಪೀಟರ್‌ ಮೆಕ್‌ನಮರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

Advertisement

ಮೆಕ್‌ನಮರ ಆಸೀಸ್‌ ಪರ ಮೂರು ಸಲ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದರು. 1979ರಲ್ಲಿ ಆಸ್ಟ್ರೇಲಿಯನ್‌ ಓಪನ್‌, 1980 ಮತ್ತು 1982ರಲ್ಲಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಡಬಲ್ಸ್‌ ಪ್ರಶಸ್ತಿ ಈ ಆಸೀಸ್‌ ಟೆನಿಸಿಗನ ಪಾಲಾಗಿತ್ತು. 1980 ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ ತನಕ ಪ್ರವೇಶ ಪಡೆದದ್ದು ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ ಮೆಕ್‌ನಮರ ಅವರ ಸರ್ವಶ್ರೇಷ್ಠ ಸಾಧನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next