Advertisement

ಪೆಸ್ತೂಮ್‌ ಸಾಗರ್‌ ಕರ್ನಾಟಕ ಸಂಘ ಮಹಿಳಾ ವಿಭಾಗ: ಆಟಿಡೊಂಜಿ ಕೂಟ

12:13 PM Aug 30, 2018 | |

ಮುಂಬಯಿ: ತಿಲಕ್‌ ನಗರ ಪೆಸ್ತೂಂ ಸಾಗರ್‌ ಕರ್ನಾಟಕ ಸಂಘದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಅಪರಾಹ್ನ ತಿಲಕ್‌ ನಗರದ ನವದುರ್ಗಾ ಮಿತ್ರ ಮಂಡಳ್‌ನಲ್ಲಿ ವೈವಿಧ್ಯ ಮಯ ಕಾರ್ಯಕ್ರಮ ಗಳೊಂದಿಗೆ ನಡೆಯಿತು.

Advertisement

ಸಂಘದ ಮಹಿಳಾ ವಿಭಾಗಾಧ್ಯಕ್ಷೆ ನಾಗವೇಣಿ ಶ್ರೀಧರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಎಸಿಪಿ ಸುಶೀಲಾ ಸಿ. ಶೆಟ್ಟಿ, ತಿಲಕ್‌ ನಗರ ಸಮಾಜ ಸೇವಕಿ ಸಂಗೀತಾ ನಿಕಮ್‌ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಜೆ. ಮೊಲಿ, ಉಪ ಕಾರ್ಯಾಧ್ಯಕ್ಷೆ ಶಾಲಿನಿ ಎಸ್‌. ಶೆಟ್ಟಿ, ಕೋಶಾಧಿಕಾರಿ ಸಂಗೀತಾ ಸಿ. ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಲತಾ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಸುಖಲತಾ ಸಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಕುಂತಳಾ ಶೆಟ್ಟಿ, ಕಸ್ತೂರಿ ಹೆಗ್ಡೆ, ಸಂಧ್ಯಾ ಶೆಟ್ಟಿ, ವೇದಾವತಿ ಶೆಟ್ಟಿ, ಮಮತಾ ರೈ ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಅತಿಥಿ ಸುಶೀಲಾ ಸಿ. ಶೆಟ್ಟಿ ಅವರು ಮಾತನಾಡಿ, ಸಂಘದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತದೆ. ಸಮಾಜ ಬಾಂಧವರನ್ನು ಒಗ್ಗೂಡಿಸುವ ಒಂದು ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದರು. ಅತಿಥಿ-ಗಣ್ಯರು  ಮಾತನಾಡಿದರು.

ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಜೆ. ಶೆಟ್ಟಿ ಅವರು ಆಷಾಢ ಮಾಸದ ವಿಶೇಷತೆೆಗಳನ್ನು ವಿವರಿಸಿದರು. ಮಹಿಳಾ ವಿಭಾಗದ ಕ್ರೀಡಾ ಕಾರ್ಯದರ್ಶಿ ಜಯಂತಿ ಎಂ. ದೇವಾಡಿಗ ಅವರು ಆಟಿ ತಿಂಗಳ ಆಹಾರ ಸೇವನೆಯ ಬಗ್ಗೆ ತಿಳಿಸಿದರು. ಸಂಘದ ಸದಸ್ಯರಿಗಾಗಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಮಾಲತಿ ಜೆ. ಮೊಲಿ, ಹೇಮಾವತಿ ಸಂಪತ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಗೀತಾ ಶೆಟ್ಟಿ, ಸುಖಲತಾ ಶೆಟ್ಟಿ, ಜಯಂತಿ ಎಂ. ದೇವಾಡಿಗ ಸಹಕರಿಸಿದರು.

ವನಿತಾ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ  ಅವರು ಆಟಿ ಕಳಂಜ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮಾಲತಿ ಜೆ. ಮೊಲಿ ಮತ್ತು ಬಳಗದವರಿಂದ ತುಳು ಪಾಡªನ ನಡೆಯಿತು.  ಅಧ್ಯಕ್ಷತೆ ವಹಿಸಿದ್ದ ನಾಗವೇಣಿ ಶ್ರೀಧರ ಶೆಟ್ಟಿ ಅವರು ಮಾತನಾಡಿ, ಸಂಘದ ಚಟುವಟಿಕೆಗಳ ಬಗ್ಗೆ ವಿವರಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ಸಂಘದ ರಾಮಣ್ಣ ಬಿ. ದೇವಾಡಿಗ ಮಾತನಾಡಿ, ಕಾರ್ಯಕ್ರಮದ  ಆಯೋಜನೆಯನ್ನು ಶ್ಲಾಘಿಸಿದರು. ಅಲ್ಲದೆ ಸ್ವಂತ ಕಟ್ಟಡದ ಆವಶ್ಯಕತೆಯಿದೆ. ಅದಕ್ಕಾಗಿ ಎಲ್ಲರೂ  ಸಹಾಯ ಮಾಡಬೇಕು ಎಂದು ಸದಸ್ಯರಲ್ಲಿ ವಿನಂತಿಸಿದರು.
ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಜಯ ಶೆಟ್ಟಿ, ಕಾರ್ಯದರ್ಶಿ ಸುದೇಶ್‌ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸುರೇಶ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸಂಪತ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್‌ ಶೆಟ್ಟಿ, ಟಿ. ಆರ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾಲಿನಿ ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next