Advertisement

ಕೀಟನಾಶಕ ಬಳಕೆಯಿಂದ ರೈತರಿಗೂ ಹಾನಿ: ಭಕ್ಕಣ್ಣನವರ

02:42 PM Jul 04, 2017 | Team Udayavani |

ಕಲಬುರಗಿ: ಸದಾ ಕಾಲ ಕೃಷಿ ಕ್ಷೇತ್ರದಲ್ಲಿ ದುಡಿಯುವ ರೈತರು ವಿವಿಧ ಕೀಟನಾಶಕ ಸಿಂಪಡಿಸುತ್ತಲೇ ಇರುತ್ತಾರೆ. ಹಾಗಾಗಿ ಅವರಿಗೂ ಆರೋಗ್ಯ ಹಾನಿ ಸಂಭವಿಸಲಿದೆ ಎಂದು ಮಣಿಪಾಲ ಕಸ್ತೂರಬಾ ಮೆಡಿಕಲ್‌ ಕಾಲೇಜು ವೈದ್ಯ ಶಂಕರ ಎಂ. ಭಕ್ಕಣ್ಣನವರ ಹೇಳಿದರು.

Advertisement

ಆಳಂದ ತಾಲೂಕು ತೆಲ್ಲೂರು ಗ್ರಾಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ, ರಾಯಚೂರು ಕೃಷಿ ವಿಶ್ವವಿದ್ಯಾಲಯ,
ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ, ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಡಾನ್‌ ಫೌಂಡೇಶನ್‌ ವತಿಯಿಂದ ರೈತರಿಗೆ
ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ರೈತರ ದೇಹದಲ್ಲಿನ ಇತರೆ ಭಾಗಗಳ ಮೇಲೆ ಕೀಟನಾಶಕ ರಸಾಯನಿಕದ ಅಡ್ಡ ಪರಿಣಾಮಗಳ ಕುರಿತು ತಪಾಸಣೆ ಮಾಡಿ ಅವರಿಗೆ ಸೂಕ್ತ ಪರಿಹಾರೋಪಾಯ ಸೂಚಿಸಲಾಗುವುದು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ| ರಾಜು ಜಿ. ತೆಗ್ಗಳ್ಳಿ ಮಾತನಾಡಿ, ತೊಗರಿ ನಾಡಿನಲ್ಲಿ
ಹುಳ-ರೋಗ ಬಾಧೆ ಕಂಡು ಬಾರದೆ ಇದ್ದರೂ ಅತಿಯಾದ ರಸಾಯನಿಕ ಕೀಟನಾಶಕ ಬಳಕೆ ತಪ್ಪಿಸಬೇಕು. ಶಿಫಾರಸಿನ
ಹಾಗೂ ಪ್ರಮಾಣಿಕೃತ ಕೀಟನಾಶಕ ಹಾಗೂ ಸಾವಯವ ಕೃಷಿಗೆ ಒತ್ತು ನೀಡಬೇಕು. ಇದರಿಂದ ಪರಿಸರವಲ್ಲದೆ, ರೈತರು ತಮ್ಮ ಹಾಗೂ ಸಮಾಜದ ಆರೋಗ್ಯ ಕಾಪಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು.

ವೈದ್ಯ ವಿನುತ ಭಟ್‌ ಮಾತನಾಡಿದರು. ಸಂಶೋಧಕರಾದ ಡಾ| ಬ್ರಿಜೇಶ ನಾಯಕ, ಡಾ| ಪ್ರಿಯಾಂಕ, ಡಾ| ಪ್ರಗತಿ,
ಅಮರೇಶ ಹಾಗೂ ನಾಗರಾಜ ದೇಶಪಾಂಡೆ ರೈತರನ್ನು ವಿವಿಧ ಪರೀಕ್ಷೆಗೆ ಒಳಪಡಿಸಿದರು. ಒಟ್ಟು 135 ಜನ ರೈತರು ಆರೋಗ್ಯ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಂಡರು. ಸಸ್ಯರೋಗ ತಜ್ಞರಾದ ಡಾ| ಜಹೀರ್‌ ಅಹಮದ್‌
ಸ್ವಾಗತಿಸಿದರು. ಧಾನ್‌ ಫೌಂಡೇಶನ್‌ ಅ ಧಿಕಾರಿ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು. ಕೃಷಿ ವಿಜ್ಞಾನ 
ಕೇಂದ್ರದ ಕ್ಷೇತ್ರ ಸಹಾಯಕ ಮಲ್ಲಿನಾಥ ಹೆಮಾಡಿ, ಸೈದಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next