ವಿಟ್ಲ : ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಣಿಲ ಶಾಖೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಮಾಣಿಲ ಗ್ರಾಮದ ಕೋಡಂದೂರು ನಿವಾಸಿ ವಿಜಯ ಕುಮಾರ್ ಕ್ರಾಸ್ತಾ(40), ಮತ್ತು ಮಂಜೇಶ್ವರ ತಾಲೂಕಿನ ಸೀತಾಂಗೋಳಿ ಬೆದ್ರಂಪಳ್ಳ ನಿವಾಸಿ ಜಯಪ್ರಕಾಶ್(40) ಬಂಧಿತ ಆರೋಪಿಗಳು.
ಕಳ್ಳರು ಸಂಘದ ಮೇಲ್ಚಾವಣಿಯ ಹಂಚನ್ನು ತೆಗೆದು ಒಳಗಡೆ ಇಳಿದು ಕಚೇರಿಯಲ್ಲಿ ಹುಡುಕಾಡಿದ್ದು ಯಾವುದೇ ಹಣ, ಬೆಲೆಬಾಳುವ ವಸ್ತು ಸಿಗದೆ, ಪರಾರಿಯಾಗಿದ್ದರು.
ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಣಿಲ ಶಾಖೆ ವ್ಯವಸ್ಥಾಪಕ ಜಯರಾಮ ಅವರು ಈ ಬಗ್ಗೆ ದೂರು ನೀಡಿದ್ದರು. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಘಟನೆ ನಡೆದು ಎರಡು ದಿನಗಳಲ್ಲಿ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಇ. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಠಾಣಾಧಿಕಾರಿ ಸಂದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಪೊಲೀಸರಾದ ಪ್ರಸನ್ನ, ಹೇಮರಾಜ್, ಪ್ರತಾಪ್ ರೆಡ್ಡಿ, ಲೋಕೇಶ್ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಪೆರುವಾಯಿ ವ್ಯವಸಾಯ ಸಂಘದ ಪ್ರಮುಖ ಶಾಖೆಯಲ್ಲಿ ಈ ಹಿಂದೆ ಕಳ್ಳತನ ನಡೆದಿತ್ತು. ಈ ಪ್ರಕರಣವನ್ನು ಕೂಡಾ ಇದೇ ಪೊಲೀಸರ ತಂಡ ಯಶಸ್ವಿಯಾಗಿ ಪತ್ತೆ ಹಚ್ಚಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ :ಮೊಬೈಲ್ ಶೋರೂಂನಲ್ಲಿ ಕಳವು ಪ್ರಕರಣ : 40 ಲ.ರೂ. ಮೌಲ್ಯದ ಮೊಬೈಲ್‌ಗಳ ಸಹಿತ ಓರ್ವನ ಬಂಧನ