Advertisement

ನೇಗಿಲಹಾಳ್‌ಗೆ ಪೆರುಮಾಳ್‌ ಸ್ಮರಣಾರ್ಥ ಪ್ರಶಸ್ತಿ

12:52 PM Dec 18, 2017 | Team Udayavani |

ಬೆಂಗಳೂರು: ಫೋಕಸ್‌ ಅಕಾಡೆಮಿ ಫಾರ್‌ ಆರ್ಟ್‌ ಫೊಟೋಗ್ರಫಿ ಸಂಸ್ಥೆ ವತಿಯಿಂದ ಕಳೆದ ಮೂರು ದಿನಗಳಿಂದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಟಿ.ಎನ್‌.ಎ. ಪೆರುಮಾಳ್‌ ಸೇರಿದಂತೆ ಇನ್ನಿತರೆ ಛಾಯಾಗ್ರಾಹಕರ ಛಾಯಾಚಿತ್ರಗಳ ಪ್ರದರ್ಶನಕ್ಕೆ ಭಾನುವಾರ ತೆರೆಬಿತ್ತು.

Advertisement

ಸಂಸ್ಥೆ ವತಿಯಿಂದ “ಟಿ.ಎನ್‌.ಎ ಪೆರುಮಾಳ್‌ ಸ್ಮರಣಾರ್ಥ’ ಪ್ರಶಸ್ತಿಯನ್ನು ಅವರ ಒಡನಾಡಿ ಹಾಗೂ ನಿವೃತ್ತ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಎಸ್‌.ಜಿ ನೇಗಿಲಹಾಳ್‌ ಅವರಿಗೆ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು. ಬಳಿಕ ಮಾತನಾಡಿದ ನೇಗಿಲಹಾಳ್‌, ಪೆರುಮಾಳ್‌ ಅವರಿಗೆ ಫೋಟೋಗ್ರಫಿಯ ಮೇಲಿದ್ದ ಬಧœತೆ, ಛಾಯಾಚಿತ್ರಗಳ ಮುಖೇನ ಪರಿಸರ ಸೂಕ್ಷ್ಮತೆಗಳನ್ನು ಸೆರೆಹಿಡಿಯುವ ಛಾತಿಯನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಒಡನಾಟದಿಂದ ನಾನೂ ಫೋಟೋಗ್ರಫಿಯತ್ತ ಒಲವು ಬೆಳೆಸಿಕೊಂಡೆ ಎಂದು ಸ್ಮರಿಸಿದರು.

ಅರಣ್ಯಾಧಿಕಾರಿ ಆಗಿದ್ದಾಗ ಬೆಂಗಳೂರಿನಾದ್ಯಂತ 15 ಲಕ್ಷ ಗಿಡಗಳನ್ನು ಬೆಳೆಸುವ ಯೋಜನೆ ಯಶಸ್ವಿಯಾಗಿ ಮುನ್ನೆಡೆಸಿದ್ದು ಅತ್ಯಂತ ಹೆಮ್ಮೆಯ ಸಂಗತಿ. ಈ ಯೋಜನೆಯನ್ನು ಇತರೆ ರಾಜ್ಯಗಳು ಅನುಸರಿಸಲು ಆರಂಭಿಸಿದವು. ಈಗಲೂ ನಗರ ಹಾಗೂ  ಗ್ರಾಮೀಣ ಭಾಗದಲ್ಲಿ ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲು ಸರ್ಕಾರಗಳು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಖ್ಯಾತ ಪರಿಸರ ತಜ್ಞ ಡಾ. ಎನ್‌ ಯಲ್ಲಪ್ಪ ರೆಡ್ಡಿ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ವ್ಯಸನಕ್ಕೆ ಒಳಗಾಗುವುದನ್ನು ತಪ್ಪಿಸಲು ಪೋಷಕರು ಹಾಗೂ ಶಾಲೆಗಳು, ಮಕ್ಕಳನ್ನು  ಪ್ರಾಕೃತಿಕ ಸೊಬಗನ್ನು ವೈಶಿಷ್ಟéತೆಯನ್ನು ಆಸ್ವಾದಿಸುವ ಅವಕಾಶಗಳನ್ನು ಕಲ್ಪಿಸಬೇಕು ಸಲಹೆ ನೀಡಿದರು.

ಸರ್ವೇವೊಂದರ ಪ್ರಕಾರ 2030ರ ವೇಳೆಗೆ ಶೇ 30ರಷ್ಟು ಮಂದಿ ಮಾನಸಿಕ ಖನ್ನತೆಗೆ ಒಳಗಾಗಲಿದ್ದಾರೆ ಎಂಬುದು ಆಘಾತಕಾರಿ ಸಂಗತಿ. ಇಂದಿನ ಮಕ್ಕಳು ಹದಿಹರೆಯದ ವಯಸ್ಸಿನಲ್ಲಿಯೇ ಸಿಗರೇಟ್‌, ಮದ್ಯಪಾನ ಮುಂತಾದ ವ್ಯಸನ, ಮಾನಸಿಕ ಖನ್ನತೆಗಳಿಗೆ ಒಳಗಾಗುತ್ತಿದ್ದಾರೆ.

Advertisement

ಹೀಗಾಗಿ ವಿಶೇಷ ಚೈತನ್ಯ ತುಂಬುವ ಶಕ್ತಿಯಿರುವ ಪರಿಸರದತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುವುದು  ಪೋಷಕರ ಹಾಗೂ ಶಾಲೆಗಳ ಜವಾಬ್ದಾರಿ ಎಂದರು. ಹಿರಿಯ ಚಿತ್ರಕಲಾವಿದ ಡಾ. ಎಂ.ಎಸ್‌ ಮೂರ್ತಿ, ಪೆರುಮಾಳ್‌ ಪುತ್ರ ವಿಜಯ್‌ಕುಮಾರ್‌ ಉಪಸ್ಥಿತರಿದ್ದರು.

ಪೆರುಮಾಳ್‌ರನ್ನು ಸರ್ಕಾರ ಕಡೆಗಣಿಸಿದೆ: ರಾಜ್ಯದಲ್ಲಿಯೇ ನೆಲೆಸಿ ಫೊಟೋಗ್ರಫಿಯಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿದ ಪೆರುಮಾಳ್‌ ಅವರನ್ನು ರಾಜ್ಯಸರ್ಕಾರ ಕಡೆಗಣಿದ್ದು ಬೇಸರದ ಸಂಗತಿ ಎಂದು ಫೋಕಸ್‌ ಅಕಾಡೆಮಿ ಫಾರ್‌ ಆರ್ಟ್‌ ಫೊಟೋಗ್ರಫಿ  ಶ್ರೀನಿವಾಸ್‌ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯಸರ್ಕಾರ ಪೆರುಮಾಳ್‌ ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕೆಲಸವನ್ನೇ  ಮಾಡಲಿಲ್ಲ. ಹೀಗಾಗಿ ಅವರ ಹೆಸರಿನಲ್ಲಿ ನಾವೇ ಪ್ರಶಸ್ತಿ ಕೊಡುವ  ಕೆಲಸ ಮಾಡಲು ಮುಂದಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next