Advertisement
ಆಸ್ಟ್ರೇಲಿಯದ 416 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ನ್ಯೂಜಿಲ್ಯಾಂಡ್ 166 ರನ್ನಿಗೆ ಕುಸಿಯಿತು. 250 ರನ್ನುಗಳ ಬೃಹತ್ ಮುನ್ನಡೆ ಪಡೆದರೂ ಕಾಂಗರೂ ಪಡೆಯೇ ಮರಳಿ ಬ್ಯಾಟಿಂಗ್ ನಡೆಸಲು ಮುಂದಾಯಿತು. ದ್ವಿತೀಯ ಸರದಿಯಲ್ಲಿ ಕುಸಿತ ಕಂಡರೂ ಯಾವುದೇ ಆತಂಕಕ್ಕೆ ಸಿಲುಕಿಲ್ಲ. 3ನೇ ದಿನದಾಟದ ಕೊನೆಗೆ 6ಕ್ಕೆ 167 ರನ್ ಗಳಿಸಿದೆ.
ಆರಂಭಕಾರ ಜೋ ಬರ್ನ್ಸ್ (53) ಮತ್ತು ಅಮೋಘ ಫಾರ್ಮ್ನಲ್ಲಿರುವ ಮಾರ್ನಸ್ ಲಬುಶೇನ್ (50) ಅರ್ಧ ಶತಕ ಬಾರಿಸಿ ಮಿಂಚಿದರು. ಒಂದು ಹಂತದಲ್ಲಿ ಆಸೀಸ್ ಒಂದೇ ವಿಕೆಟಿಗೆ 131 ರನ್ ಬಾರಿಸಿತ್ತು. ಆದರೆ ಲಬುಶೇನ್ ಔಟಾದ ಬಳಿಕ ಸೌಥಿ ದಾಳಿಗೆ ದಿಢೀರ್ ಕುಸಿತಕ್ಕೆ ಸಿಲುಕಿತು. 29 ರನ್ ಅಂತರದಲ್ಲಿ 5 ವಿಕೆಟ್ ಉರುಳಿಸಿಕೊಂಡಿತು. ಸ್ಮಿತ್ (16), ಹೆಡ್ (5), ಪೇನ್ (0) ಬೇಗನೇ ಪೆವಿಲಿಯನ್ ಸೇರಿಕೊಂಡರು. ವಾರ್ನರ್ (19) ಕೂಡ ವೈಫಲ್ಯ ಕಂಡರು. ಸೌಥಿ ಸಾಧನೆ 63ಕ್ಕೆ 4 ವಿಕೆಟ್. ಉಳಿದೆರಡು ವಿಕೆಟ್ ನೀಲ್ ವ್ಯಾಗ್ನರ್ ಪಾಲಾಗಿವೆ. ಮುಂದುವರಿದ ಕುಸಿತ
5ಕ್ಕೆ 109 ರನ್ ಮಾಡಿ ತೀವ್ರ ಸಂಕಟದಲ್ಲಿದ್ದ ನ್ಯೂಜಿಲ್ಯಾಂಡ್, 3ನೇ ದಿನದಾಟದಲ್ಲೂ ಬ್ಯಾಟಿಂಗ್ ಕುಸಿತದಿಂದ ಬಚಾವಾಗಲಿಲ್ಲ. 66ರಲ್ಲಿದ್ದ ರಾಸ್ ಟೇಲರ್ 80 ರನ್ ಮಾಡಿದರೆ, ಗ್ರ್ಯಾಂಡ್‌ಹೋಮ್ 23 ರನ್ ಹೊಡೆದರು. ಸ್ಟಾರ್ಕ್ 5 ವಿಕೆಟ್ ಕಿತ್ತರು.
Related Articles
ಆಸ್ಟ್ರೇಲಿಯ-416 ಮತ್ತು 6 ವಿಕೆಟಿಗೆ 167 (ಬರ್ನ್ಸ್ 53, ಲಬುಶೇನ್ 50, ಸೌಥಿ 63ಕ್ಕೆ 4). ನ್ಯೂಜಿಲ್ಯಾಂಡ್-166 (ಟೇಲರ್ 80, ವಿಲಿಯಮ್ಸನ್ 34, ಗ್ರ್ಯಾಂಡ್‌ಹೋಮ್ 23, ಸ್ಟಾರ್ಕ್ 52ಕ್ಕೆ 5, ಲಿಯೋನ್ 48ಕ್ಕೆ 2).
Advertisement