ಕಲಬುರಗಿ: ದ್ವಿಚಕ್ರವಾಹನ ಸವಾರರಿಗೆ ಸುಪ್ರಿಂಕೋರ್ಟ್ ಸೂಚನೆಯಂತೆ ಹೆಲ್ಮೆಟ್‌ನ್ನು ಎರಡ್ಮೂರು ದಿನಗಳಲ್ಲಿ ಕಡ್ಡಾಯ ಮಾಡಲಾಗುತ್ತಿರುವುದರಿಂದ ನಗರದಲ್ಲಿನ ದ್ವಿಚಕ್ರವಾಹನ ಸವಾರರಿಗೆ ವಿದ್ಯಾರ್ಥಿಗಳಿಂದ ಗುಲಾಬಿ ಹೂ ಕೊಡಿಸಿ ಜಾಗೃತಿ ಮೂಡಿಸಲಾಯಿತುಎಂದು ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ತಿಳಿಸಿದರು.
ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ದ್ವಿಚಕ್ರವಾಹನ ಸವಾರರಿಗೆ ಸಂಚಾರಿ ಪೊಲೀಸ್‌ರ ವತಿಯಿಂದ ದ್ವಿಚಕ್ರವಾಹನ ಸವಾರರಲ್ಲಿ ಹೆಲ್ಮೆಟ್ ಹಾಗೂ ಸಂಚಾರಿ ನಿಯಮಗಳ ಕುರಿತ ಜಾಗೃತಿ ಮೂಡಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸದಿದ್ದರೆ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದು. ಇದಕ್ಕೂ ಮುನ್ನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಲಾಗುತ್ತಿದೆ ಎಂದರು. ಸಂಚಾರಿ ಠಾಣೆಯ ಪಿಐ ಶಾಂತಿನಾಥ, ಪಿಎಸ್‌ಐ ಶೌಕತ ಅಲಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.
ವಾಡಿ: ಹೆಲ್ಮೆಟ್ ಧರಿಸಿ ಕಾನೂನು ಪಾಲನೆ ಮಾಡಿದ ದ್ವಿಚಕ್ರ ವಾಹನ ಸವಾರರಿಗೆ ಸಿಹಿ ಜತೆಗೆ ಗುಲಾಬಿ ಹೂಕೊಟ್ಟು ಗೌರವಿಸುವ ಮೂಲಕ ಪೊಲೀಸರು ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನಕ್ಕೆ ಲನೆ ನೀಡಿದರು. ಪಟ್ಟಣದ ಬಳಿರಾಮ ಚೌಕ್ ವೃತ್ತದಲ್ಲಿ ಬೈಕ್ ಸವಾರರನ್ನು ತಡೆದು ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಕೋರಿದ ಶಹಾಬಾದ ಡಿವೈಎಸ್‌ಪಿ ಮಹೇಶ ಮೇಘಣ್ಣವರ, ಎಸ್‌ಪಿ ಶಶಿಕುಮಾರ ಆದೇಶದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ವರ್ಷವಿಡಿ ಜಿಲ್ಲೆಯಾಧ್ಯಂತ ಸಂಭವಿಸಿದ ರಸ್ತೆ ಅಪಘಾತದ ಸಾವು-ನೋವುಗಳಲ್ಲಿ ಅತಿ ಹೆಚ್ಚು ಅಸುರಕ್ಷಿತ ಬೈಕ್ ಚಾಲನೆಯಿಂದ ಘಟಿಸಿರುವುದು ದಾಖಲೆಗಳಿಂದ ಸಾಬೀತಾಗಿದೆ. ಅಪಘಾತಗಳನ್ನು ತಡೆಗಟ್ಟಲು ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಸ್ಥಳೀಯ ಠಾಣೆ ಪಿಎಸ್‌ಐ ನಟರಾಜ ಲಾಡೆ ಮಾತನಾಡಿ, ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂದರ್ಭದಲ್ಲಿ ಸಂಭವಿಸಬಹುದಾದ ಜೀವ ಹಾನಿ ತಡೆಗಟ್ಟಬಹುದು ಎಂದರು. ಎಎಸ್‌ಐ ಮನೋಹರ ಭೈಯ್ನಾ, ಸಿಬ್ಬಂದಿ ದತ್ತು ಜಾನೆ, ಗುಂಡಪ್ಪ ಕೊಗಾನೂರ, ಯಾಧವ ರಾಠೊಡ ಹಾಗೂ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.