Advertisement

ಧಾರ್ಮಿಕ ಮುಖಂಡರಿಂದ ವ್ಯಕ್ತಿತ್ವ ವಿಕಸನ ಕಾರ್ಯ

01:13 PM Feb 22, 2018 | |

ವಿಟ್ಲ: ಮನುಷ್ಯನಲ್ಲಿ ದೈವತ್ವ ವನ್ನು ಉದ್ದೀಪಿಸುವ, ವ್ಯಕ್ತಿತ್ವ ವಿಕಾಸ ಮಾಡುವ ಕಾರ್ಯ ಸಂತರಿಂದ, ಧಾರ್ಮಿಕ ಮುಖಂಡರಿಂದ ನಡೆ ಯುತ್ತದೆ. ನಿರ್ಜೀವವಾಗಿರುವ ಮೂರ್ತಿಗೆ ದೈವಿಕ ಶಕ್ತಿ ನೀಡಲು ಆಚಾರ್ಯರಿಂದ ಸಾಧ್ಯವಾಗುತ್ತದೆ. ಸಮಾಜಕ್ಕೆ ಸಂತರು ಮಾರ್ಗದರ್ಶನ ಮಾಡುತ್ತಾರೆ. ತ್ಯಾಗ, ಭಕ್ತಿ, ಸಾಮಾಜಿಕ ಕಳಕಳಿ ಇರುವವರಿಗೆ ಸಮಾಜ ಗೌರವ ನೀಡುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ದಲ್ಲಿ ನಾಗಮಂ ಡಲದ ಸಂದರ್ಭ ಭಜನೋತ್ಸವದ ಸಭೆಯಲ್ಲಿ ಮಾತ ನಾಡಿದರು. ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳೇ ನೈಜ ಸಂಪತ್ತು;  ಅವರನ್ನು ಉತ್ತಮವಾಗಿ ಬೆಳೆಸಿದಾಗ ದೇಶ ಉತ್ತಮ ವಾಗಿರುತ್ತದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಕಟೀಲಿನ  ಅನಂತಪದ್ಮ ನಾಭ ಆಸ್ರಣ್ಣ ಮಾತನಾಡಿ, ಪ್ರೀತಿಯ ಮೂಲಕ ಮಹಾನ್‌ ಸಾಧನೆ ಮಾಡಲು ಸಾಧ್ಯ. ಜಾತಿ ಮತ ಭೇದ ಮರೆತು ಹಿಂದೂ ಧರ್ಮದವರು ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ದಯಾನಂದ ಬಂಗೇರ ಮುಂಬಯಿ ಉಪಸ್ಥಿತರಿದ್ದರು. ಹೆಗ್ಗಡೆ
ಅವರನ್ನು ಪಟ್ಟಾಭಿಷೇಕ ವರ್ಧಂತಿಯ ಅಂಗವಾಗಿ ಕ್ಷೇತ್ರದ ವತಿಯಿಂದ ಸಮ್ಮಾನಿಸಲಾಯಿತು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ, ಬಾಯಾರು ಪಂಚಲಿಂಗೇಶ್ವರ ದೇವ ಸ್ಥಾನದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಕೇಪು ವಲಯ, ಮಾಣಿಲ ಕ್ಷೇತ್ರದ ವತಿಯಿಂದ ಗೌರವ ಸಲ್ಲಿಸಲಾಯಿತು. ಮಾಣಿಲ ಶ್ರೀಗಳ ಮಾತೃಶ್ರೀ ಕಮಲಮ್ಮ ಅವರನ್ನು ಸಮ್ಮಾನಿಸಲಾಯಿತು.

ನಾಗಮಂಡಲ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಸ್ವಾಗತಿಸಿದರು. ಆರ್ಥಿಕ ಸಮಿತಿ ಸಂಚಾಲಕ ದಾಮೋದರ ಬಿ.ಎಂ. ಮಾರ್ನಬೈಲು ವಂದಿಸಿ ದರು. ಪುಷ್ಪರಾಜ್‌ ಕುಕ್ಕಾಜೆ, ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next