Advertisement
ಪೆರ್ಮುದೆಯ ಬಬ್ಬರಪಡ್ಪು ಹಾಗೂ ಕೆಂಪರಪಾದೆಯ ತೋಡುಗಳಲ್ಲಿ ಅಪಾರ ಪ್ರಮಾಣ ಸತ್ತಮೀನು ಕಾಣಸಿಕ್ಕಿವೆ. ಕೆಲವು ಮೀನುಗಳು ಒದ್ದಾಡಿ ಸಾವನ್ನಪ್ಪುವ ದೃಶ್ಯ ಮನ ಕಲಕುವಂತಿದೆ. ತೋಡಿನಲ್ಲಿ ಕಿಜನ್, ಅಬ್‌ರೊನಿ, ಎಟ್ಟಿ, ಮರಿಮುಗುಡು, ಕೊಂತಿ, ತೇಡೆ, ಪುರಿಯೊಳು ಹೆಸರಿನ ಮೀನುಗಳು ಸತ್ತಿರುವುದು ಕಾಣ ಸಿಕ್ಕಿದೆ.
Related Articles
Advertisement
ಪರಿಸರದ ಜಾನುವಾರುಗಳು ಬಾಯಾರಿಕೆಗೆ ಈ ತೋಡಿನ ನೀರನ್ನು ಆಶ್ರಯಿಸಿದ್ದವು. ಎರಡು ದಿನಗಳಿಂದ ಮೀನು ಸಾಯುತ್ತಿರುವುದರಿಂದ ಜಾನುವಾರುಗಳು ನೀರು ಕುಡಿಯಲು ಹಿಂದೇಟು ಹಾಕುತ್ತಿವೆ. ಅಷ್ಟೇ ಅಲ್ಲದೇ ಮೀನು ಸತ್ತಿರುವ ಕಾರಣ ನೀರು ವಾಸನೆ ಬರುತ್ತಿದೆ.
ಜಿ.ಪಂ. ಸದಸ್ಯೆ ವಸಂತಿ ಕಿಶೋರ್, ಪೆರ್ಮುದೆ ಗ್ರಾ.ಪಂ. ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷ ಕಿಶೋರ್, ಕಾರ್ಯದರ್ಶಿ ನಾಗೇಶ್ ರವಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.