Advertisement

ಬಡಾವಣೆ ನಿರ್ಮಾಣಕ್ಕೆ ಅನುಮತಿ ಕಡ್ಡಾಯ

04:18 PM Nov 28, 2020 | Suhan S |

ಬಳ್ಳಾರಿ: ಅನಧಿಕೃತ ಬಡಾವಣೆಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೇ ನಮೂನೆ-9, 11ಎ ಹಾಗೂ11ಬಿ ಖಾತೆ ನೀಡಬಾರದು ಎಂದು ಜಿಪಂ ಸಿಇಒ ಕೆ.ಆರ್‌. ನಂದಿನಿ ಆದೇಶ ಹೊರಡಿಸಿದ್ದಾರೆ.

Advertisement

ಬುಡಾ ಅಧ್ಯಕ್ಷ ದಮ್ಮೂರುಶೇಖರ ಅವರು ಬುಡಾ ವ್ಯಾಪ್ತಿಗೆಒಳಪಡುವ 6 ಗ್ರಾಪಂಗಳ 18ಗ್ರಾಮಗಳಲ್ಲಿ ಸುಮಾರು 1 ಸಾವಿರಎಕರೆ ಪ್ರದೇಶದಲ್ಲಿ ಅನ ಧಿಕೃತಬಡಾವಣೆಗಳು ನಿರ್ಮಾಣವಾಗಿದ್ದು, ಗ್ರಾಪಂಗಳಲ್ಲಿ ಒಬ್ಬರ ಹೆಸರಲ್ಲೇನೂರಾರು 9, 11ಎ, 11ಬಿ ವಿತರಣೆಯಾಗಿದ್ದುಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಷ್ಟವುಂಟಾಗುತ್ತಿದೆ. ಹಾಗಾಗಿ ಇದನ್ನು ತಡೆಹಿಡಿಯುವಂತೆ ಕೋರಿ ಜಿಪಂ ಸಿಇಒಗೆ ಮನವಿ ಸಲ್ಲಿಸಿದ್ದರು.

ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಅವರ ವಿನಂತಿ ಮತ್ತು ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿದಂತೆ ಗ್ರಾಪಂಗಳುಜಮೀನು ಪರಿವರ್ತನೆಗೊಂಡ(ಎನ್‌ಎ) ನಂತರ ಬಡಾವಣೆಗಳ ನಕ್ಷೆಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಆಗದಿದ್ದರೇ ಯಾವುದೇ ಕಾರಣಕ್ಕೂ ನಮೂನೆ-9, 11ಎ ನೀಡಬಾರದುಮತ್ತು ಯಾವ ಆಸ್ತಿಗಳಿಗೆ 11ಬಿಯನ್ನು ನೀಡಬೇಕೆಂದುಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿದೆ. ಭೂ ಪರಿವರ್ತನೆ ಆದೇಶ ಸಕ್ಷಮ ಪ್ರಾಧಿಕಾರಗಳಿಂದ ಬಡಾವಣೆ ರಚನೆಯ ನಕ್ಷೆಯ ಅನುಮೋದನೆ ನೀಡಿರುವ ಮಂಜೂರಾತಿ ಆದೇಶದ ಮೂಲಪ್ರತಿಗಳನ್ನು ಗ್ರಾಪಂಗಳಲ್ಲಿ ಸಲ್ಲಿಸಿದಲ್ಲಿ ಮಾತ್ರ ತೆರಿಗೆ ನಿರ್ಧರಣಾಪಟ್ಟಿಗೆ ಸೇರಿಸಿಕೊಳ್ಳಲು 11ಎ ಮತ್ತು 11ಬಿನೀಡಬೇಕು ಎಂದು ಜಿಪಂ ಸಿಇಒ ಅವರು ಆದೇಶ ಹೊರಡಿಸಿದ್ದಾರೆ.

ಪರಿಣಾಮ ಇನ್ನುಮುಂದೆ ಬುಡಾ ವ್ಯಾಪ್ತಿಯ ಆರು ಗ್ರಾಪಂಗಳ 18 ಗ್ರಾಮಗಳ ವ್ಯಾಪ್ತಿಯಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಚನೆಗೊಂಡಿರುವ ಬಡಾವಣೆಗಳು ಬುಡಾ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next