Advertisement
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಸರಕಾರಿ ಹಿರಿಯ ಮಾದರಿ ಶಾಲೆಯ ಕಟ್ಟಡದಲ್ಲಿ ಎರಡು ಕೊಠಡಿಗಳು ಸಂಪೂರ್ಣ ಬಿರುಕು ಬಿಟ್ಟು ಛಾವಣಿ ಕುಸಿ ಯುವ ಹಂತದಲ್ಲಿವೆ. ಈ ಕೊಠಡಿಗಳಿಗೆ ತಾಗಿಕೊಂಡಿದ್ದ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು, “ಉದಯವಾಣಿ’ ಸುದಿನ ವರ್ಷದ ಹಿಂದೆಯೇ ಸುದೀರ್ಘ ವರದಿಯನ್ನು ಪ್ರಕಟಿಸಿತ್ತು.
Related Articles
Advertisement
ವರದಿ ಬಂದಿದೆತಣ್ಣೀರುಪಂತ ಶಾಲೆಯ ಹಳೆಯ ಕೊಠಡಿಗಳನ್ನು ಪರಿಶೀಲಿಸಿದ್ದು, ಶಿಕ್ಷಣ ಇಲಾಖೆಯಿಂದ ಜಿ.ಪಂ. ಎಂಜಿನಿಯರಿಂಗ್ ವಿಭಾಗಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಕೆಡವಲು ಮಂಜೂರಾತಿ ಪಡೆಯುವುದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಈಗ ಜಿ.ಪಂ. ಎಂಜಿನಿಯರಿಂಗ್ ವಿಭಾಗವು ವರದಿ ನೀಡಿದ್ದು, ತಾ.ಪಂ. ಸಭೆಯಲ್ಲಿ ಚರ್ಚೆಯ ಬಳಿಕ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು.
-ಶರೀಫ್, ಕ್ಷೇತ್ರ ಶಿಕ್ಷಣ ಸಂಯೋಜಕ, ಬೆಳ್ತಂಗಡಿ ಶೀಘ್ರ ಕ್ರಮ
ತಣ್ಣೀರುಪಂತ ಶಾಲೆಯಲ್ಲಿ ಎರಡು ಹಳೆಯ ಕೊಠಡಿಗಳು ಹಾಗೂ ಅದಕ್ಕೆ ತಾಗಿಕೊಂಡು ಒಂದು ಮರ ಅಪಾಯದ ಸ್ಥಿತಿಯಲ್ಲಿರುವುದು ನಿಜ. ಈ ಕುರಿತು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಕೋರಿಕೆಯ ಮೇರೆಗೆ ಇದೀಗ ಕಟ್ಟಡದ ಕೊಠಡಿಗಳನ್ನು ಕೆಡವಲು ಜಿ.ಪಂ. ಎಂಜಿನಿಯರಿಂಗ್ ವಿಭಾಗದಿಂದ ಮಂಜೂರಾತಿ ಸಿಕ್ಕಿದ್ದು, ತತ್‌ಕ್ಷಣವೇ ಕ್ರಮ ಕೈಗೊಳ್ಳಲಾಗುವುದು.
-ಜಯವಿಕ್ರಮ್ ಕಲ್ಲಾಪು, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ