Advertisement
ಕೋವಿಡ್ ನಿರ್ಬಂಧಗಳನ್ವಯ ಮದುವೆ ಕಾರ್ಯಕ್ರಮಗಳಿಗೆ ಸಭಾಂಗಣದ ಒಳಗೆ ಹಾಗೂ ಹೊರಾಂಗಣಕ್ಕೆ ಎಂದು ಪ್ರತ್ಯೇಕ ಜನರ ಮಿತಿಯನ್ನು ಸರಕಾರ ನಿಗದಿಪಡಿಸಿದೆ. ಮದುವೆಗೆ ಆಗಮಿಸುವವರಿಗೆ ಪಾಸ್ ಕಡ್ಡಾಯ ಎಂದೂ ತಿಳಿ ಸಿದೆ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಮದುವೆಯ ಅನುಮತಿಗಾಗಿ ನಿಯೋಜಿತ ಅಧಿಕಾರಿಯ ಬಳಿಗೆ ಹೋಗಬೇಕು. ಮದುವೆಗೆ ಆಗಮಿಸುವ 50 ಮಂದಿಯ ಆಧಾರ್ ಕಾರ್ಡ್‌ನ್ನು ನೀಡಬೇಕು. ಅದರ ಆಧಾರದಲ್ಲಿ 50 ಪಾಸ್‌ಗಳನ್ನು ನೀಡಲಾಗುತ್ತದೆ. ಮದುವೆಗೆ ಆಗಮಿಸುವವರು ಪಾಸ್ ತೋರಿಸಿದರಷ್ಟೇ ಪೊಲೀಸರು ಅವಕಾಶ ನೀಡುತ್ತಾರೆ. ಮದುವೆ ಮನೆಗೆ ನೋಡೆಲ್ ಅಧಿಕಾರಿ ಬಂದಾಗ ಪಾಸ್ ರಹಿತರು ಇದ್ದರೆ, ಮಿತಿಗಿಂತ ಹೆಚ್ಚಿನ ಜನ ಇದ್ದರೆ ಕೇಸು ದಾಖಲಿಸಲಾಗುತ್ತದೆ ಎನ್ನುವುದು ಸದ್ಯದ ನಿಯಮ. ಆಮಂತ್ರಣ ಪತ್ರಿಕೆ ನೀಡುವಾಗ ಆಧಾರ್ ಸಂಗ್ರಹಿಸುವ ಸಂಕಷ್ಟ ಒಂದೆಡೆಯಾದರೆ ಸೀಮಿತ ಪಾಸ್ ಪಡೆದು ಆಮಂತ್ರಿತರಿಗೆ ಬರಲು ಸಾಧ್ಯವಾಗದೇ ಇದ್ದಾಗ ಬದಲಿಗೆ ಬೇರೆಯವರೂ ಬರುವಂತಿಲ್ಲ ಎಂಬ ಸಮಸ್ಯೆಯೂ ಇಲ್ಲಿದೆ.
Related Articles
Advertisement
ಅನುಮತಿ ಪಡೆಯಲು ಮದುವೆಗೆ ಆಗಮಿಸುವ 50 ಜನರ ಹೆಸರಿನ ಪಟ್ಟಿಯನ್ನಷ್ಟೇ ಸಂಬಂಧಪಟ್ಟ ಅಧಿಕಾರಿಗೆ ನೀಡಬೇಕು. ಅವರಿಗೆ ಪಾಸ್ ನೀಡಲಾಗುವುದು. ಆಧಾರ್ ಕಡ್ಡಾಯ ಅಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ “ಆಧಾರ್ ಕಡ್ಡಾಯ ಅಲ್ಲ, ಹೆಸರು ಮಾತ್ರ ನೀಡಿದರೆ ಸಾಕು’ ಎಂದು ಸೂಚಿಸಲಾಗುವುದು. – ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ