ಮಧುಗಿರಿ: ರಾಜ್ಯದಲ್ಲಿ ಅಂತರ್ಜಲ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆ ಅಧಿಸೂಚಿತ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿ(ಬೋರ್‌ವೆಲ್) ಕೊರೆಯದಂತೆ ಕರ್ನಾಟಕ ಅಂತರ್ಜಲ ಪ್ರಧಿಕಾರ ಅಧಿಸೂಚನೆ ಹೊರಡಿಸಿದೆ. ನಿಯಮ ಉಲ್ಲಂ ಸಿದರೆ ಕ್ರಿಮಿನಲ್ ಮೊಕದ್ದಮೆ ಹಾಗೂ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ರಾಜ್ಯಾದ್ಯಂತ ಕೊಳವೆಬಾವಿ ಕೊರೆಯಲು ಸರ್ಕಾರದ ಅನುಮತಿ ಅಗತ್ಯವೆಂದು ಸರ್ಕಾರ ಘೋಷಿಸಿ ಆದೇಶಿಸಿದ್ದು, ಜಿಲ್ಲಾವಾರು ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಜಿಲ್ಲೆಯ ಮಧುಗಿರಿ ಸೇರಿದ್ದು, ಇನ್ಮುಂದೆ ತಾಲೂಕಿನ ರೈತರು ಹಾಗೂ ಸಾರ್ವಜನಿಕರು ಕೊಳವೆಬಾವಿ ಕೊರೆಸಲು ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ರಾಜ್ಯ ಅಂತರ್ಜಲ ಅಧಿನಿಯಮ 2011 ಮತ್ತು ನಿಯಮಾವಳಿ 2012 ರ ಅನುಸಾರ ಅತಿ ಯಾದ ಅಂತರ್ಜಲ ಬಳಕೆಯಲ್ಲಿ ಜಿಲ್ಲೆಯ ಮಧುಗಿರಿ, ಕೊರಟಗೆರೆ, ಚಿಕ್ಕನಾಯ್ಕನಹಳ್ಳಿ, ತುಮಕೂರು ಹಾಗೂ ತಿಪಟೂರು ತಾಲೂಕು ಮಂಚೂಣಿಯಲ್ಲಿದೆ. ಈ ಕ್ಷೇತ್ರಗಳಿಗೆ ರಾಜ್ಯ ಅಂತರ್ಜಲ ಪ್ರಾಧಿಕಾರದ ಈ ಆದೇಶ ಅನ್ವಯವಾಗಲಿದೆ.
ಆ.5, 2020 ರಿಂದ ಜಾರಿಗೆ ಬರುವಂತೆ ಈ ಬಗ್ಗೆಪ್ರಾಧಿಕಾರದ ನಿರ್ದೇಶನಾಲಯ ಹಾಗೂ ಸದಸ್ಯ ಕಾರ್ಯದರ್ಶಿಗಳ ಕಚೇರಿಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಈ ಕಾನೂನಿನಂತೆ ಮುಂಬರುವ ದಿನಗಳಲ್ಲಿ ಕೊಳವೆಬಾವಿ ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪ್ರಸ್ತುತ ಬಳಕೆಯಲ್ಲಿರುವ ಬಳಕೆ ದಾರರು ತಮ್ಮ ಹೆಸರನ್ನು ಅಂತರ್ಜಲ ಪ್ರಾಧಿಕಾರದಲ್ಲಿಕಡ್ಡಾಯವಾಗಿ ನೋಂದಾಯಿಸಿ ಕೊಳ್ಳಬೇಕು. ಅನುಮತಿ ಪಡೆಯ ದಿದ್ದರೆ ಯಾವುದೇ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನರ್ಹರಾಗುತ್ತಾರೆ. ಅನುಮತಿ ಪಡೆಯದೆ ನೂತನವಾಗಿ ಕೊಳವೆಬಾವಿಕೊರೆಯಲು ಮುಂದಾಗುವ ಭೂ ಮಾಲೀಕರು ಹಾಗೂ ಯಂತ್ರದ ಮಾಲೀಕರ ಮೇಲೆ ಅಧಿನಿಯ ಮದ ಪ್ರಕರಣ 32ರಂತೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರೈತ ಕತ್ತು ಹಿಸುಕುವ ಆದೇಶಗಳು: ಆನಂದ್ : ಈ ಸರ್ಕಾರದ ಗೊಂದಲದ ಆದೇಶಗಳು ರೈತರಕತ್ತು ಹಿಸುಕುತ್ತಿವೆ. ಅಂತರ್ಜಲ ಅಭಿವೃದ್ಧಿಗೆ ಅಗತ್ಯವಾದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವ ಯೋಗ್ಯತೆಯಿಲ್ಲದೆ ಇಂಥಕೆಲಸಕ್ಕೆ ಕೈ ಹಾಕಬಾರದು. ಅಂತರ್ಜಲ ಬಳಕೆಯಾಗದಿದ್ದರೆ ಬಯಲು ಸೀಮೆಯರೈತರು ಹೇಗೆ ಕೃಷಿ ಮಾಡಬೇಕು. ಈಗಿರುವ ಕಚೇರಿಗಳಿಲ್ಲಿ ರೈತರನ್ನು ಸತಾಯಿಸುತ್ತಿದ್ದು, ಈಗ ಕೊಳವೆಬಾವಿಯ ಅನುಮತಿಗಾಗಿ ರೈತರ ಜೀವ ಹಿಂಡುತ್ತಾರೆ. ಇಂಥ ತಲೆಕೆಟ್ಟ ಆದೇಶಗಳು ರೈತರಿಗೆ ಮಾರಕವೇ ಹೊರತು, ಒಳಿತಲ್ಲ.
ಕೆಲವೊಮ್ಮೆ ತುರ್ತು ಕೊಳವೆಬಾವಿಯ ಅಗತ್ಯವಿದ್ದಲ್ಲಿ ಈ ಆದೇಶ ಮಾನಹಕ್ಕುಗಳ ಉಲ್ಲಂಘನೆಗೂ ಕಾರಣವಾಗಲಿದೆ ಎಂದು ಜಿಲ್ಲಾ ರೈತಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಆನಂದಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.
ಕೊಳವೆಬಾವಿಯ ನೀರುಕುಡಿಯಲು ಯೋಗ್ಯವಲ್ಲ.ಆದಷ್ಟೂ ಇದನ್ನು ಶುದ್ಧೀಕರಿಸಬೇಕು.ಅಲ್ಲದೆ ಅತಿಯಾದ ನೀರು ಬಳಕೆಯಿಂದ ಅಂತರ್ಜಲ ಕುಸಿಯುತ್ತದೆ. ಇದಕ್ಕಾಗಿ ಸರ್ಕಾರ ಈ ಆದೇಶ ಮಾಡಿದ್ದು, ಎಲ್ಲಬಳಕೆದಾರರು ಕಾನೂನಿನಂತೆ ಹೆಸರು ನೋಂದಾಯಿಸಲು ಮುಂದಾಗಬೇಕು.
– ರಾಮದಾಸು, ಎಇಇ, ಗ್ರಾಮೀಣ ಕುಡಿಯುವ ನೀರು ಇಲಾಖೆ, ಮಧುಗಿರಿ.
-ಮಧುಗಿರಿ ಸತೀಶ್