Advertisement
ಕಲ್ಪತರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 102 ಹಾಸ್ಟೆಲ್‌ಗಳಲ್ಲಿ 40 ಕಡೆ ಮಾತ್ರ ಖಾಯಂ ವಾರ್ಡನ್‌ಗಳ ನೇಮಕವಾಗಿದೆ. ಬರೋಬ್ಬರಿ 62 ವಸತಿ ನಿಲಯಗಳ ವಾರ್ಡನ್ ಹುದ್ದೆಯೇ ಖಾಲಿ ಇದೆ.102 ವಸತಿ ಶಾಲೆಗಳಿಗೆ ಕಾವಲುಗಾರನ ನೇಮಕ ಇದ್ದರೂ ಭದ್ರತೆಯೇ ಮರೀಚಿಕೆಯಾಗಿದೆ. ನಿಲಯದ ಕಟ್ಟಡಗಳಲ್ಲಿ ನೆಪಮಾತ್ರಕ್ಕೆ ಸಿಸಿಟಿವಿ ಲಭ್ಯವಿದ್ದರೂ ನಿರ್ವಹಣೆಯೇ ಇಲ್ಲದಾಗಿ ಭಯವೇ ಇಲ್ಲದಾಗಿದೆ.
Related Articles
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಹಾಸ್ಟೇಲ್‌ಗೆ ಬೇಟಿನೀಡಿ ಮೆಟ್ರಿಕ್ ಪೂರ್ವ ಮತ್ತು ನಂತರದ ನಿಲಯದ ವಾರ್ಡನ್, ಕಾವಲುಗಾರಿಗೆ ನೋಟಿಸ್ ಜಾರಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್‌ನ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಸಿಸಿಟಿವಿ ನಿರ್ವಹಣೆ ಮತ್ತು ರಾತ್ರಿ ಪಾಳೇಯದ ಲೋಪಗಳ ಬಗ್ಗೆ ಮಾಹಿತಿ ಕಲೆಹಾಕಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
Advertisement
358 ವಿದ್ಯಾರ್ಥಿಗಳ ರಕ್ಷಣೆ ಯಾರದ್ದು..?ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ-50, ಬಾಲಕರ ವಿದ್ಯಾರ್ಥಿ ನಿಲಯ-70, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ-90, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ-90 ಮತ್ತು ಅಕ್ಕಿರಾಂಪುರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ-58 ಜನ ಸೇರಿ ಒಟ್ಟು358 ಮಂದಿ ವಿದ್ಯಾರ್ಥಿಗಳ ಬಳಿಯು ಮೊಬೈಲ್ ಸೌಲಭ್ಯವಿದೆ. ತಡರಾತ್ರಿ 1 ಗಂಟೆವರೆಗೆ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ಪರಿಣಾಮ ಇಂತಹ ಸಮಸ್ಯೆ ಸೃಷ್ಟಿ ಆಗುತ್ತಿವೆ. ಸರಕಾರ ಮತ್ತು ಇಲಾಖೆ ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ನಿಲಯದ ಭದ್ರತೆ ಮತ್ತು ಕರ್ತವ್ಯ ಲೋಪ ಎಸಗಿದ ವಾರ್ಡನ್-ಕಾವಲುಗಾರ ಮೇಲೆ ಕ್ರಮ ಆಗುತ್ತದೆ. ಆರೋಪಿಯ ಮೇಲೆ ಪೋಕ್ಸೋ ಮತ್ತು ಅಕ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ನಿರ್ವಹಣೆ ಮತ್ತು ರಾತ್ರಿ ಪಾಳೇಯದ ಭದ್ರತೆಯ ಬಗ್ಗೆ ತನಿಖೆ ನಡೆಯುತ್ತೆ. ತುಮಕೂರು ಜಿಲ್ಲೆಯ 102 ಹಾಸ್ಟೆಲ್‌ನಲ್ಲಿ 62 ಕಡೆ ವಾರ್ಡನ್ ಹುದ್ದೆಯೇ ಖಾಲಿಯಿದೆ. ಹುದ್ದೆಭರ್ತಿಗೆ ಈಗಾಗಲೇ ಸರಕಾರಕ್ಕೆ ಮನವಿ ಮಾಡಲಾಗಿದೆ.
ಕೃಷ್ಣಪ್ಪ.ಎಸ್. ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ. ತುಮಕೂರು