Advertisement
ಪ್ರಸ್ತುತ ಕಾಮಗಾರಿಯ ಹಿನ್ನೆಲೆಯಲ್ಲಿ ಡ್ಯಾಂನ ನೀರನ್ನು 6 ಮೀ. ನಿಂದ 4ಮೀ. ಗೆ ಇಳಿಕೆ ಮಾಡಿಕೊಡಲಾಗಿದೆ. ಡ್ಯಾಂನಲ್ಲಿ ನೀರು ತುಂಬಿರುವುದರಿಂದ ಕಬ್ಬಿಣದ ಮೆಸ್, ಕಪ್ಪು ಕಲ್ಲು, ದೊಡ್ಡ ಗಾತ್ರದ ಕಾಂಕ್ರೀಟ್ ತುಂಡುಗಳನ್ನು ಬಳಸಿಕೊಂಡು ಗೇಬಿಯನ್ ವಾಲ್ ಮಾದರಿಯಲ್ಲಿ ತಡೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ.
ತುಂಬೆ ಡ್ಯಾಂನ ಜಾಕ್‌ವೆಲ್ ಹಾಗೂ ಪಂಪ್‌ಹೌಸ್ ಇರುವ ಜಾಗದಿಂದ ಕೇವಲ 15-20 ಮೀಟರ್ ಅಂತರದಲ್ಲಿ 2018ರಲ್ಲಿ ತಡೆಗೋಡೆಯ ಮಣ್ಣು ಕುಸಿದು ಪಂಪ್ ಹೌಸ್ ಅಪಾಯಕ್ಕೆ ಸಿಲುಕಿತ್ತು. ಹೀಗಾಗಿ ಮರಳಿನ ಚೀಲಗಳನ್ನು ಜೋಡಣೆ ಮಾಡಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು. ತಡೆಗೋಡೆ ಕುಸಿದ ಭಾಗಕ್ಕೆ ಹಲವು ಬಾರಿ ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದು, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂದು ಸರಕಾರಕ್ಕೆ 10 ಕೋ. ರೂ. ಗಳ ಪ್ರಸ್ತಾವ ಸಲ್ಲಿಸಿದ್ದರೂ ಅನುದಾನ ಬಿಡುಗಡೆಗೊಂಡಿರಲಿಲ್ಲ. ಜತೆಗೆ ಅಂದಿನ ಸರಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ತಡೆಗೋಡೆ ಮತ್ತೆ ಕುಸಿದರೆ ಇಡೀ ಪಂಪ್‌ಹೌಸ್ ನೀರು ಪಾಲಾಗುವ ಅಪಾಯವೂ ಎದುರಾಗಿತ್ತು. ಹೀಗಾಗಿ ಅನಿವಾರ್ಯವಾಗಿ ತಡೆಗೋಡೆ ನಿರ್ಮಾಣಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
Related Articles
Advertisement
ನೀರು ಏರಿಸಲು ಸೂಚನೆತುಂಬೆ ಡ್ಯಾಂ ಬಳಿ ತಡೆಗೋಡೆ ಕುಸಿದಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಜಲ್ಲಿಕಲ್ಲು ಸಮಸ್ಯೆಯಿಂದ ತೊಂದರೆಯಾಗಿದೆ. ನೀರು ಇಳಿಕೆಯಿಂದ ರೈತರಿಗೆ ತೊಂದರೆಯಾಗುವ ಕುರಿತು ಈಗಾಗಲೇ ಪಾಲಿಕೆ ಆಯುಕ್ತರ ಜತೆ ಚರ್ಚೆ ನಡೆಸಿ 6 ಮೀ.ಗೆ ನೀರು ಏರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
–ಜಯಾನಂದ ಅಂಚನ್, ಮೇಯರ್, ಮನಪಾ ಮಂಗಳೂರು ನದಿ ಪಾತ್ರದ ರೈತರಿಗೆ ನಷ್ಟ ತುಂಬೆ ಡ್ಯಾಂನಲ್ಲಿ ಪ್ರಸ್ತುತ ನೀರು ಕಡಿಮೆ ಮಾಡಿರುವ ಪರಿಣಾಮ ನದಿಪಾತ್ರದ ರೈತರಿಗೆ ಸಾಕಷ್ಟು ತೊಂದರೆಯಾಗಿದ್ದು, ರೈತರು ತಮ್ಮ ಪಂಪ್‌ಸೆಟ್ ಗಳನ್ನು 6 ಮೀ. ನೀರು ಸಾಮರ್ಥ್ಯಕ್ಕೆ ಜೋಡಿಸಿದ್ದು, ಆದರೆ ಈಗ ಏಕಾಏಕಿ ನೀರು ಕಡಿಮೆ ಮಾಡಿರುವುದರಿಂದ ರೈತರ ಪಂಪುಗಳಿಗೆ ನೀರು ಸಿಗುತ್ತಿಲ್ಲ. ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಜೋಡಣೆಯಲ್ಲಿ ವ್ಯತ್ಯಾಸ ಮಾಡಬೇಕಿದ್ದು, ಆಗ ಮತ್ತೆ 6 ಮೀ.ಗೆ ಏರಿಸಿದರೆ ರೈತರು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.
-ಎಂ. ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು, ತುಂಬೆ ಡ್ಯಾಂ ಸಂತ್ರಸ್ಥರ ಹೋರಾಟ ಸಮಿತಿ *ಕಿರಣ್ ಸರಪಾಡಿ