Advertisement
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಉಡುಪಿ ನಗರಕ್ಕೆ ಶಿರೂರು ಬಜೆ ಬಳಿಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಮೇ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಒಂದು ವೇಳೆ ಸಮಸ್ಯೆಯಾದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ 10 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ.ಉಡುಪಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ವಾರಾಹಿ ನದಿನಿಂದ ನೀರು ಪೂರೈಕೆಗೆ 116 ಕೋ. ರೂ. ಹಾಗೂ 60 ಕೋ. ರೂ.ಯ 2 ಯೋಜನೆಗಳ ಅಡಿಯಲ್ಲಿ ಅಂದಾಜು 45 ಎಂಎಲ್‌ಡಿ ನೀರು ಪಡೆಯಲಾಗುತ್ತಿದ್ದು, ಮಾರ್ಚ್ -ಎಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಬಜೆ ಡ್ಯಾಂನಲ್ಲಿ ಹೂಳು ತೆಗೆಯುವ ಪ್ರಸ್ತಾವವಿದ್ದು, ಅದಕ್ಕೆ ಅಂದಾಜು 5 ಕೋಟಿ ರೂ.ಗಳ ಅವಶ್ಯವಿದೆ. ಆದರೆ ಇದಕ್ಕೆ ಸರಕಾರ ಯಾವುದೇ ಹಣ ನೀಡುವ ಅಗತ್ಯವಿಲ್ಲ. ಡ್ಯಾಂನಲ್ಲಿ ಹೂಳು ಜತೆಗೆ ಮರಳು ಕೂಡ ಇದೆ. ಆ ಮರಳನ್ನು ಮಾರಾಟ ಮಾಡಿದರೆ ಹೂಳೆತ್ತುವ ಖರ್ಚನ್ನು ಸರಿದೂಗಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಯವರು ಪ್ರಸ್ತಾವನೆ ಸಲ್ಲಿಸಿದ್ದು, ಹೂಳು ತೆಗೆಯುವವರಿಗೆ ಟೆಂಡರ್ ಕರೆಯಲಾಗುವುದು ಎಂದರು.