Advertisement
ಬಳಿಕ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಮತ್ತು ಮುಂದಿನ ಮಳೆಗಾಲಕ್ಕೆ ಯಾವುದೇ ಅನಾಹುತಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸದಸ್ಯರು ಮತ್ತು ಸಾರ್ವಜನಿಕರು ಸಮರ್ಪಕವಾಗಿ ಸ್ಪಂದಿಸಬೇಕು. ಪುರಸಭೆ ಆಡಳಿತವೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಮೂಲಕ್ಕೆ ಕೊರತೆ ಇಲ್ಲ. ಆದರೆ ಅವುಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಆ ಕಾರಣದಿಂದಾಗಿ ಮಲ್ಲಾರು ಮತ್ತು ಅಚ್ಚಾಲು ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಬರ ಎದುರಾಗಿದೆ ಎಂದು ಅರುಣ್ ಶೆಟ್ಟಿ ಪಾದೂರು ದೂರಿದರು. ಪುರಸಭಾ ಸದಸ್ಯ ಶಾಬು ಸಾಹೇಬ್ ಬಾವಿ ನಿರ್ಮಾಣಕ್ಕೆ ಸ್ವಂತ ಜಮೀನನ್ನು ನೀಡಲು ಸಿದ್ಧªನಿದ್ದೇನೆ ಎಂದರು. ಶಾಂತಲತಾ ಶೆಟ್ಟಿ ಮಲ್ಲಾರು ಭಾಗದ ಕೆರೆಯನ್ನು ಅಭಿವೃದ್ಧಿ ಪಡಿಸುವಂತ ಮನವಿ ಮಾಡಿದರು. ಮಹಮ್ಮದ್ ಇಮ್ರಾನ್ ಕಿಂಡಿ ಅಣೆಕಟ್ಟಿನ ದುರಸ್ತಿ ಬಗ್ಗೆ ಮನವಿ ಮಾಡಿದರು. ಎಸಿ ಶ್ಲಾಘನೆ
ಫಕೀರನಕಟ್ಟೆ ವಾರ್ಡ್ ಸದಸ್ಯ ಶಾಬು ಸಾಹೇಬ್ ಅವರು ಸಾರ್ವಜನಿಕರ ಕುಡಿಯುವ ನೀರಿಗೆ ಬಾವಿ ರಚಿಸಲು ತನ್ನ ಸ್ವಂತ ಭೂಮಿಯನ್ನು ನೀಡುವುದಾಗಿ ತಿಳಿಸಿ ಒಂದು ವರ್ಷವಾಗಿದೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಾಜಿ ಉಪಾಧ್ಯಕ್ಷ ಕೆ. ಎಚ್. ಉಸ್ಮಾನ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಎಸಿ ಶ್ಲಾ ಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ರಾಯಪ್ಪ ಅವರಿಗೆ ಸೂಚನೆ ನೀಡಿದರು.
Related Articles
ಕಳೆದ ಬಾರಿ ಮಳೆಗಾಲದಲ್ಲಿ ಸುಬ್ಬಯ್ಯತೋಟದ ಬಳಿ ನೀರು ನಿಂತು ಸಮಸ್ಯೆ ಉಂಟಾಗಿತ್ತು ಎಂದು ಅನಿಲ್ ಕುಮಾರ್ ಗಮನ ಸೆಳೆದರು. ಭಾರತ್ ನಗರ ಕಾಲನಿಯಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು ಸ್ಥಳೀಯರು ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅಮೀರ್ ಮಹಮ್ಮದ್ ಒತ್ತಾಯಿಸಿದರು. ಕಾಪು ತೆಂಕಪೇಟೆಯಲ್ಲಿ ಚರಂಡಿ ಬ್ಲಾಕ್ ಆಗಿದ್ದು, ವಾಹನ ಸಂಚಾರದ ವೇಳೆ ರಸ್ತೆಯಲ್ಲಿನ ಕೊಳಚೆ ನೀರು ದೇವಸ್ಥಾನದ ಒಳಗೆ ನುಗ್ಗುತ್ತದೆ ಹರೀಶ್ ನಾಯಕ್ ತಿಳಿಸಿದರು. ಮಳೆಗಾಲಕ್ಕೆ ಮುನ್ನ ಎಚ್ಚೆತ್ತು ಕೊಳ್ಳಬೇಕು ಎಂದು ಸದಸ್ಯ ಅರುಣ್ ಶೆಟ್ಟಿ ಹೇಳಿದರು. ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ರಾಯಪ್ಪ ಅವರಿಗೆ ಎಸಿ ಡಾ| ಮಧುಕೇಶ್ವರ್ ಸೂಚನೆ ನೀಡಿದರು.
Advertisement
ಪುರಸಭೆಗೆ ಬರುವ ರಸ್ತೆ ಸರಿಯಾಗಿಲ್ಲ ಪುರಸಭೆ ಕಾರ್ಯಾಲಯ ಮತ್ತು ಪುರಭವನ ಹಾಗೂ ಸರ್ವೇ ಇಲಾಖೆಯ ಕಚೇರಿಗೆ ಬರುವ ರಸ್ತೆಯ ದುಃಸ್ಥಿತಿ ಬಗ್ಗೆ ಸದಸ್ಯ ನಾಗೇಶ್ ಸುವರ್ಣ ಸಭೆಯ ಗಮನಸೆಳೆದರು. ಇದಕ್ಕೆ ಸದಸ್ಯರೂ ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರಾಯಪ್ಪ ಅವರು, ಅನುದಾನದ ಕೊರತೆಯಿಂದ ಕಾಮಗಾರಿಗೆ ತಡೆಯುಂಟಾಗಿದ್ದು, ಶೀಘ್ರ ಕಾಮಗಾರಿ ನಡೆಸುವುದಾಗಿ ತಿಳಿಸಿದರು. ತ್ಯಾಜ್ಯ ನಿರ್ವಹಣಾ ಶುಲ್ಕ ಏರಿಕೆಗೆ ಆಕ್ಷೇಪ
ಕಾಪು ಪುರಸಭೆಯಲ್ಲಿ ಬೇರೆಲ್ಲೂ ಇಲ್ಲದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಶುಲ್ಕ ವಿಧಿಸಲಾಗುತ್ತಿದೆ. ಹಿಂದಿಗಿಂತ ನಾಲ್ಕು ಪಟ್ಟು ಶುಲ್ಕ ಹೆಚ್ಚಿಸಲಾಗಿದೆ. ಈ ಶುಲ್ಕದಿಂದ ಜನಸಾಮಾನ್ಯರ ಜತೆಗೆ ಕಸವನ್ನು ನೀಡದವರಿಗೂ ತೊಂದರೆ ಉಂಟಾಗಿದೆ ಎಂದು ಸದಸ್ಯರು ಮತ್ತು ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಶುಲ್ಕ ಕಡಿತ ಮಾಡಿ, ದರ ಪರಿಷ್ಕರಿಸುವಂತೆ ಎಸಿ ಅವರು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಈಗಾಗಲೇ ಶುಲ್ಕ ಕಟ್ಟಿರುವವರ ಹೆಚ್ಚುವರಿ ಶುಲ್ಕವನ್ನು ಮುಂದಿನ ಸಾಲಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆಯೂ ಸಲಹೆ ನೀಡಿದರು. ಅಧಿಕಾರಿ ಅಮƒತೇಶ್ ಮೊದ ಲಾದವರು ಉಪಸ್ಥಿತರಿದ್ದರು.