Advertisement
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಜವುಳಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ನಿಗಮದ ವತಿಯಿಂದ ಮಂಗಳೂರಿನಲ್ಲಿ ಈ ಮೇಳ ಜ. 3ರವರೆಗೆ ನಡೆಯಲಿದೆ. ರಾಷ್ಟ್ರ ಮತ್ತು ರಾಜ್ಯದ ವಿವಿಧೆಡೆಗಳಿಂದ 50 ಮಂದಿ ಕುಶಲಕರ್ಮಿಗಳು ಭಾಗವಹಿಸಿದ್ದಾರೆ. ಇಂತಹ ಪ್ರದರ್ಶನ-ಮಾರಾಟ ವ್ಯವಸ್ಥೆಯಿಂದಾಗಿ ಕರಕುಶಲ ಉತ್ಪನ್ನಗಳನ್ನು ಜನತೆಗೆ ಪರಿಚಯಿಸುವುದರೊಂದಿಗೆ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶವೂ ಇದೆ ಎಂದರು.
ವ್ಯವ ಸ್ಥಾಪಕ (ಮಾರುಕಟ್ಟೆ) ಮಹಮ್ಮದ್ ಸಲಾವುದ್ದೀನ್, ಕೆಎಸ್‌ಎಚ್‌ಡಿಸಿಎಲ್ ನಿರ್ದೇಶಕಿ ರಾಜೀವಿ ಆರ್. ರೈ, ಸಂಸ್ಥೆಯ ಅಧಿಕಾರಿ ಜಗದೀಶ್, ಮಂಜುನಾಥ್ ಮತ್ತಿತರರಿದ್ದರು. ಜ. 3 ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯ ತನಕ ಪ್ರದರ್ಶನ ನಡೆಯಲಿದೆ.