ಬಂಟ್ವಾಳ: ಕೊರೊನಾ ತಡೆಯಲು ಗ್ರಾ.ಪಂ.ಗಳ ಮಟ್ಟದಲ್ಲಿ ರಚನೆ ಯಾಗಿರುವ ಟಾಸ್ಕ್ ಪೋರ್ಸ್ ಸಮಿತಿಗಳ ಕಾರ್ಯವೈಖರಿಯ ಪರಿಶೀಲ ನೆಯ ದೃಷ್ಟಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಮೂರು ಗ್ರಾ.ಪಂ.ಗಳಲ್ಲಿ ಸಭೆ ನಡೆಸಿದರು.
ತಾಲೂಕಿನ ನರಿಕೊಂಬು, ಗೋಳ್ತ ಮಜಲು, ಬಾಳ್ತಿಲ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆರೋಗ್ಯ ಇಲಾಖೆ, ಆಶಾ ಕಾರ್ಯ ಕರ್ತೆಯರ ಮನೆಯ ಭೇಟಿಯ ಕುರಿತು ಶಾಸಕರು ಮಾಹಿತಿ ಸಂಗ್ರಹಿ ಸಿದರು. ಜನರಿಗೆ ಆಹಾರಕ್ಕೆ ತೊಂದರೆ ಯಾಗಿ ದೆಯೇ, ಗ್ರಾಮೀಣ ಭಾಗದ ಕೈಗಾರಿಕೆಗಳು ನಿಂತಿರುವುದರಿಂದ ಕಾರ್ಮಿಕರು, ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರು.
ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯು ತ್ತಿದ್ದು, ಅದಕ್ಕೆ ಯಾವುದೇ ತೊಂದರೆಯಾಗಬಾರದು ಎಂದರು. ಜನರಿಗೆ ತಿನ್ನುವ ಆಹಾರಕ್ಕೆ ತೊಂದರೆ ಯಾಗದಂತೆ ಪ್ರತಿಯೊಬ್ಬರೂ ಕೆಲಸ ನಿರ್ವಹಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಆಲಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಶಾಸಕರ ಆಪ್ತ ಸಹಾಯಕ ದಿನೇಶ್, ಬಂಟ್ವಾಳ ಆಹಾರ ಶಿರಸ್ತೇದಾರ್ ಶ್ರೀನಿವಾಸ್, ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು, ಗೊಳ್ತಮಜಲು ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀ ಎಸ್., ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಟuಲ, ಆಯಾಯ ಗ್ರಾ.ಪಂ.ಗಳ ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಗೋಳ್ತಮಜಲು ಗ್ರಾ.ಪಂ.ಸಭೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಭಾಗವಹಿಸಿದ್ದರು.
ಎಂದಿನಂತೆಯೇ ಬಂದ್
ತಾಲೂಕಿನಲ್ಲಿ ಎಂದಿನಂತೆ ಬಂದ್‌ನ ಪರಿಸ್ಥಿತಿ ಮುಂದುವರಿದಿದ್ದು, ದಿನಸಿ ಅಂಗಡಿಗಳು, ತರಕಾರಿ ಮಳಿಗೆಗಳು, ಕೃಷಿ ಯಂತ್ರೋಪಕರಣ ಮಳಿಗೆಗಳು ತೆರೆದಿದ್ದು, ಮಧ್ಯಾಹ್ನದ ವರೆಗೆ ವ್ಯವಹಾರ ನಡೆಸಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಜೋರಾಗಿಯೇ ನಡೆಯುತ್ತಿದ್ದು, ಯಾವುದೇ ತೊಂದರೆ ಯಾಗದಂತೆ ತಹಶೀಲ್ದಾರ್ ಸಹಿತ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಆಹಾರ ಇಲಾಖೆಯ ನಿರ್ದೇಶನದಂತೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನಡೆಸುತ್ತಿದ್ದಾರೆ.