Advertisement

ರಾಷ್ಟ್ರೀಯ ವಾಲಿಬಾಲ್‌ ಪಂದ್ಯದಲ್ಲಿ ಕನ್ನಡಿಗರ ಸಾಧನೆ

01:14 PM Sep 25, 2017 | |

ಹುಣಸೂರು: ಹುಣಸೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬಾಲಕರ/ ಬಾಲಕಿಯರ ವಾಲಿಬಾಲ್‌ ಕ್ರೀಡಾಕೂಡದಲ್ಲಿ ಲೀಗ್‌ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಹುಣಸೂರು ಶಾಸ್ತ್ರಿ ವಿದ್ಯಾಸಂಸ್ಥೆಯ ದಕ್ಷಿಣ ಮಧ್ಯಕ್ಷೇತ್ರದ ಕರ್ನಾಟಕದ ಬಾಲಕರ ತಂಡ ಮಹಾರಾಷ್ಟ್ರದ ವಿರುದ್ಧ ಪ್ರಥಮ ಸ್ಥಾನ ಪಡೆಯಿತು.

Advertisement

ವಿದ್ಯಾಭಾರತಿ ಅಖೀಲ ಭಾರತೀಯ ಶಿಕ್ಷಾ ಸಂಸ್ಥಾನ್‌, ವಿದ್ಯಾಭಾರತಿ ಕರ್ನಾಟಕ-ಶಾಸ್ತ್ರಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹುಣಸೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿವಿಧ ವಯೋಮಿತಿಯ ಬಾಲಕರ/ಬಾಲಕಿಯರ ವಾಲಿಬಾಲ್‌ ಪಂದ್ಯಾವಳಿಯಲ್ಲಿ ದೇಶದ 29 ರಾಜ್ಯಗಳಿಂದ ಒಟ್ಟು 42 ತಂಡಗಳು ಭಾಗವಹಿಸಿದ್ದವು. ಲೀಗ್‌ನಲ್ಲಿ ಒಟ್ಟು 99 ಪಂದ್ಯಾಟಗಳು ನಡೆಯಿತು.

ಬಾಲಕರ ವಿಭಾಗ: 17ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹುಣಸೂರು ಶಾಸ್ತ್ರಿ ವಿದ್ಯಾಸಂಸ್ಥೆಯ ದಕ್ಷಿಣ ಮಧ್ಯಕ್ಷೇತ್ರದ ಕರ್ನಾಟಕ ತಂಡ ಮಹಾರಾಷ್ಟ್ರ ತಂಡದ ವಿರುದ್ಧದ ರೋಚಕ ಹಣಾಹಣಿಯಲ್ಲಿ 3-1 ಅಂತರದಲ್ಲಿ ಜಯಸಾಧಿಸಿ ಪ್ರಥಮ ಸ್ಥಾನ ಪಡೆದರೆ, ಮಹಾರಾಷ್ಟ್ರದ ನಾಗಪುರ್‌ ತಂಡವು ದ್ವೀತಿಯ ಸ್ಥಾನ, ಪಶ್ಚಿಮ ಉತ್ತರ ಪ್ರದೇಶ ತಂಡ ಮೂರನೇ ಸ್ಥಾನಕ್ಕೆ ತಪ್ತಿಪಟ್ಟುಕೊಂಡಿತು.

19ವರ್ಷದೊಳಗಿನ ಬಾಲಕರ ವಿಭಾಗದ ಆಂಧ್ರ ಪ್ರದೇಶದ ವಿಶಾಖ ಪಟ್ಟಣಂನ ಬಿ.ವಿ.ಕೆ ಕಾಲೇಜಿನ ತಂಡವು 3-0 ಅಂತರದಲ್ಲಿ ತಮಿಳುನಾಡಿನ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದರೆ, ತಮಿಳುನಾಡು ತಂಡ ದ್ವೀತಿಯ ಹಾಗೂ ಪಶ್ಚಿಮ ಉತ್ತರ ಪ್ರದೇಶ ತಂಡ ತತೀಯ ಸ್ಥಾನ ಪಡೆಯಿತು. 14ವರ್ಷದೊಳಗಿನ ವಿಭಾಗದಲ್ಲಿ ಪಶ್ಚಿಮ ಉತ್ತರ ಪ್ರದೇಶದ ತಂಡ 3-1 ಅಂತರದಲ್ಲಿ ಜಯಗಳಿಸಿ ಪ್ರಥಮ ಸ್ಥಾನ ಪಡೆದರೆ, ಪೂರ್ವ ಉತ್ತರ ಪ್ರದೇಶ ದ್ವೀತಿಯ, ಕರ್ನಾಟಕದ ಮಂಗಳೂರು ತಂಡ ತೃತೀಯ ಸ್ಥಾನಕ್ಕೆ ತಪ್ತಿಪಟ್ಟುಕೊಂಡಿದೆ.

ಬಾಲಕಿಯರ ವಿಭಾಗ: 19ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ತಮಿಳುನಾಡು ತಂಡ 3-0 ಅಂತರದಲ್ಲಿ ಜಯಗಳಿಸಿ ಪ್ರಥಮ, ವೆಸ್ಟ್‌ ಉತ್ತರ ಪ್ರದೇಶ ತಂಡ ದ್ವೀತಿಯ ಹಾಗೂ ಮಧ್ಯಪ್ರದೇಶ ತಂಡ ತತೀಯ ಸ್ಥಾನ ಪಡೆಯಿತು. 17ವರ್ಷದೊಳಗಿನ ವಿಭಾಗದಲ್ಲಿ ಮಹಾರಾಷ್ಟ್ರ ತಂಡ 3-1 ಅಂತರದಲ್ಲಿ ಕರ್ನಾಟಕದ ಪುತ್ತೂರಿನ ವಿವೇಕಾನಂದ ಕನ್ನಡ ಶಾಲೆ ವಿರುದ್ದ ಜಯಗಳಿಸಿ ಪ್ರಥಮ ಸ್ಥಾನ ಪಡೆದರೆ, ಪುತ್ತೂರು ಶಾಲೆ ದ್ವೀತಿಯ, ತಮಿಳುನಾಡು ತಂಡ ತೃತೀಯ ಸ್ಥಾನ ಗಿಟ್ಟಿಸಿತು.

Advertisement

14ವರ್ಷದೊಳಗಿನ ವಿಭಾಗದಲ್ಲಿ ಮಹಾರಾಷ್ಟ್ರದ ತಂಡ ಪ್ರಥಮ ಸ್ಥಾನ ಪಡೆದಿದೆ. ಅಂತಿಮ ಪಂದ್ಯದಲ್ಲಿ ಕರ್ನಾಟಕದ ಬೆಂಗಳೂರು ತಂಡವನ್ನು 3-0 ಅಂತರದಲ್ಲಿ ಮಣಿಸಿತು. ಕರ್ನಾಟಕ ದ್ವೀತಿಯ, ತಮಿಳುನಾಡು ತತೀಯ ಸ್ಥಾನಕ್ಕೆ ತಪ್ತಿಪಟ್ಟುಕೊಂಡಿತು. 

ಭಾನುವಾರ ನಡೆದ ಸಮಾರೋಪದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಎಸ್‌.ಎ.ರಾಮದಾಸ್‌, ವಿದ್ಯಾಭಾರತಿ ಖೇಲ್‌(ಕ್ರೀಡಾ) ಸಂಯೋಜಕರಾದ ಕಿಶೋರ್‌ ಚವ್ಹಾಣ್‌, ಸಹ ಸಂಯೋಜಕ ಅಲೋಕ್‌ ಚೌದರಿ, ಕಷ್ಣಶಂಕರ್‌ ಶರ್ಮ, ಖೇಲ್‌ ಅಧಿಕಾರಿ ಆನಂದಶೆಟ್ಟಿ, ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಪ್ರಮುಖ್‌ ಜಗದೀಶ್‌, ಜಿಲ್ಲಾ ಪ್ರಮುಖ್‌ ರಘುವೀರ್‌, ಶಾಸ್ತ್ರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಸ್‌.ರಾಧಕಷ್ಣ ಸೇರಿದಂತೆ ಅನೇಕ ಗಣ್ಯರು ವಿಜೇತ ತಂಡಗಳಿಗೆ ಟ್ರೋಫಿ ಮತ್ತು ಬಹುಮಾನ ವಿತರಿಸಿದರು.

ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ಗೆ ಹುಣಸೂರು ಶಾಸ್ತ್ರಿ ತಂಡ ಆಯ್ಕೆ: 17ವರ್ಷದೊಳಗಿನ ಬಾಲಕರ ಹುಣಸೂರು ಶಾಸ್ತ್ರಿ ವಿದ್ಯಾಸಂಸ್ಥೆಯ ದಕ್ಷಿಣ ಮಧ್ಯಕ್ಷೇತ್ರದ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದು, ಎಸ್‌ಜಿಎಫ್ಐ (ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್ ಇಂಡಿಯಾ)ಗೆ ಆಯ್ಕೆಯಾಗಿದ್ದು, ಮುಂಬರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಭಾರತಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

* ಸಂಪತ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next