Advertisement

ಗುಣಮಟ್ಟದ ಶಿಕ್ಷಣದಿಂದ ಸಾಧನೆ ಸಾಧ್ಯ: ಪಾಟೀಲ

05:19 PM Sep 11, 2021 | Team Udayavani |

ಹುಮನಾಬಾದ: ಕ್ಷೇತ್ರದ ಎಲ್ಲಾ ಶಾಲೆಗಳಲ್ಲಿನ ಮಕ್ಕಳಿಗೆ ಶಿಕ್ಷಕರು ಗುಣಮಟ್ಟ ಶಿಕ್ಷಣದ ಮೂಲಕ ಸಾಧನೆ ಮಾಡಬೇಕು. ಶಾಲಾ ಮುಖ್ಯಸ್ಥರು ಯಾವುದೇ ಕಾರಣಕ್ಕೂ ಮಕ್ಕಳ ಮೂಲ ಸೌಕರ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಯಾವುದೇ ಕುಂದು-ಕೊರತೆಗಳು ಇದ್ದರೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

Advertisement

ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ 60ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯವಾಗಿದೆ. ನಮ್ಮ ಭಾಗದ ವಿದ್ಯಾರ್ಥಿಗಳ ಭವಿಷ್ಯ ಇಲ್ಲಿನ ಶಿಕ್ಷಕರ ಮೇಲಿದೆ.

ಕೊರೊನಾ ಸಂದರ್ಭದಲ್ಲಿ ಕೂಡ ಶಿಕ್ಷಕರು ಸರ್ಕಾರದ ಮಾರ್ಗಸೂಚಿ ಅನುಸಾರ ಸೇವೆ ಸಲ್ಲಿಸಿದ್ದಾರೆ. ಆದರೆ, ಆನ್‌ಲೈನ್‌ ಶಿಕ್ಷಣಕ್ಕಿಂತ ವರ್ಗಕೋಣೆಯಲ್ಲಿ ನಡೆಯುವ ತರಗತಿಗಳು ಹೆಚ್ಚಿನ ಪ್ರಭಾವ ಬಿರುತ್ತದೆ. ಕಲ್ಯಾಣಕರ್ನಾಟಕ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ371(ಜೆ)  ಕಾಯ್ದೆ ಜಾರಿಯಾಗಿದ್ದು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ಸೀಟುಗಳುಲಭ್ಯವಾಗುತ್ತಿವೆ ಎಂದರು.

ಈ ಸಂದರ್ಭದಲ್ಲಿ ಮೃತಪಟ್ಟ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅದೇ ರೀತಿ ನಿವೃತ್ತಿ ಹೊಂದಿದ, ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಗುರುತಿಸಿ ಸನ್ಮಾನಿಸಲಾಯಿತು. ಕೆ.ವೀರಾರೆಡ್ಡಿ ಬರೆದ ಕಾದಂಬರಿ ಪುಸ್ತಕ ಬಿಡುಗಡೆ ಮಾಡಲಾಯಿತು.

ಪಟ್ಟಣದ ಹಿರೇಮಠದ ರೇಣುಕ ವೀರ ಗಂಗಾಧರ ಶಿವಾಚಾರ್ಯರು, ವಿಧಾನ ಪರಿಷತ್‌ ಸದಸ್ಯ ಡಾ|ಚಂದ್ರಶೇಖರ ಪಾಟೀಲ್‌, ಪುರಸಭೆ ಅಧ್ಯಕ್ಷೆಕಸ್ತೂರಬಾಯಿ ಪರಸನೋರ,  ತಹಶೀಲ್ದಾರ್‌ ನಾಗಯ್ಯ ಹಿರೇಮಠ, ಪುರಸಭೆ ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಪ್ರಾಧ್ಯಾಪಕಿ ಡಾ| ಜಯದೇವಿ ಗಾಯಕವಾಡ, ತಾಪಂ ಇಒ ವೈಜಿನಾಥ ಫುಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗುಂಡಪ್ಪ ಸಿದ್ದಣ್ಣಗೋಳ, ಓಂಕಾರ ರೂಗನ, ರವೀಂದ್ರರೆಡ್ಡಿ ಮಾಲಿಪಾಟೀಲ್‌, ಶೇಖ ಮಹೇಬೂಬ್‌ ಪಟೇಲ್‌, ಮುರಘೇಂದ್ರ ಸಜ್ಜನಶಟ್ಟಿ, ಮಾರುತಿ ಪೂಜಾರಿ, ಉಮಾಕಾಂತ ಕೆ, ಶರದಕುಮಾರ ನಾರಾಯಣಪೇಟ್ಕರ್‌, ಅಂಬಿಕಾ ಚಳಕಾಪೂರೆ, ಸಂಗಮ್ಮ ಬಮ್ಮಣಿ, ಭುವನೇಶ್ವರಿ, ಭೀಮಣ್ಣ ದೇವಣಿ, ಸಂತೋಷ ಆಚಾರ್ಯ, ಶಿವರಾಜ ಮೇತ್ರೆ, ಶಿವಕುಮಾರ ಪಾರಶಟ್ಟಿ, ಮಹಾವೀರ ಜಮಖಂಡಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next