Advertisement

ಅಂಬಿಗರ ಚೌಡಯ್ಯನವರ ಆದರ್ಶ ಪರಿಪಾಲಿಸಿ

04:43 PM Jan 23, 2021 | Team Udayavani |

ಹುನಗುಂದ: 12ನೆಯ ಶತಮಾನದ ಶಿವಶರಣ ರಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟ ವಚನಗಳ ಮೂಲಕ ಹೆಸರಾದ ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಪ್ರಾಯವಾದ ಬದುಕು ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ತಹಶೀಲ್ದಾರ್‌ ಬಸವರಾಜ ನಾಗರಾಳ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನದ ಮೂಲಕ ನಾಡಿಗೆ ತಿಳಿಸಿ ಹೆಸರಾದವರು. ಬಸವಣ್ಣವರು ಕಟ್ಟಿದ ಮೊದಲ ಸಂಸತ್ತಿನ ಸಮಾನ ಭೂಮಿಕೆಯಲ್ಲಿ ನಿಂತುಕೊಂಡು ಅವರ ಸರಿಸಮಾನ ಶಿವಶರಣರ ವಚನಗಳಿಗಿಂತ ವಿಶಿಷ್ಟ ಶೈಲಿಯಲ್ಲಿ ವಚನ ರಚಿಸಿದ್ದಾರೆ. ಅವರ ಪ್ರತಿಯೊಂದು ವಚನಗಳಲ್ಲಿ ಅಂದಿನ ಗೊಡ್ಡು ಸಂಪ್ರದಾಯವನ್ನು ವಚನದ ಮೂಲಕ ಕಳಚುವ ಬಹುದೊಡ್ಡ ಪ್ರಯತ್ನ ಮಾಡುವುದರ ಜತೆಗೆ ಸಮಾಜ ಶುದ್ಧೀಕರಣಕ್ಕಾಗಿ ಕಾರ್ಯ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಅಣಬೆ ಬೇಸಾಯದಿಂದ ಆದಾಯ ಹೆಚ್ಚಳ: ರಾಮರಾವ್‌

ಅಂಬಿಗರ ಸಮಾಜದ ತಾಲೂಕು ಅಧ್ಯಕ್ಷ ವಿಠಲ ಹಿರೇಹೊಳ್ಳಿ ಮಾತನಾಡಿ, ಅಂದಿನ ಸಮಾಜ ಮತ್ತು ಧರ್ಮಗಳಲ್ಲಿರುವ ಲೋಪದೋಷಗಳನ್ನು ಗ್ರಾಮೀಣ ಭಾಷೆಯಲ್ಲಿ ವಚನಬರೆಯುವ ಮೂಲಕ ಧರ್ಮ ಸುಧಾರಿಸುವ ಕಾರ್ಯ ಮಾಡಿದ ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯ ಶ್ಲಾಘನೀಯ ಎಂದರು.

ಅಂಬಿಗರ ಸಮುದಾಯದ ಮುಖಂಡರಾದ ಲಕ್ಷ್ಮಪ್ಪ ಹುನಗುಂದ, ಸಂಗಪ್ಪ ಕಪನೂರ, ಸೋಮಪ್ಪ ಹುನಗುಂದ, ವಿಠಲ ಬಾರಕೇರ, ಶಿವಪುತ್ರಪ್ಪ ಹುನಗುಂದ, ಮಾರುತಿ ಹುನಗುಂದ, ವಿಜಯ ದಳವಾಯಿ, ರಾಮು ಹುನಗುಂದ, ರವಿ ಹುನಗುಂದ, ದೇವೇಂದ್ರ ಹುನಗುಂದ, ಹನಮಂತ ಬಾರಕೇರಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next