Advertisement

ಪರಿಪೂರ್ಣ ತಂಡ ಪ್ರಯತ್ನ: ರೋಹಿತ್‌

07:30 AM Mar 10, 2018 | Team Udayavani |

ಕೊಲಂಬೊ: ಬಾಂಗ್ಲಾದೇಶ ವಿರುದ್ಧ ನಾವು ಪರಿಪೂರ್ಣ ತಂಡ ಪ್ರಯತ್ನದಿಂದ ಆಡಿದ್ದರಿಂದ ಗೆಲುವು ಸಾಧಿಸಲು ಯಶಸ್ವಿಯಾದೆವು ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ. ಉತ್ತಮ ಬೌಲಿಂಗ್‌ನಿಂದಾಗಿ ಭಾರ ತವು ಬಾಂಗ್ಲಾದೇಶದ ಮೊತ್ತವನ್ನು 139 ರನ್ನಿಗೆ ನಿಯಂತ್ರಿಸಿತ್ತು. ಆಬಳಿಕ ಶಿಖರ್‌ ಧವನ್‌ ಅವರ ಅರ್ಧ ಶತಕದಿಂದಾಗಿ ಭಾರತ ಇನ್ನೂ 1.2 ಓವರ್‌ ಬಾಕಿ ಇರುವಾಗಲೇ ಜಯ ಭೇರಿ ಬಾರಿಸಿತ್ತು. ಇದೊಂದು ಶ್ರೇಷ್ಠ ನಿರ್ವಹಣೆ. ಇದನ್ನು ನಾವು ನಿರೀಕ್ಷೆ ಮಾಡಿದ್ದೆವು. ಪಂದ್ಯದ ಆರಂಭದಿಂದ ಕೊನೆಯ ತನಕವೂ ನಾವು ಗೆಲುವಿಗಾಗಿ ಹೋರಾಡಿದ್ದೇವೆ. ಹಾಗಾಗಿ ಇದೊಂದು ತಂಡ ಪ್ರಯತ್ನವೆಂದು ಹೇಳಬಹುದು ಎಂದು ರೋಹಿತ್‌ ಶರ್ಮ ತಿಳಿಸಿದರು.

Advertisement

ಮೊದಲ ಪಂದ್ಯಕ್ಕೆ ಹೋಲಿಸಿದರೆ ಈ ಪಂದ್ಯದಲ್ಲಿ ಬೌಲರ್‌ಗಳ ನಿರ್ವ ಹಣೆಯಲ್ಲಿ ಏನಾದರೂ ಅಭಿವೃದ್ಧಿ ಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾವು ಏನು ತಪ್ಪು ಮಾಡಿದ್ದೇವೆ ಎಂಬ ಬಗ್ಗೆಯೇ ಗಮನ ಹರಿಸಿದ್ದೆವು.ಲೆಂತ್‌ ಹೊಡೆತಕ್ಕೆ ಹೊಡೆ ಯುವ ಆಲೋಚನೆ ಮತ್ತು ದೀರ್ಘ‌ ಬೌಂಡರಿ ಬಾರಿಸಲು ಪ್ರಯತ್ನಿಸಿದರು ಎಂದು ರೋಹಿತ್‌ ವಿವರಿಸಿದರು.

ಬೌಲರ್‌ಗಳು ತಮ್ಮ ಕಾರ್ಯ ಯೋಜನೆಯನ್ನು ಸಮರ್ಥ ರೀತಿ ಯಲ್ಲಿ ಕಾರ್ಯಗತಗೊಳಿಸಿದ್ದಾರೆ. ಬಾಂಗ್ಲಾವನ್ನು ಒತ್ತಡದಲ್ಲಿ ಸಿಲು ಕಿಸುವುದು ನಮ್ಮ ಯೋಜನೆ ಯಾಗಿತ್ತು. ಅದರಂತೆ ಸಾಗಿದ್ದೇವೆ. ಮೊದಲ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ನಿರೀಕ್ಷಿತ ನಿರ್ವಹಣೆ ನೀಡಿರಲಿಲ್ಲ ಎಂದ ರೋಹಿತ್‌ ನಮ್ಮ ಕ್ಯಾಚ್‌ ಮತ್ತು ಫೀಲ್ಡಿಂಗ್‌ ಮಟ್ಟ ಸುಧಾರಿಸಬೇಕಾಗಿದೆ ಎಂದರು.

ಕ್ಯಾಚ್‌ ಪಡೆಯುವುದರಲ್ಲಿ ನಾವು ಇನ್ನಷ್ಟು ಉತ್ತಮ ನಿರ್ವಹಣೆ ನೀಡ ಬೇಕಾಗಿದೆ. ಒಳ್ಳೆಯ ಫೀಲ್ಡಿಂಗ್‌ ತಂಡವಾಗಿ ರೂಪುಗೊಳ್ಳುವುದು ನನ್ನ ಆಸೆಯಾಗಿದೆ. ಆವಾಗ ತಂಡದ ನಿರ್ವ ಹಣೆ ಉತ್ತಮಗೊಳ್ಳಲಿದೆ ಎಂದು ರೋಹಿತ್‌ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next