ನವೋದ್ಯಮ ಅಥವಾ ಸ್ಟಾರ್ಟ್‌ಅಪ್ ಎಂದು ಕರೆಯಿಸಿಕೊಳ್ಳುವ ಕ್ಷೇತ್ರಕ್ಕೆ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರೇ ಪ್ರಧಾನ ಕೇಂದ್ರ. ಕನ್ನಡಿಗರಾಗಿರುವ ನಮಗೆ ಇದು ಹೆಮ್ಮೆಯ ವಿಚಾರವೂ ಹೌದು. ಕೊರೊನಾ ಅನಂತ ರದ ಕಾಲದಲ್ಲಿ ಹಲವು ವಿಚಾರಗಳಲ್ಲಿ ಧನಾತ್ಮಕ ಬದಲಾವಣೆಯಾಗಿದೆ. ಅದಕ್ಕೆ ಅನುಸಾರವಾಗಿ ಕೆಲವೊಂದು ನವೋದ್ಯಮಗಳು ಬೆಂಗಳೂರಿನಲ್ಲಿ ತಲೆ ಎತ್ತಿದವು. ಆದರೆ ಅಷ್ಟೇ ವೇಗದಲ್ಲಿ ಬಾಗಿಲು ಹಾಕಿಕೊಂಡವು ಎನ್ನುವುದು ಹಗಲಿನಷ್ಟೇ ಸತ್ಯವಾದ ಸಂಗತಿ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸಚಿವ ಸಂಪುಟ ಹೊಸ ಸ್ಟಾರ್ಟ್‌ಅಪ್ ನೀತಿಗೆ ಅನುಮೋದನೆ ನೀಡಿದೆ. 2022-2027ರ ಅವಧಿಯಲ್ಲಿ 10 ಸಾವಿರ ನವೋದ್ಯಮಗಳು ಅಸ್ತಿತ್ವಕ್ಕೆ ಬರಲಿವೆ ಎನ್ನುವುದು ರಾಜ್ಯ ಸರಕಾರದ ಲೆಕ್ಕಾಚಾರ. ನಮ್ಮ ದೇಶದ ಒಟ್ಟು ಲೆಕ್ಕಾಚಾರ ನೋಡಿದರೆ ಈ ವರ್ಷದ ಸೆಪ್ಟಂಬರ್ ವೇಳೆಗೆ ನಮ್ಮ ದೇಶದಲ್ಲಿ ಸರಿ ಸುಮಾರು 75 ಸಾವಿರ ನವೋದ್ಯಮಗಳು ಇದ್ದರೆ ಆ ಪೈಕಿ 13 ಸಾವಿರ ಬೆಂಗಳೂರಿನಲ್ಲಿಯೇ ಇವೆ.
ಆದರೆ ಎಷ್ಟು ದಿನಗಳ ವರೆಗೆ ಪ್ರತಿಯೊಂದು ವ್ಯವಸ್ಥೆ-ವ್ಯವಹಾರ ರಾಜ್ಯದ ರಾಜಧಾನಿಯನ್ನೇ ಕೇಂದ್ರೀಕರಿಸಿ ಇರಬೇಕು ಎನ್ನುವುದು ಪ್ರಧಾನ ಪ್ರಶ್ನೆಯಾಗಿದೆ. ಪ್ರತಿಯೊಂದು ವಿಚಾರಕ್ಕೂ ರಾಜ್ಯದ ರಾಜಧಾನಿಯೇ ಕೇಂದ್ರವಾಗಿ ವ್ಯವಹಾರ ನಡೆಸಬೇಕು ಎಂದಾದರೆ ಈ ಪ್ರದೇಶದ ಮೇಲೆ ಹಲವು ರೀತಿಯಲ್ಲಿ ಒತ್ತಡಗಳು ಉಂಟಾಗುತ್ತವೆ. ಅದನ್ನು ಗಮನದಲ್ಲಿ ಇರಿಸಿಕೊಂಡು, ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಸಹಿತ ಮಧ್ಯಮ, ಸಣ್ಣ ಪೇಟೆ- ಪಟ್ಟಣಗಳನ್ನು ಕೇಂದ್ರೀಕರಿಸಿ ಹೊಸ ಸ್ಟಾರ್ಟ್ ಅಪ್ ನೀತಿ ರೂಪಿಸಲಾಗಿದೆ ನಿಜ.ಆದರೆ ಬೆಂಗಳೂರಿನಿಂದ ಹೊರಗೆ ನವೋದ್ಯಮ ಬೆಳೆಯಬೇಕು ಎಂದಾದರೆ ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳಿಗೆ ಅದರ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್ ಸ್ಥಾಪಿಸಬೇಕು ಎಂಬುದರ ಬಗ್ಗೆ ಉತ್ಸಾಹ ಹೊಂದಿರುವವರಿಗೆ ಮಾಹಿತಿ ನೀಡುವುದು, ಅದಕ್ಕೆ ತರಬೇತಿ ನೀಡಬೇಕಾಗಿದ್ದರೆ ಅದಕ್ಕೆ ಬೇಕಾದ ಮಾಹಿತಿ ಮತ್ತು ವ್ಯವಸ್ಥೆಗಳನ್ನು ಅವರೂ ಹೊಂದಿರಬೇಕಾಗುತ್ತದೆ. ಇದರಿಂದಾಗಿ ಹೂಡಿಕೆ ಮಾಡುವವರಿಗೆ ಕ್ಷಿಪ್ರವಾಗಿ ಉದ್ದೇಶಿತ ಸಾಧನೆ ಮಾಡಲೂ ನೆರವಾಗುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಚನೆ ಮಾಡಿರುವ ನವೋದ್ಯಮ ಕೋಶ ಹೆಚ್ಚು ಕಾರ್ಯಪ್ರವೃತ್ತವಾಗಬೇಕಾಗುತ್ತದೆ. ನಮ್ಮ ದೇಶ ಮತ್ತು ರಾಜ್ಯದ ಮೂಲ ಆದಾಯ ವ್ಯವಸ್ಥೆಗೆ ಕೃಷಿಯೇ ಮೂಲ ಆಧಾರವಾಗಿ ಇರುವು ದರಿಂದ ಅದಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಬಂಧಿಸಿದ ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿಯಾಗಿ ನಡೆಸಲು ಕೋಶ ನೆರವಾಗ ಬೇಕು. ಹೊಸ ನೀತಿ ಪ್ರಕಟಗೊಂಡ ಬಳಿಕ ರಾಜ್ಯ ಸರಕಾರದ ಕೋಶಕ್ಕೆ ಮುಂದಿನ ದಿನಗಳಲ್ಲಿ ಹೊಣೆ ಹೆಚ್ಚಲಿದೆ. ಸದ್ಯ ಬೆಂಗಳೂರು ಹೊರತುಪಡಿ ಸಿದ ನಗರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಉತ್ಸಾಹಿಗಳಿಗೆ ನೆರವಾಗ ಬೇಕು. ಇನ್ನು ನಮ್ಮ ದೇಶಕ್ಕೆ ಸಂಬಂಧಿಸಿದಂತೆ ನವೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2021ರಲ್ಲಿ 21,198 ಕೋಟಿ ರೂ. ಹೂಡಿಕೆ ಮಾಡಲಾಗಿ ದ್ದರೆ ಪ್ರಸಕ್ತ ವರ್ಷದ 11 ತಿಂಗಳಲ್ಲಿ ಅದು ದ್ವಿಗುಣಗೊಂಡಿದ್ದು 37, 924 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ನೀತಿ ರೂಪಿ ಸಿದ್ದು ಹೆಗ್ಗಳಿಕೆಯಾಗದೆ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸು ವುದೂ ಅಷ್ಟೇ ಪ್ರಧಾನವಾಗಿ ಇರಬೇಕಾಗಿದೆ.