Advertisement
16 ಅಂಕಗಳಿಗೆ ಕಠಿನ ಪ್ರಶ್ನೆಗಳು, 40 ಅಂಕಗಳಿಗೆ ಸಾಧಾರಣ ಕಠಿನ ಪ್ರಶ್ನೆಗಳು ಮತ್ತು 16 ಅಂಕಗಳಿಗೆ ಸುಲಭ ಪ್ರಶ್ನೆಗಳನ್ನು ನಿಗದಿ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಸೂಚನೆ ನೀಡಿದೆ.
ಅಂಕಗಳ ಹಂಚಿಕೆಗೂ ಮಾನದಂಡ ನಿಗದಿ ಪಡಿಸಲಾಗಿದೆ. ಸ್ಮರಣೆ 16 ಅಂಕ (ಶೇ. 20), ತಿಳಿವಳಿಕೆ 32 (ಶೇ. 40), ಅನ್ವಯ 16 (ಶೇ. 20), ಚಿತ್ರರಚನಾ ಕೌಶಲ 12 (ಶೇ. 15), ಉನ್ನತ ಮಟ್ಟದ ಆಲೋಚನಾ ಕೌಶಲ 4 (ಶೇ. 5) ಅಂಕಗಳನ್ನು ನಿಗದಿ ಪಡಿಸಲಾಗಿದೆ.
1 ಅಂಕದ ಬಹು ಆಯ್ಕೆಯ 8 ಪ್ರಶ್ನೆಗಳು, ಅತೀ ಕಿರು ಉತ್ತರದ 1 ಅಂಕದ 8 ಪ್ರಶ್ನೆಗಳು ಇರುತ್ತವೆ. ಇನ್ನು , ಕಿರು ಉತ್ತರ ಬಯಸುವ 2 ಅಂಕದ 8 ಪ್ರಶ್ನೆಗಳಿಗೆ ಒಟ್ಟು 16 ಅಂಕಗಳು, ದೀರ್ಘ ಉತ್ತರ ಬಯಸುವ 3 ಅಂಕದ 9 ಪ್ರಶ್ನೆಗಳಿಗೆ 27 ಅಂಕಗಳು, ದೀರ್ಘ ಉತ್ತರ ಬಯಸುವ 4 ಅಂಕದ 4 ಪ್ರಶ್ನೆಗಳಿಗೆ 16 ಅಂಕಗಳನ್ನು ಮತ್ತು ದೀರ್ಘ ಉತ್ತರ ಬಯಸುವ 5 ಅಂಕದ 1 ಪ್ರಶ್ನೆ ಹೀಗೆ ವಿದ್ಯಾರ್ಥಿಗಳು ವಿಜ್ಞಾನದ 80 ಅಂಕಗಳಿಗಾಗಿ ಒಟ್ಟು 38 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಜತೆಗೆ ಚಿತ್ರ ರಚನ ಕೌಶಲದಡಿ ಕೇಳಬಹುದಾದ 17 ಚಿತ್ರಗಳ ಪಟ್ಟಿಯನ್ನು ಕೂಡ ಕೆಎಸ್‌ಇಎಬಿ ಬಿಡುಗಡೆ ಮಾಡಿದೆ.