Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದುವಾಡ ಕೆರೆ ಅವ್ಯವಸ್ಥೆ ನೋಡಿ ನಿಜಕ್ಕೂ ಬೇಸರವಾಯಿತು.15 ಕೋಟಿ ಅನುದಾನದಲ್ಲಿ ಕೇವಲ ಎರಡು ಗುಂಡಿ ಅಗೆದಿದ್ದಾರೆ. ಕೆರೆಯ ಅಗಲ ಹಾಗೂ ಆಳ ಹೆಚ್ಚಿಸಲು ಪ್ರಾಮುಖ್ಯತೆ ಕೊಡದೆ ವಾಕ್‌ಪಾಥ್ ಹೆಚ್ಚಿಸಿದ್ದಾರೆ ಅಷ್ಟೇ. ಸ್ಟೋರೇಜ್ ಕೆಪಾಸಿಟಿ ಹೆಚ್ಚಳ ಮಾಡಿಲ್ಲ. ಇದನ್ನೆಲ್ಲ ಗಮನಿಸಿದರೆ ಇಲ್ಲಿಯೂ 40 ಪರ್ಸೆಂಟೇಜ್ ದಂಧೆ ತಪ್ಪಿಲ್ಲ ಎಂದು ಕಾಣುತ್ತಿದೆ ಎಂದು ದೂರಿದರು.
Related Articles
Advertisement
ಈ ಹಿಂದೆ ದಾವಣಗೆರೆಯನ್ನು ನೋಡಿಹೋದವರು ನಮ್ಮೂರನ್ನು ಇದೇ ರೀತಿ ಅಭಿವೃದ್ಧಿ ಮಾಡಬೇಕು ಎನ್ನುತ್ತಿದ್ದರು. ಆದರೆ, ಇವಾಗ ದಾವಣಗೆರೆ ರಸ್ತೆ ಗುಂಡಿಗಳ ನಗರವಾಗಿದೆ. ನಮ್ಮ ಅ ಧಿಕಾರವಧಿಯಲ್ಲಿ ಎಲ್ಲಾ ಖಾತೆಗೂ ಸಮರ್ಪಕ ಅನುದಾನ ಹಂಚಿಕೆಮಾಡಿ ಕೆಲಸ ಮಾಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಎಲ್ಲವನ್ನೂ ಹಾಳುಮಾಡಿದೆ. ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಅ ಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲ. ಚಾಟಿ ಹಿಡಿದವರೇ ಮೇಯಲು ಹೊರಟರೆ ಉಳಿದವರು ಯಾವ ದಾರಿ ಹಿಡಿಯಲು ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಸದಸ್ಯ ಎ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಗಣೇಶ್ ಹುಲ್ಲುಮನಿ ಇತರರು ಇದ್ದರು.