Advertisement
ಕೊನೆಯ ದಿನದ ಕಲಾಪದಲ್ಲಿ ಪರ್ಸೆಂಟೇಜ್ ವಿಷಯ ಸಿಎಂ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ ನಡುವೆ ಜಟಾಪಟಿಗೆ ಸಾಕ್ಷಿಯಾಯಿತು. ಕೇಂದ್ರದ ಯೋಜನೆಯಲ್ಲಿ ಮೋದಿ ಸರ್ಕಾರದ ಕಮಿಷನ್ ಎಷ್ಟು ಎಂಬ ಸಿಎಂ ಹೇಳಿಕೆಗೆ ಶೆಟ್ಟರ್ ತಿರುಗೇಟು ನೀಡಿದರು.
Related Articles
Advertisement
ರಾಜಣ್ಣ ಹಾಗೂ ಸಿಎಂ ಆರೋಪದಿಂದ ಆಕ್ರೋಶಿತರಾದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಗೂಂಡಾ ಸರ್ಕಾರ, 10% ಸರ್ಕಾರಕ್ಕೆ ಧಿಕ್ಕಾರದ ಘೋಷಣೆ ಕೂಗಿದರು.
ಪರಸ್ಪರ ಕಾಲೆಳೆದ ಸಿಎಂ, ಶೆಟ್ಟರ್:
ಗದ್ದಲ, ಕೋಲಾಹಲದ ನಡುವೆಯೇ ಸಿಎಂ ಸಿದ್ದರಾಮಯ್ಯ, ಮೈಸೂರಿನಲ್ಲಿಯೇ ಈ ಬಾರಿ ಬಿಜೆಪಿ ಗೆಲ್ಲಲ್ಲ ಎಂದು ಸ್ವತಃ ನಾನೇ ಪ್ರಧಾನಿ ಬಳಿ ಹೇಳಿದ್ದೇನೆ, ಇದಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಸಾಕ್ಷಿಯಾಗಿದ್ದಾರೆ. ಮತ್ತೆ ನಾವೇ ಆಡಳಿತ ಪಕ್ಷವಾಗಿ ನಾವೇ ಸದನಕ್ಕೆ ಬರ್ತೀವಿ. 5 ವರ್ಷ ಅಧಿಕಾರಾವಧಿ ಯಶಸ್ವಿಯಾಗಿ ಪೂರೈಸಿದ್ದೇವೆ.
ಅದಕ್ಕೆ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್, ಮೈಸೂರಲ್ಲಿ ನೀವೇ ಗೆಲ್ಲಲ್ಲ ಎಂದು ಅಲ್ಲಿನ ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಕಾಲೆಳೆದರು.
ಗದ್ದಲದ ನಡುವೆಯೇ ವಿತ್ತ ವಿಧೇಯಕ ಅಂಗೀಕಾರ:
ಪ್ರತಿಪಕ್ಷಗಳ ಕೋಲಾಹಲದ ನಡುವೆಯೇ ಧನವಿನಿಯೋಗ ವಿಧೇಯಕ ಸೇರಿದಂತೆ ಹಲವು ವಿಧೇಯಕ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ತೀವ್ರ ಆಕ್ರೊಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಪ್ರತಿಗಳನ್ನು ಹರಿದೆಸೆದು ಸದನದಿಂದ ಹೊರನಡೆದರು. ಬಳಿಕ ಸ್ಪೀಕರ್ ಕೆಬಿ ಕೋಳಿವಾಡ ಅವರು ಕಲಾಪವನ್ನು ಮುಂದೂಡಿದರು.