Advertisement

ಶೇ. 60 ಮೊದಲ ಮತದಾರರು ಮತ ವಂಚಿತರು

02:58 AM Apr 15, 2019 | sudhir |

ಬೆಂಗಳೂರು: ನಿರಂತರ ಜಾಗೃತಿ ಕಾರ್ಯಕ್ರಮಗಳ ಬಳಿಕವೂ ಮತದಾನಕ್ಕೂ ಮೊದಲೇ ರಾಜ್ಯದಲ್ಲಿ ಅಂದಾಜು ಶೇ. 60ರಷ್ಟು ಯುವ ಮತದಾರರು ತಮ್ಮ ಹಕ್ಕಿನಿಂದ ಹೊರಗುಳಿದಿದ್ದಾರೆ!

Advertisement

ರಾಜ್ಯ ಚುನಾವಣ ಆಯೋಗ ಈಚೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ. ಅದರ ಪ್ರಕಾರ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ 18ರಿಂದ 19 ವರ್ಷದೊಳಗಿನವರ ಸಂಖ್ಯೆ ಒಟ್ಟಾರೆ 10.09 ಲಕ್ಷ. ಆದರೆ 2011ರ ಜನಗಣತಿ ಪ್ರಕಾರವೇ ರಾಜ್ಯದಲ್ಲಿ ಈ ಯುವ ಮತದಾರರ ಸಂಖ್ಯೆ 23.49 ಲಕ್ಷ ಇದೆ. ಅಂದರೆ ಇದೇ ವಯಸ್ಸಿನ ಉಳಿದ 13.40 ಲಕ್ಷ ಯುವಕರು 2019ರ ಸಾರ್ವತ್ರಿಕ ಚುನಾವಣೆ ಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಂತಾಗಿದೆ.

2011ರ ಜನಗಣತಿ ಪೂರ್ತಿಯಾಗಿ ಎಂಟು ವರ್ಷಗಳು ಕಳೆದಿವೆ. 2011ರಲ್ಲಿ 10 ಮತ್ತು 11 ವರ್ಷದ ಬಾಲಕ-ಬಾಲಕಿಯರು ಈಗ ಕ್ರಮವಾಗಿ 18 ಮತ್ತು 19 ವರ್ಷ ತುಂಬಿದವರಾಗಿದ್ದಾರೆ. ಹಾಗಾಗಿ ಈ ಲೋಕ ಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾ ಯಿಸಲು ಅವರೆಲ್ಲ ಅರ್ಹರಾಗಿರುತ್ತಾರೆ. ಅದರಲ್ಲಿ 12,05,718 ಯುವಕರು ಮತ್ತು 11,44,035 ಯುವತಿಯರಿದ್ದಾರೆ. ಈ ಪೈಕಿ ಸುಮಾರು 5 ಲಕ್ಷ ಯುವಕರು ಮತ್ತು 4,75,000 ಯುವತಿಯರು ಮಾತ್ರ ಮತದಾರರ ಪಟ್ಟಿ ಯಲ್ಲಿ ಹೆಸರು ನೋಂದಾಯಿಸಿದ್ದಾರೆ.

ಕೆಲವರು ಕೊನೆಯ ಕ್ಷಣದಲ್ಲಿ ಹೆಸರು ನೋಂದಾಯಿಸಿದ್ದಾರೆ. ಆದರೆ ಅವರಿಗೆ ಮತದಾರರ ಗುರುತಿನ ಚೀಟಿ ದೊರೆತರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಭಾಗ್ಯ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರೂ ಹೋಗಲ್ಲ; ಅವರೂ ಬರಲ್ಲ
ಇಲ್ಲಿ ಕೇವಲ ಯುವ ಮತದಾರರ ಲೋಪ ಇಲ್ಲ. ಚುನಾವಣ ಆಯೋಗದ ದೋಷವೂ ಇದೆ. ಆಯೋಗವು ಕಾಲೇಜುಗಳಲ್ಲಿ ಶಿಬಿರಗಳನ್ನು ಮಾಡಿ ದರೆ ಸಾಕು. ಅಲ್ಲಿಯೇ ಶೇ. 50ರಷ್ಟು ನೋಂದಣಿ ಮಾಡಿಬಿಡಬಹುದು. ಆದರೆ ಇವರು (ಆಯೋಗದವರು) ಕಾಲೇಜುಗಳಿಗೆ ಹೋಗುತ್ತಿಲ್ಲ; ಅವರು (ಕಾಲೇಜು ವಿದ್ಯಾರ್ಥಿಗಳು) ಇವರ ಕಡೆಗೆ ಬರುತ್ತಿಲ್ಲ. ಚುನಾವಣೆ ಬಂದಾಗಲೇ ಎಲ್ಲರೂ ಮಾತನಾಡುತ್ತಾರೆ. ಅನಂತರ ಸುಮ್ಮನಾಗಿಬಿಡುತ್ತಾರೆ ಎಂದು ಚುನಾವಣ ವಿಶ್ಲೇಷಕ ನಿವೃತ್ತ ವಿಂಗ್‌ ಕಮಾಂಡರ್‌ ಪಿ.ಜಿ. ಭಟ್‌ ಬೇಸರ ವ್ಯಕ್ತಪಡಿಸುತ್ತಾರೆ.

Advertisement

–  ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next