ಕೋಟ: ಮುಂದುವರಿದ ಸಮಾಜಗಳು ಇದುವರೆಗೆ ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿದ್ದವು. ಆದರೆ ಇದೀಗ ನಮ್ಮ ಸಂಘಟಿತ ಹೋರಾಟದ ಫಲವಾಗಿ ಕೇಂದ್ರ ಸರಕಾರ ಈ ಸಮಾಜಕ್ಕೆ ಶೇ. 10 ಮೀಸಲಾತಿ ನೀಡಿದೆ. ಇದರಿಂದ ನಮ್ಮ ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಎಂದು ಬೆಂಗಳೂರಿನ ಅಖೀಲ ಭಾರತ ಬ್ರಾಹ್ಮಣ ಫೆಡರೇಶನ್ ಮಹಿಳಾ ವೇದಿಕೆಯ ಅಧ್ಯಕ್ಷೆ ಮಾಲಿನಿ ಹೇಳಿದರು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಬಯಲು ರಂಗ ಮಂದಿರದಲ್ಲಿ ರವಿವಾರ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮತ್ತು ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಥಮ ವಿಪ್ರ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮಾಜದ ಮಹಿಳೆಯರು ಭಾರತೀಯ ಸಂಸ್ಕೃತಿಯನ್ನು ಅತ್ಯಂತ ಆಪ್ತವಾಗಿ ಪಾಲಿಸಿದ್ದಾರೆ. ಇಂದು ನಮ್ಮ ಸಂಸ್ಕಾರ, ಸಂಸ್ಕೃತಿಗಳು ನಶಿಸುತ್ತಿದೆ. ಹೀಗಾಗಿ ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಬ್ರಾಹ್ಮಣ ಸಮಾಜದವರು ಕೊಡುಗೆ ನೀಡಬೇಕಿದೆ. ಇಂದು ನಮ್ಮ ಮಕ್ಕಳು ಸಂಸ್ಕೃತಿ-ಸಂಪ್ರದಾಯದಿಂದ ದೂರವಾಗುತ್ತಿದ್ದು, ಅವರಿಗೆ ಬುದ್ಧಿ ಹೇಳಬೇಕಾದ ಅಗತ್ಯವಿದೆ. ಇದೇ ರೀತಿ ಮುಂದುವರಿದರೆ 2040-45ರ ವೇಳೆ ದೇಶದಲ್ಲಿ ಹಿಂದೂ ಜನಾಂಗ ಶೇ.50ಕ್ಕೆ ಇಳಿಯುವ ಆತಂಕಕಾರಿ ಮಾಹಿತಿ ಸಮೀಕ್ಷೆಗಳಿಂದ ಬಹಿರಂಗಗೊಂಡಿದೆ ಎಂದರು.
ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ರಥಬೀದಿಯಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು. ಬೆಂಗಳೂರಿನ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ “ವಿಪ್ರ ಧ್ವನಿ’ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಸಂತೆಕಟ್ಟೆ ಕಲ್ಯಾಣಪುರದ ನಿವೃತ್ತ ಉಪನ್ಯಾಸಕಿ ಮಹಾಲಕ್ಷ್ಮೀ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ಮಹಿಳೆಯರನ್ನು ಸಮ್ಮಾನಿಸಲಾಯಿತು. ರಾಜ್ಯಮಟ್ಟದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಗೌರವಿಸಲಾಯತು ಹಾಗೂ ಶಕ್ತಿಯುತ ಬ್ರಾಹ್ಮಣಕ್ಕಾಗಿ ವಿಪ್ರ ಮಹಿಳಾ ಸಮ್ಮಿಲನ ವಿಷ¿åದ ಬಗ್ಗೆ ಕಾರ್ಕಳದ ಸಾವಿತ್ರಿ ಮನೋಹರ್ ಮತ್ತು ಪ್ರಸ್ತುತ ಸಮಾಜದಲ್ಲಿ ವಿಪ್ರ ಮಹಿಳೆಯರ ಪಾತ್ರ ವಿಷಯದ ಬಗ್ಗೆ ಸಾಲಿಗ್ರಾಮದ ಯಶೋದಾ ಸಿ. ಹೊಳ್ಳ ಉಪನ್ಯಾಸ ನೀಡಿದರು.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸಾಲಿಗ್ರಾಮ ಗುರುನರಸಿಂಹ ದೇಗುಲದ ಧರ್ಮದರ್ಶಿ ಅನಂತಪದ್ಮನಾಭ ಐತಾಳ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ.ಮಂಜುನಾಥ ಉಪಾಧ್ಯಾಯ, ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾದ ಶಿವರಾಮ ಉಡುಪ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಮಹಿಳಾ ವೇದಿಕೆಯ ಗೌರವಾಧ್ಯಕ್ಷ ಶೋಭಾ ಉಪಾಧ್ಯಾಯ, ಕುಂದಾಪುರ ತಾ| ಬ್ರಾಹ್ಮಣ ಪರಿಷತ್ ಮಹಿಳಾ ವೇದಿಕೆಯ ಅಧ್ಯಕ್ಷೆ ಪವಿತ್ರಾ ಅಡಿಗ, ಕಾರ್ಕಳ ವೇದಿಕೆಯ ಉಪಾಧ್ಯಕ್ಷೆ ಶೋಭಾ ಕಲ್ಕೂರ, ಉಡುಪಿಯ ಕಾರ್ಯದರ್ಶಿ ಪದ್ಮಲತಾ ಎಸ್. , ಸಾಲಿಗ್ರಾಮ ಪ.ಪಂ. ಸದಸ್ಯೆ ಅನುಸೂಯಾ ಆನಂದರಾಮ ಹೇಳೆì ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಮಹಿಳಾವೇದಿಕೆಯ ಅಧ್ಯಕ್ಷೆ ಶಾಂತಾ ಗಣೇಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೂರ್ಣಿಮಾ ಜನಾದìನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.