Advertisement
ಅಂಬಾಗಿಲು-ಪೆರಂಪಳ್ಳಿ- ಮಣಿಪಾಲ ರಿಂಗ್ ರೋಡ್ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಪೆರಂಪಳ್ಳಿ ಚರ್ಚ್ ಮುಂಭಾಗದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ಅಂಬಾಗಿಲು- ಪೆರಂಪಳ್ಳಿ ರೈಲ್ವೇ ಬ್ರಿಡ್ಜ್ ದಾಟಿದ ಬಳಿಕ ಸುಮಾರು 800 ಮೀಟರ್ ಅಂತರದಲ್ಲಿ ಮೊದಲಿಗೆ ಸಿಗುವ ಬಲ ಬದಿಯಿಂದ ರಸ್ತೆ ಮಾರ್ಗವಾಗಿ ತೆರಳಿ ಪೆರಂಪಳ್ಳಿ ಜಂಕ್ಷನ್‌ನ್ನು ಸಂಪರ್ಕಿಸಲು ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.
ಪರ್ಯಾಯ ಮಾರ್ಗದಲ್ಲಿ ಪೊದಾರ್ ಅಂತಾರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆ ಮೂಲಕವಾಗಿ ಸಾಗಿ ಪೆರಂಪಳ್ಳಿ ಜಂಕ್ಷನ್ ತಲುಪಬಹುದು.
Related Articles
Advertisement
ಮಳೆ ಬಂದರೆ ಅಧೋಗತಿ!ಪ್ರಸ್ತುತ ಚರ್ಚ್ ಮುಂಭಾಗದ ರಸ್ತೆ ಕಾಮಗಾರಿ ಮುಗಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲು ಕನಿಷ್ಠವೆಂದರೂ ಒಂದರಿಂದ 2 ತಿಂಗಳಾದರೂ ಬೇಕಾಗುತ್ತದೆ. ಈ ನಡುವೆ ಮಳೆ ಬಂದರೆ ರಸ್ತೆಯಲ್ಲಿ ಸಂಪೂರ್ಣವಾಗಿ ಹದಗೆಡಲಿದ್ದು, ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಲಿದೆ. ರಸ್ತೆಯಲ್ಲಿ ಜಲ್ಲಿಕಲ್ಲು
ಡಾಮರು ಹಾಕಿದ ಜಾಗದಲ್ಲಿ ಡಾಮರು ಕಿತ್ತುಹೋದ ಪರಿಣಾಮ ರಸ್ತೆಯಲ್ಲಿಯೇ ಜಲ್ಲಿಕಲ್ಲುಗಳು ಬಿದ್ದುಕೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ದ್ವಿಚಕ್ರ ವಾಹನ ಸವಾರರ ಗೋಳು ಹೇಳತೀರದು. ವಾಹನಗಳು ಸಂಚರಿಸುವಾಗ ಜಲ್ಲಿಕಲ್ಲುಗಳು ವಾಹನದ ಚಕ್ರದಡಿಗೆ ಸಿಲುಕಿಕೊಂಡು ಪಾದಚಾರಿಗಳ ಮೇಲೆ ಎಸೆಯಲ್ಪಡುತ್ತಿದ್ದು, ಇದು ಅಪಾಯಕಾರಿಯಾಗಿದೆ. ಜತೆಗೆ ವಾಹನಗಳ ಟಯರ್‌ಗಳು ಕೂಡ ಪಂಚರ್ ಆಗುವ ಸಾಧ್ಯತೆಗಳಿವೆ. ಬೈಕ್ ಸ್ಕಿಡ್ ಆಗುತ್ತದೆ
ಸುಮಾರು 1 ಕಿ.ಮೀ. ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಬೈಕ್ ಸ್ಕಿಡ್ ಆಗುತ್ತಿರುವುದರಿಂದ ಹಿಂದೆ ಕುಳಿತವರು ಆಯತಪ್ಪಿ ರಸ್ತೆಗೆ ಬೀಳುತ್ತಿದ್ದಾರೆ. ಕೆಲವರು ರಸ್ತೆಯಲ್ಲಿ ಹೊಂಡ ತಪ್ಪಿಸಲು ಹೋಗಿ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ.
-ಶ್ರೀಕಾಂತ್ ನಾಯಕ್, ಬೈಕ್ ಸವಾರ ಹೊಸ ರಸ್ತೆಗೆ ಕ್ರಮ
ಹೊಸ ರಸ್ತೆ ನಿರ್ಮಾಣಕ್ಕೆ 10 ಲ.ರೂ. ಮಂಜೂರಾಗಿದೆ. ಈಗಾಗಲೇ ಗುತ್ತಿಗೆಯನ್ನು ನೀಡಲಾಗಿದೆ. ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಭಾರೀ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಒಂದು ವೇಳೆ ರಸ್ತೆ ಕಾಮಗಾರಿ ಪ್ರಾರಂಭವಾದರೆ ಮಣಿಪಾಲ ಮಾರ್ಗ ಬಂದ್ ಮಾಡಬೇಕಾಗುತ್ತದೆ. ಸಮಸ್ಯೆ ಬಗ್ಗೆ ಎಂಜಿನಿಯರ್‌ಗಳ ಗಮನಕ್ಕೆ ತಂದಿದ್ದೇನೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಬೇಕೆನ್ನುವ ಆಸೆ ನಮಗೂ ಇದೆ. -ಸೆಲಿನ್ ಕರ್ಕಡ ಸದಸ್ಯೆ, ಮೂಡು ಪೆರಂಪಳ್ಳಿ ವಾರ್ಡ್