Advertisement
ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂ.ನ ಪಡು ಮತ್ತು ಮೂಡುಮಾರ್ನಾಡು ಗ್ರಾಮ ಗಳ ಪೈಕಿ ಪಡುಮಾರ್ನಾಡು ಗ್ರಾಮದ ನಡುವೆಯೇ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುತ್ತದೆ. ಆದರೆ ಈ ಗ್ರಾಮದೊಳಗಿನ ರಸ್ತೆಗಳು ಇನ್ನೂ ಕಾಯಕಲ್ಪಕ್ಕಾಗಿ ಕಾಯುತ್ತಿವೆ.
Related Articles
Advertisement
ಈ ಮಣ್ಣಿನ ರಸ್ತೆಗೆ ಡಾಮರ್ ಇಲ್ಲವೇ ಕಾಂಕ್ರೀಟ್ ಹೊದೆಸಬೇಕೆಂಬ ಈ ಭಾಗದವರ ಹಲವು ದಶಕಗಳ ಕನಸು. ಮಳೆಗಾಲದಲ್ಲಿ ಗುಡ್ಡದ ಬದಿಯಿಂದ ನೀರ ಒರತೆ ಹರಿದುಬರುವ ಕಾರಣ ಇದಕ್ಕೆ ಕಾಂಕ್ರೀಟ್ ಹೊದೆಸುವುದೇ ಸೂಕ್ತ. ಆರಂಭದಲ್ಲಿ ಪ. ಜಾತಿ/ಪಂಗಡಗಳ ಮಂದಿ ವಾಸಿಸುವ ಕೆಲವು ಮನೆಗಳಿರುವುದರಿಂದ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಒಂದಿಷ್ಟು ಭಾಗಕ್ಕೆ ಕಾಂಕ್ರೀಟ್ ಹೊದೆಸಲಾಗಿದೆ. ಪಂಚಾಯತ್‌ಗೆ ಈ ರಸ್ತೆಗೆ ಕಾಯಕಲ್ಪ ನೀಡುವಷ್ಟು ಆರ್ಥಿಕ ಬಲವಿಲ್ಲ.
ವಿದ್ಯುತ್ ಶಕ್ತಿಗೆ “ಬಲವಿಲ್ಲ’ :
ಕೃಷಿ ಪ್ರಧಾನವಾದ ಪೇರಲಕಟ್ಟೆ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೀರಾವರಿ ಪಂಪ್‌ಸೆಟ್‌ಗಳಿವೆ. ಆದರೆ ಇಲ್ಲಿಗೆ ಪೂರೈಕೆಯಾಗುವ ವಿದ್ಯುತ್ ಶಕ್ತಿಗೆ “ಬಲವಿಲ್ಲ’. ವೊಲ್ಟೇಜ್ ಸಮಸ್ಯೆಯಿಂದಾಗಿ ಕೃಷಿಕರಿಗೆ ತೊಂದರೆ ಯಾಗುತ್ತಿದೆ. ವೊಲ್ಟೆàಜ್ ಸಮಸ್ಯೆ ಪಂ. ವ್ಯಾಪ್ತಿಯ ಹಲವೆಡೆ ಕಂಡುಬಂದಿದ್ದು ಶೀಘ್ರ ಪರಿಹರಿ ಸಬೇಕಿದೆ. ಈ ಎರಡೂ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆಯ ಲಾಗಿದೆ ಎನ್ನುತ್ತಾರೆ ಸ್ಥಳೀಯರು.
ಇತರ ಸಮಸ್ಯೆಗಳೇನು?
- ಅಮನೊಟ್ಟು -ಗುತ್ತಬೈಲು-ಅಚ್ಚರಕಟ್ಟ ಮಾರ್ಗ ರಚನೆಗೆ ಸ್ಥಳೀಯರ ಬೇಡಿಕೆಯಿದೆ. ರಸ್ತೆಯಾದರೆ ಸುಮಾರು 8 ಕಿ.ಮೀ. ಸುತ್ತು ಬಳಸು ದಾರಿಯು ಕೇವಲ ಒಂದೂವರೆ ಕಿ.ಮೀ. ದೂರಕ್ಕೆ ಇಳಿಯಲಿದೆ.
- ಇಡೀ ಪಂಚಾಯತ್‌ಗೆ ಒಂದೇ ಪಡಿತರ ಅಂಗಡಿ ಇರುವುದು ಮೂಡುಬಿದಿರೆ ಸರಹದ್ದಿನಲ್ಲಿ. ಗ್ರಾಮಾಂತರ ಮಂದಿ ಬಹಳ ತ್ರಾಸಪಡಬೇಕಾದ ಸ್ಥಿತಿ ಇದೆ. ಆಚ್ಚರಕಟ್ಟದಲ್ಲೂ ಒಂದು ಪಡಿತರ ಅಂಗಡಿಗೆ ವ್ಯವಸ್ಥೆ ಮಾಡುವುದು ಅಗತ್ಯ.
- ಪಡುಮಾರ್ನಾಡು-ಬೆಳುವಾಯಿ ಪಂಚಾಯತ್ ಗಡಿ ಪ್ರದೇಶದಲ್ಲಿರುವ ಪೊಯ್ಯದ ಪಲ್ಕೆ ರಸ್ತೆ ತೀರ ಹದಗೆಟ್ಟು ಹೋಗಿದೆ; ತಡೆಗೋಡೆ ದುರ್ಬಲವಾಗಿದೆ.
- ಪಡುಮಾರ್ನಾಡು ಅಮನೊಟ್ಟು ಮಹಾವೀರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 8 ವರ್ಷಗಳಿಂದ ಅನುದಾನಿತ ಶಿಕ್ಷಕರ ಹುದ್ದೆಗಳೆಲ್ಲವೂ ತೆರವಾಗಿದ್ದು, ಯುವಕ ಮಂಡಲ ಮತ್ತು ಸ್ಥಳೀಯರ ಬೆಂಬಲದಿಂದ ಶಾಲೆ ಜೀವಂತವಾಗಿದೆ. ಶಿಕ್ಷಕರಿಲ್ಲದೆ ಮಕ್ಕಳ ಸಂಖ್ಯೆಯಲ್ಲೂ ಕೊರತೆ ಕಾಣಿಸುತ್ತಿದೆ. ಶಿಕ್ಷಕರ ಕೊರತೆ ನೀಗಿಸುವುದು ಅಗತ್ಯ.
- ಮಾರ್ನಾಡ್ ಕ್ರಾಸ್- ಅಮನೊಟ್ಟು-ಆನೆಗುಡ್ಡೆ ರಸ್ತೆ ಸಮರ್ಪಕವಾಗಿ ರೂಪುಗೊಂಡರೆ, ಬಸ್ ಸಂಚಾರ ಸಾಧ್ಯ. ಇದರಿಂದ ಎರಡು ಕಿ.ಮೀ. ದೂರದ ನಡಿಗೆ ಮುಕ್ತಿ ಸಿಗಬಹುದು.
- ವಸತಿ ರಹಿತರಿಗೆ ನೀಡಲು ಬೇಕಾದಷ್ಟು ಗೋಮಾಳ, ಕುಮ್ಕಿ ಜಾಗವಿದ್ದು, ಈ ಬಗ್ಗೆ ಪಂಚಾಯತ್ ಗಮನಹರಿಸಬಹುದಾಗಿದೆ.
- ಇಲ್ಲಿನ ಹೆಚ್ಚಿನ ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ದೂರಸಂಪರ್ಕ ಇಲಾಖೆ ಗಮನಹರಿಸಬೇಕಿದೆ.