Advertisement
ನಿಸ್ವಾರ್ಥ ಮನೋಭಾವದಿಂದ ನೊಂದವರ ಬಾಳಿಗೆ ಬೆಳಕಾಗುವ ಉತ್ತಮ ಚಿಂತನೆಯನ್ನು, ಸಮಾಜದೆಡೆಗಿನ ತುಡಿತವನ್ನು ವಿದ್ಯಾರ್ಥಿಗಳಲ್ಲಿ ಬಲಪಡಿಸಿ ಮುಂದಿನ ಸುದೃಢ ಸಮಾಜದ ಕಾಳಜಿಯುಕ್ತ, ಜವಾಬ್ದಾರಿಯುಕ್ತ ಪ್ರಜೆಗಳನ್ನಾಗಿ ಮಾಡುವ ಕೆಲಸ ಇಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.
Related Articles
Advertisement
ಕೇಂದ್ರೀಯ ವಿಶ್ವ ವಿದ್ಯಾಲಯ ಸಮಾಜ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಈ ಕಾಲನಿಯಲ್ಲಿ ಶಿಬಿರ ನಡೆಸಿದ ಸಂದರ್ಭದಲ್ಲಿ ಕಾಲನಿಯ ಜನರ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಅಭ್ಯಸಿಸಿ ತಕ್ಕುದಾದ ಪರಿಹಾರ ಮಾರ್ಗ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಈ ಶಾಲೆಯ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸುವ ಉದ್ದೇಶದಿಂದ ಸತತ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ವಿದ್ಯುತ್ ಇಲಾಖೆಗೆ ಪಾವತಿಸಲು ಬಾಕಿ ಮೊತ್ತವನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಪಾವತಿಸಿದರೂ ವಿದ್ಯುತ್ ವಿಚ್ಛೇದಿಸಿರುವ ಕಾರಣ ಮರುಸ್ಥಾಪನೆಗಾಗಿ ಇನ್ನೂ ಹೆಚ್ಚಿನ ತೆರಬೇಕಾಗಿ ಬಂದಿದೆ. ಆದರೆ ಈ ಸಂದರ್ಭದಲ್ಲಿ ಮಹತ್ಕಾರ್ಯದಲ್ಲಿ ಕೈಜೋಡಿಸಲು ಮುಂದಾದ ಬದಿಯಡ್ಕ ಪಂಚಾಯತು ಆ ಮೊತ್ತವನ್ನು ತೆತ್ತು ಸಹಕರಿಸಿತು.
ಸಮಾಜ ಅಧ್ಯಯನ ಘಟಕದ ಮುಖ್ಯಸ್ಥೆ ಡಾ.ಲಕ್ಷ್ಮಿ ಹಾಗೂ ಅವರ ವಿದ್ಯಾರ್ಥಿಗಳ ಕಾಳಜಿ ಹಾಗೂ ಸಮಾಜದ ಏಳಿಗೆಗಾಗಿ ದುಡಿಯುವ ಮನೋಭಾವ ಈ ಕಾಲನಿಯ ಮಕ್ಕಳು ಸಂಭ್ರಮದಿಂದ ಕುಣಿದಾಡುವಂತೆ ಮಾಡಿದೆ. ಕತ್ತಲಿನಿಂದ ಬೆಳಕಿನೆಡೆಗೆ ಈ ಪ್ರದೇಶದ ಜನರನ್ನು ಕರೆತರುವ ಪ್ರಯತ್ನ ಸತತವಾಗಿ ಸಾಗುತ್ತಿರುವುದು ಕಂಡುಬರುತ್ತದೆ. 2017-18ರಲ್ಲಿ ಸಮಾಜ ಅಧ್ಯಯನ ಘಟಕದ ವಿದ್ಯಾರ್ಥಿಗಳಿಗಾಗಿ 10 ದಿನಗಳ ಶಿಬಿರ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕೊರಗ ಕಾಲನಿಯ ಜನರು ನೀಡಿದ ಸಹಕಾರ ಹಾಗೂ ಕಾಲನಿಯಲ್ಲಿ ಇರುವ ಅವ್ಯವಸ್ಥತೆಗಳನ್ನು ಸರಿ ಪಡಿಸಬೇಕೆಂಬ ದೃಢ ನಿರ್ಧಾರಕ್ಕೆ ಬರಲಾಯಿತು. ಮುಂದಿನ ವರ್ಷವೂ ಇದೇ ಕಾಲನಿಯಲ್ಲಿ ಶಿಬಿರ ಏರ್ಪಡಿಸಿ ಕಾಲನಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಕಾಲನಿಯ ಅಭಿವೃದ್ಧಿಗೆ ಬೇಕಾದ ಒಂದೊಂದೇ ಕಾರ್ಯಯೋಜನೆಯನ್ನು ನಿರ್ಮಿಸಲಾಯಿತು. ಸತತ ಪ್ರಯತ್ನದ ಮೂಲಕ ಬೆಳಕ ಉರಿಸಿದ ಜೆಸೀಲ್.ಯಂ ಮತ್ತು ಮಾನಸ ವೇಣುಕಳೆದ ಎರಡು ವರ್ಷಗಳಿಂದ ವಿದ್ಯುತ್ ಸಂಪರ್ಕ ಮರುಕಲ್ಪಿಸುವ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ವಿದ್ಯಾರ್ಥಿಗಳಾದ ಜೆಸೀಲ್.ಯಂ ಮತ್ತು ಮಾನಸ ವೇಣು ಆಗಾಗ ಕಾಲನಿ, ವಿದ್ಯುತ್ ಕಚೇರಿಗೆ ಭೇಟಿ ನೀಡಿ ಸಮಸ್ಯೆಯ ಪರಿಹಾರಕ್ಕೆ ಸತತ ಪ್ರಯತ್ನ ಮಾಡಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎದುರಾದ ಅನೇಕ ಅಡೆತಡೆಗಳಿಗೆ ಹೆದರದೆ ಪಣ ತೊಟ್ಟು ಮಾಡಿದ ಈ ಮಾದರಿ ಕಾರ್ಯವನ್ನು ಕಂಡು ಕಾಲನಿ ನಿವಾಸಿಗಳು, ಪಂಚಾಯತು ಅಧೀಕೃತರು, ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ವರ್ಗ ಇವರನ್ನು ಅಭಿನಂಧಿಸಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ.ಮೋಹನ್.ಎ.ಕೆ, ಸಹಾಯಕ ಪ್ರಾಧ್ಯಾಪಕರಾದ ದಿಲೀಪ್ ದಿವಾಕರ್, ವಿಮಲ ಕೊರಗ, ಶಾಲಾ ಶಿಕ್ಷಕ ಬಾಲಕೃಷ್ಣ ಅಚ್ಚಾಯಿ ಮೀಡಿಯಾ ಕ್ಲಾಸಿಕಲ್ ಕಾಸರಗೋಡು ಪದಾಧಿಕಾರಿಗಳು, ಕಾಲನಿಯ ಹಿರಿಯರು ಉಪಸ್ಥಿತರಿದ್ದರು.