Advertisement

ಶೇ. 87 ಮಂದಿಗೆ ಚೀನ ವಸ್ತು ಬೇಕಿಲ್ಲ; ಸಮೀಕ್ಷೆಯೊಂದರಲ್ಲಿ ಜನರ ಅಭಿಮತ

01:44 AM Jun 21, 2020 | Sriram |

ಹೊಸದಿಲ್ಲಿ: ಲಡಾಖ್‌ನಲ್ಲಿನ ಗಡಿ ಸಂಘರ್ಷದ ನಂತರ ದೇಶದಲ್ಲಿ ಚೀನ ವಿರೋಧಿ ಕೂಗು ಹೆಚ್ಚುತ್ತಲೇ ಇದೆ.ದೇಶದ ಸುಮಾರು ಶೇ.87 ಮಂದಿ ಚೀನದ ವಸ್ತುಗಳನ್ನು ಬಾಯ್ಕಟ್‌ ಮಾಡುವುದಾಗಿ ಘೋಷಿಸಿದ್ದಾರೆ. ಲೋಕಲ್‌ ಸರ್ಕಲ್‌ ನಡೆಸಿದ ಸರ್ವೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಮೇಡ್‌ ಇನ್‌ ಚೀನ ಬದಲಿಗೆ ಮೇಡ್‌ ಇನ್‌ ಇಂಡಿಯಾ ವಸ್ತುಗಳ ಬಳಕೆ ಮಾಡುವುದಾಗಿ ಜನತೆ ಹೇಳಿದ್ದಾರೆ. ಮುಂದಿನ ಒಂದು ವರ್ಷಗಳ ಅವಧಿಗೆ ಚೀನದ ವಸ್ತುಗಳನ್ನು ಬಳಕೆ ಮಾಡುವುದಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಜನತೆ ಹೇಳಿದ್ದಾರೆ.

Advertisement

ಲೋಕಲ್‌ ಸರ್ಕಲ್‌ನ ಸಮೀಕ್ಷೆಯಲ್ಲಿ ಸುಮಾರು 8000 ಮಂದಿ ಭಾಗಿಯಾಗಿದ್ದಾರೆ. ಅಂದರೆ, ಕ್ಸಿಯೋಮಿ, ಅಪ್ಪೋ, ವಿವೋ, ಒನ್‌ ಪ್ಲಸ್‌, ಕ್ಲಬ್‌ ಫ್ಯಾಕ್ಟರಿ, ಅಲಿ ಎಕ್ಸ್‌ಪ್ರಸ್‌, ಶಿಯಾನ್‌, ಟಿಕ್‌ಟಾಕ್‌, ವಿಚಾಟ್‌ ಸೇರಿದಂತೆ ಚೀನದ ಉತ್ಪನ್ನಗಳನ್ನು ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಚೀನ ವಸ್ತುಗಳ ಬದಲಿಗೆ ಮೇಡ್‌ ಇನ್‌ ಇಂಡಿಯಾ ವಸ್ತುಗಳನ್ನೇ ಬಳಕೆ ಮಾಡುವುದಾಗಿ ಸುಮಾರು ಶೇ.97 ಮಂದಿ ಹೇಳಿದ್ದಾರೆ.
ವಿಚಿತ್ರವೆಂದರೆ ಚೀನದ ವಸ್ತುಗಳ ಮೇಲೆ ಶೇ.200 ಸುಂಕ ಏರಿಕೆ ಮಾಡಬೇಕು ಎಂಬ ವಿಚಾರಕ್ಕೆ ಜನ ಸಹಮತ ವ್ಯಕ್ತಪಡಿಸಿಲ್ಲ. ಇದರಿಂದ ಭಾರತದಿಂದ ರಫ್ತಾಗುವ ವಸ್ತುಗಳ ಮೇಲೆ ಅಡ್ಡ ಪರಿಣಾಮವುಂಟಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೀನಾದಿಂದ ಖರೀದಿಸುವ ವಸ್ತುಗಳ ಪಟ್ಟಿ ಕೊಡಿ
ಈ ಮಧ್ಯೆ ಕೇಂದ್ರ ಸರ್ಕಾರ ಚೀನದಿಂದ ಖರೀದಿ ಮಾಡುತ್ತಿರುವ ವಸ್ತುಗಳ ಪಟ್ಟಿ ಕೊಡುವಂತೆ ಉದ್ಯಮಗಳಿಗೆ ಸೂಚಿಸಿದೆ. ಮುಂದಿನ ಸೋಮವಾರದೊಳಗೆ ಈ ಪಟ್ಟಿ ನೀಡಬೇಕಾಗಿದೆ. ಅಂದರೆ, ಕೇಂದ್ರ ಸರ್ಕಾರ ಅತ್ಯವಶ್ಯವಲ್ಲದ ವಸ್ತುಗಳನ್ನು ಪಟ್ಟಿ ಮಾಡಿ, ಇಂಥ ವಸ್ತುಗಳನ್ನು ಸ್ಥಳೀಯವಾಗಿಯೇ ಖರೀದಿಸಬಹುದೇ ಎಂಬ ಬಗ್ಗೆ ಹೇಳಲಿದೆ.

ಅಲ್ಲದೇ, ಮೂರು ಹಂತಗಳ ಪರಿಹಾರಾತ್ಮಕ ಕ್ರಮ ರೂಪಿಸಲಿದೆ. ಅಂದರೆ, ಅಲ್ಪಾವಧಿ, ಮಧ್ಯಮ, ದೀರ್ಘಾವಧಿ ಯೋಜನೆ ರೂಪಿಸಿ ಚೀನದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವ ಕೆಲಸ ಮಾಡಲಿದೆ ಎಂದು ಎಕನಾಮಿಕ್ಸ್‌ ಟೈಮ್ಸ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next