Advertisement

ಮತದಾನ ಹೆಚ್ಚಳಕ್ಕೆ ಜನರ ಸಹಕಾರ ಅಗತ್ಯ

05:34 PM Sep 19, 2018 | |

ಧಾರವಾಡ: ಮುಂಬರುವ ಚುನಾವಣೆಗಳಲ್ಲಿ ಇನ್ನಷ್ಟು ಮತದಾನ ಹೆಚ್ಚಿಸಲು, ಮತದಾರರು ಸಕ್ರಿಯವಾಗಿ ಮತದಾನದಲ್ಲಿ ಭಾಗವಹಿಸುವಂತೆ ಮಾಡಲು ಎಲ್ಲರ ಸಹಕಾರ ಮತ್ತು ಅನುಭವಗಳು ಅಗತ್ಯ ಎಂದು ಜಿಪಂ ಸಿಇಒ ಸ್ನೇಹಲ್‌ ರಾಯಮಾನೆ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ ಮತದಾನದ ಜಾಗೃತಿ ಮತ್ತು ಮಹತ್ವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಶಂಸನಾ ಪತ್ರ, ಸ್ಮರಣಿಕೆ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಶೇ.67 ಮತದಾನವಾಗಿತ್ತು. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೇ.71 ಮತದಾನವಾಗಿದೆ. ಎನ್‌ಜಿಒಗಳು ಜಿಲ್ಲಾ ಸ್ವೀಪ್‌ ಸಮಿತಿಗೆ ಮತದಾನ ಜಾಗೃತಿಗೆ ನೆರವು ನೀಡಿವೆ. ಅವರ ಪಾತ್ರವೂ ಪ್ರಮುಖವಾಗಿದೆ. ಜಿಲ್ಲೆಯ ಮತದಾನ ಹೆಚ್ಚಿಸಲು ಸೂಕ್ತ ಸಲಹೆ, ಮಾದರಿಗಳನ್ನು ನೀಡಬಹುದು. ಇದು ಪರಿಣಾಮಕಾರಿ ಅನುಷ್ಠಾನಕ್ಕೆ ಸಹಾಯಕವಾಗಲಿದೆ ಎಂದರು.

ಧಾರವಾಡದ ಸಮರ್ಥನಂ, ಸಾಮರ್ಥ್ಯ, ಸಮರ್‌, ಸ್ಪದಾ, ಬೆಳಕು, ರೋಟರಿ ಕ್ಲಬ್‌, ಸಂತತಾ, ಕಲ್ಪತರು ಮಹಿಳಾ ಮಂಡಳ, ಧಾರವಾಡ ಬಾಂಡ್ಸ್‌, ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ಅಫ್‌, ಟ್ರಾನ್ಸ್‌ಪಾಯರ್‌ ಪಿಟ್ನೆಸ್‌ ಜಿಮ್‌, ರೋಲರ್‌ ಸ್ಕೇಟಿಂಗ್‌ ಅಕಾಡೆಮಿ ಮತ್ತು ಹುಬ್ಬಳ್ಳಿಯ ಲಯನ್ಸ್‌ ಕ್ಲಬ್‌ ಪ್ರತಿನಿಧಿಗಳಿಗೆ ಸಿಇಒ ಸ್ನೇಹಲ್‌ ಆರ್‌. ಅವರು ಪ್ರಶಂಸನಾಪತ್ರ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಿದರು. ಜಿಪಂ ಉಪ ಕಾರ್ಯದರ್ಶಿ ಎಸ್‌.ಜಿ. ಕೊರವರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next