Advertisement

ಕೋವಿಡ್‌ ತಡೆಗೆ ಜನರ ಸಹಕಾರ ಮುಖ್ಯ

06:54 AM May 25, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌-19 ತಡೆಗಾಗಿ ಜಿಲ್ಲೆಯ ಜನರು ಜಿಲ್ಲಾಡಳಿತಕ್ಕೆ  ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಶ್ರೀನಿವಾಸಪ್ರಸಾದ್‌ ಪ್ರಶಂಸಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ  ಆರಂಭದಿಂದಲೂ ಕೊರೊನಾ ತಡೆಗಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Advertisement

ಜಿಲ್ಲೆಯ ಅಧಿಕಾರಿಗಳು ಇಡೀ ತಂಡವಾಗಿ ಕೆಲಸ ಮಾಡುತ್ತಿದ್ದು, ಕೋವಿಡ್‌ ಹರಡದಂತೆ ನಿಗಾ ವಹಿಸಿದ್ದಾರೆ. ಜಿಲ್ಲೆಯ ಜನರು ಜಿಲ್ಲಾಡಳಿತಕ್ಕೆ ಬೆಂಬಲ ವಾಗಿದ್ದಾಗ ಮಾತ್ರ ಸಾಧ್ಯವಾಗಿದೆ ಎಂದು ಹೇಳಿದರು. ಲಾಕ್‌ಡೌನ್‌ ಅವಧಿಯಲ್ಲಿ ಜನರಿಗೆ ಅಗತ್ಯ ಪಡಿತರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಲಾಗಿದೆ.

ಸಾಮೂಹಿಕ ಪ್ರಯತ್ನದ ಫ‌ಲವಾಗಿ ಜಿಲ್ಲೆಯನ್ನು ಹಸಿರು ವಲಯವಾಗಿಯೇ ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ ಎಂದರು. ನಗರದ ಪದವಿ ಕಾಲೇಜಿನಲ್ಲಿ  ಇಂಟಿಗ್ರೇಟೆಡ್‌ ಕೋರ್ಸ್‌ ಆರಂಭಕ್ಕೆ ಅಗತ್ಯವಾಗಿರುವ ನೆರವು ನೀಡಲಾಗುತ್ತಿದೆ.

ಇದೇ ರೀತಿ ನವೋದಯ ಶಾಲೆಗೆ ಸೋಲಾರ್‌ ವ್ಯವಸ್ಥೆಗಾಗಿ 16 ಲಕ್ಷ ರೂ. ಗಳ ಆರ್ಥಿಕ ನೆರವು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದರು.  ಗೋಷ್ಠಿಯಲ್ಲಿ ಶಾಸಕ ಮಹೇಶ್‌, ಜಿಪಂ ಅಧ್ಯಕ್ಷ ಮಹೇಶ್‌, ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ, ಜಿಪಂ ಸಿಇಒ ನಾರಾಯಣರಾವ್‌, ಎಸ್ಪಿ ಆನಂದ ಕುಮಾರ್‌, ಎಡೀಸಿ ಆನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next