Advertisement
ಯಾವ ಮನುಷ್ಯ ತಾನೇ ಆರಾಮವಾಗಿ ಜೀವನ ನಡೆಸಲು ಇಷ್ಟ ಪಡುವುದಿಲ್ಲ ಹೇಳಿ? ಎಲ್ಲರಿಗೂ ಕಷ್ಟವೇ ಬರದೆ ಇರುವಂತಹ ಜೀವನ ಸಿಕ್ಕಿದರೆ ಚೆನ್ನಾಗಿರುತ್ತದೆ. ಆದರೆ, ಅದು ಸಾಧ್ಯವೇ? ಹುಟ್ಟಿನಿಂದ ಸಾವಿನ ತನಕ ಪ್ರತಿಯೊಂದನ್ನೂ ಕಷ್ಟಪಟ್ಟೇ ಪಡೆದು ಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ನಮ್ಮ ತಾಯಿ ನಮಗೆ ಜನ್ಮ ಕೊಡುವಾಗಲೂ ಕಷ್ಟಪಟ್ಟಿರುತ್ತಾಳೆ. ನಾವು ಬೆಳೆಯುವಾಗಲೂ, ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಲು, ಕೆಲಸಕ್ಕೆ ಸೇರಿಕೊಳ್ಳಲು, ಪ್ರೀತಿಸುವಾಗಲೂ, ಸಂಸಾರ ಸರಿದೂಗಿಸುವಾಗಲೂ ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟಗಳ ಜೊತೆ ಜೊತೆಗೇ ಸಾಗುತ್ತಿರುತ್ತೇವೆ.
ದಂತೆ ನಡೆದುಕೊಳ್ಳುತ್ತಾರೆ. ಒಬ್ಬ ಮನುಷ್ಯ ಗುಣದಲ್ಲಿ ಬುದ್ಧಿಯಲ್ಲಿ ಶ್ರೀಮಂತನೇ ಎಂದು ತುಲನೆ ಮಾಡುವುದಕ್ಕಿಂತ ಹಣ
ಚೆಲ್ಲಿ ಶ್ರೀಮಂತನೇ ಎಂದು ತಿಳಿದುಕೊಳ್ಳಲು ಜನ ಕಾತುರರಾಗಿರುತ್ತಾರೆ. ದುಡ್ಡಿರುವವರ ಮನೆಯ ನಾಯಿಗೆ ಕಜ್ಜಿ ಬಂದಿದ್ದರೂ ಓಹ್ ಸೋ ಸ್ವೀಟ್ ಎಂದು ಮನೆಯ ಮಾಲೀಕನ ಎದುರು ಮುದ್ದು ಮಾಡಿ ನಾಟಕ ಆಡುತ್ತಾರೆ. ಏಕೆಂದರೆ ತಮ್ಮ ಕೆಲಸ ಆಗಬೇಕಲ್ಲ. ದುಡ್ಡಿರುವವರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಅವರ ಹಿಂದೆ ಹಿಂದೆಯೇ ಅಲೆದಾಡುತ್ತಿರುತ್ತಾರೆ. ಶ್ರೀಮಂತ ಹೇಗಿದ್ದರೂ…””ಸಾರ್ ನೀವೇ ಯಾಕೆ ಹೀರೋ ಅಗ್ಬಾರ್ಧು? ದುಡ್ಡಿದ್ರೆ ಏನು ಬೇಕಾದ್ರೂ ಮಾಡಬಹುದು” ಎಂದು ಸಿನಿಮಾದ ವರು ತಲೆ ಕೆಡಿಸುತ್ತಾರೆ. ಶ್ರೀಮಂತ ಬುದ್ಧಿವಂತನಾದರೆ ಹೊಗಳಿ ಹೊನ್ನ ಶೂಲಕ್ಕೇರಿಸುವರಯ್ನಾ ಸರ್ವಜ್ಞ ಎಂದು ತನಗೆ ತಾನೇ ಹೇಳಿಕೊಂಡು ಸುಮ್ಮನಾಗುತ್ತಾನೆ ಇಲ್ಲವಾದರೆ ಬೇರೆಯವರ ಮಾತಿಗೆ ಓಗೊಟ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ.
Related Articles
ಕೆಲವರು ತುಂಬಾ ಚೆನ್ನಾಗಿ ಉತ್ತರಿಸಿದ್ದರು “”ಮೇಡಂ ಇವತ್ತು ನನ್ನ ಹತ್ರ ದುಡ್ಡಿದೆ ಅಂತ ಎಲ್ಲರಿಗೂ ನಾನು ಬೇಕು. 10 ವರ್ಷಗಳ ಕೆಳಗೆ ನನಗೆ ಸಹಾಯ ಮಾಡಕ್ಕೆ ಯಾರೂ ಮುಂದೆ ಬರ್ಲಿಲ್ಲ. ನನ್ನ ಸಂಬಂಧಿಕರಾಗಲಿ, ಹೆಂಡತಿಯಾಗಲಿ ನನಗೆ ಗೌರವ ಕೊಡ್ತಿರ್ಲಿಲ್ಲ. ಈಗ ನಾನು ಎಲ್ಲರ ಕಣ್ಣಿಗೆ ಚೆನ್ನಾಗಿ ಕಾಣಿಸ್ತಿದ್ದೀನಿ. ಎಲ್ಲರಿಗೂ ನಾನೂ ಬೇಕೂ ಅಂದ್ರೆ ಅದು ನಾನಲ್ಲ ನನ್ನ ಹಣ. ಅವರೆಲ್ಲ ಇಷ್ಟ ಪಡ್ತಿರೋದು ನನ್ನ ಹತ್ರ ಇರೋ ಹಣವನ್ನ, ನನ್ನನ್ನಲ್ಲ. ನಾಳೆ ನಾನು ಎಲ್ಲಾ ದುಡ್ಡನ್ನು ದಾನ ಮಾಡಿ ಅಥವಾ ವ್ಯಾಪಾರದಲ್ಲಿ ನಷ್ಟ ಮಾಡಿಕೊಂಡರೆ ಈಗ ನನ್ನ ಹೊಗಳುತ್ತಿರುವವರೆಲ್ಲಾ ಅವಹೇಳನ ಮಾಡಕ್ಕೆ ಶುರು ಮಾಡ್ತಾರೆ. ಹೆಂಡತಿ ಮಕ್ಕಳು ನನ್ನನ್ನು ಕೀಳಾಗಿ ಕಂಡು ಬೈತಾನೇ ಇರ್ತಾರೆ.”
Advertisement
ಮನುಷ್ಯ ಶ್ರೀಮಂತರ ಬಳಿ ಮಾತ್ರ ಅವಕಾಶವಾದಿಯಾಗಿರು ವುದಿಲ್ಲ. ಎಲ್ಲಾ ಸಂದರ್ಭಗಳಲ್ಲೂ ತನಗೆ ಏನು ಸಿಗುತ್ತದೆ ಎಂದು ತಲೆಯಲ್ಲಿ ಗುಣಿಸುತ್ತಲೇ ಇರುತ್ತಾನೆ. ಆದರೆ ಕೆಲವರು ಯಾರ ಹಣವನ್ನೂ, ಸಹಾಯವನ್ನೂ ಬಳಸಿಕೊಳ್ಳದೆ ಸ್ವಯಂಪ್ರೇರಿತರಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ.
ಸಂಬಂಧಗಳನ್ನು ಬೆಳೆಸಿಕೊಳ್ಳುವಾಗಲೂ ಕೆಲ ಮನುಷ್ಯರು ಅವಕಾಶ ವಾದಿಗಳಾಗಿರುತ್ತಾರೆ. ಅವಳಿಂದ ನನಗೆ ಇದು ಸಿಗುತ್ತೆ, ನಾನು ಇದು ಪಡ್ಕೊಂಡು ಅದು ಆಗಬಹುದು. ಅದಕ್ಕೆ ನಾನು ಅವಳನ್ನ ಹೀಗೆ ಸಿಕ್ಕಿಸಿ ಹಾಕಿ ನಿಸ್ಸಹಾಯಕಳನ್ನಾಗಿ ಮಾಡಿದರೆ ಅವಳು ನನ್ನನ್ನೇ ಬೇಡಿಕೊಂಡು ನನ್ನ ಹಿಂದೆ ಬರ್ತಾಳೆ, ಆಗ ನಾನು ಅವಳನ್ನ ಹೀಗೆ ಆಟ ಆಡಿಸಬಹುದು… ಹೀಗೆ ಏನೇನೋ ಊಹಿಸಿ ಕೊಂಡು ಸ್ನೇಹವನ್ನು ಪ್ರಾರಂಭಿಸಿರುತ್ತಾರೆ. ಅವಕಾಶವಾದಿ ಗಳಿಂದ ಮೋಸಹೋದವರು ಎಷ್ಟೋ ಜನ ದಿನನಿತ್ಯ ತಮ್ಮ ಕಥೆಗಳನ್ನು ನಮ್ಮೆಲ್ಲರ ಬಳಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮನೆಯ ಹೊರಗಿನ ಜನರು ಮಾತ್ರವಲ್ಲ, ನಮ್ಮ ನಮ್ಮ ಮನೆಯವರು, ನಾವು ಪ್ರೀತಿಸುವವರು ಸಹ ಎಷ್ಟೋ ಜನ ಅವಕಾಶವಾದಿಗಳೇ. ಅದು ನಮಗೆ ಅರಿವಾದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಆದರೆ ಅದು ಕಹಿಯಾದ ಸತ್ಯ, ಅವರನ್ನು ದೂರ ಮಾಡಲೂ ಆಗದೆ. ಅವರಿಂದ ದೂರ ಇರಲೂ ಆಗದೆ ಜೊತೆಯಲ್ಲೇ ಇದ್ದು ಅನುಭವಿಸುವುದು ಎಷ್ಟು ಕಷ್ಟ ಅಲ್ವಾ? ಅವಕಾಶವಾದಿತನ ಎಂಬುದು ಸಂಪೂರ್ಣ ಕೆಟ್ಟ ಗುಣವೇನೂ ಅಲ್ಲ. ಅದನ್ನೇ ಒಳ್ಳೆಯದಕ್ಕೆ ಬಳಸಿಕೊಳ್ಳುವವರೂ ಇರುತ್ತಾರೆ. ಒಂದು ಉದಾಹರಣೆ ನೋಡಿ.
ಥಾಮಸ್ ಅಲ್ವಾ ಎಡಿಸನ್ ಗೊತ್ತಲ್ಲ? ವಿದ್ಯುತ್ ಬಲ್ಬ್ ಕಂಡುಹಿಡಿದ ವಿಜ್ಞಾನಿ. ಫೋನೋಗ್ರಫಿಯನ್ನು ಕಂಡುಹಿಡಿದಿದ್ದೂ ಅವರೇ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಅಮೆರಿಕದ ಓಹಾಯೋ ಮೂಲದವರಾದ ಎಡಿಸನ್ ಅವರ ಪ್ರಯೋಗಾಲಯ ನ್ಯೂಜೆರ್ಸಿಯ ವೆಸ್ಟ್ ಅರೇಂಜ್‌ನಲ್ಲಿತ್ತು. 1914ರಲ್ಲಿ ಅದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿತ್ತು. 20 ಲಕ್ಷ ಡಾಲರ್‌ಗೂ ಹೆಚ್ಚಿನ ಮೌಲ್ಯದ ವಸ್ತುಗಳು ನಷ್ಟವಾದರೂ ಅದಕ್ಕೆ ಕೇವಲ 2.5 ಲಕ್ಷ ಡಾಲರ್ ಮಾತ್ರ ವಿಮೆ ಮಾಡಿಸಲಾಗಿತ್ತು. ಕಲ್ಲಿನಲ್ಲಿ ಕಟ್ಟಿದ ಆ ಪ್ರಯೋಗಾಲಯ ಬೆಂಕಿಯಲ್ಲಿ ಭಸ್ಮವಾಗುವುದಿಲ್ಲ ಎಂಬ ನಂಬಿಕೆಯಿಂದ ಎಡಿಸನ್ ಅದಕ್ಕೆ ಬಹಳ ಕಡಿಮೆ ಮೊತ್ತದ ವಿಮೆ ಮಾಡಿಸಿದ್ದರು. ಆದರೆ ಅವರ ಲೆಕ್ಕಾಚಾರ ಸುಳ್ಳಾಗಿತ್ತು. ಡಿಸೆಂಬರ್ ತಿಂಗಳ ಒಂದು ರಾತ್ರಿ ಎಡಿಸನ್‌ರ ಜೀವಮಾನದ ಬಹುತೇಕ ಸಂಶೋಧನೆಗಳೆಲ್ಲ ಬೆಂಕಿಯಲ್ಲಿ ಉರಿದು ಬೂದಿ ಯಾದವು. ಪ್ರಯೋಗಾಲಯ ಹೊತ್ತಿ ಉರಿಯುವಾಗ ಎಡಿಸನ್ ಎಲ್ಲೂ ಕಾಣಿಸುತ್ತಿರಲಿಲ್ಲ. 24 ವರ್ಷದ ಮಗ ಚಾರ್ಲ್ಸ್ ಅಪ್ಪನನ್ನು ಗಾಬರಿಯಿಂದ ಹುಡುಕತೊಡಗಿದ. ಕೊನೆಗೂ ಎಡಿಸನ್ ಸಿಕ್ಕಿದರು. ಹೊತ್ತಿ ಉರಿಯುತ್ತಿರುವ ಪ್ರಯೋ ಗಾಲಯದ ಮುಂದೆ ಅವರು ಪ್ರಶಾಂತವಾಗಿ ನಿಂತು ನೋಡುತ್ತಿದ್ದರು. ಬೆಂಕಿಯ ಬೆಳಕಿನಲ್ಲಿ ಅವರ ಮುಖ ಹೊಳೆ ಯುತ್ತಿತ್ತು. ಗಾಳಿಯಲ್ಲಿ ಬಿಳಿಯ ಕೂದಲು ಹಾರಾಡುತ್ತಿತ್ತು. ಚಾರ್ಲ್ಸ್ ಹೇಳುತ್ತಾರೆ, “”ನನ್ನ ಎದೆಯಲ್ಲೇ ಬೆಂಕಿ ಇಟ್ಟಂತಾಗಿತ್ತು. ಅಪ್ಪನಿಗಾಗ 67 ವರ್ಷ. ಅದೇನೂ ಸಣ್ಣ ವಯಸ್ಸಲ್ಲ. ಜೀವಮಾನ ವಿಡೀ ಪ್ರಯೋಗ ಮಾಡಿ ದಣಿದಿದ್ದಾರೆ. ಈಗ ಅವರ ಸಂಶೋಧನೆ ಯೆಲ್ಲ ಸುಟ್ಟು ಭಸ್ಮವಾಗಿದೆ. ಆದರೆ ನನ್ನನ್ನು ನೋಡಿದ್ದೇ ಅವರು ಕೂಗಿದರು “ಅಮ್ಮ ಎಲ್ಲಿ, ಅಮ್ಮ ಎಲ್ಲಿ?’ ನನಗೆ ಗೊತ್ತಿಲ್ಲ ಎಂದೆ. ಬೇಗೆ ಅವಳನ್ನು ಹುಡುಕಿಕೊಂಡು ಬಾ. ಅವಳಿಗೆ ಜೀವಮಾನ ದಲ್ಲೇ ಇಂತಹ ದೃಶ್ಯ ನೋಡಲು ಸಿಗುವುದಿಲ್ಲ ಅಂದರು.”
ಮರುದಿನ ಬೂದಿಯನ್ನು ನೋಡುತ್ತ ಎಡಿಸನ್ ಹೇಳಿದ್ದರಂತೆ, “”ದುರಂತದಲ್ಲೂ ಒಂದು ಸಂತೋಷವಿದೆ. ದುರಂತಕ್ಕೆ ಬಹಳ ದೊಡ್ಡ ಬೆಲೆಯಿದೆ. ನಮ್ಮೆಲ್ಲಾ ತಪ್ಪುಗಳೂ ಅದರಲ್ಲಿ ಸುಟ್ಟುಹೋಗು ತ್ತವೆ. ದೇವರೇ, ನಿನಗೆ ಥ್ಯಾಂಕ್ಸ್, ನಾನೀಗ ಎಲ್ಲವನ್ನೂ ಮತ್ತೆ ಹೊಸತಾಗಿ ಶುರುಮಾಡಬಹುದು.” ಪ್ರಯೋಗಾಲಯಕ್ಕೆ ಬೆಂಕಿ ಬಿದ್ದು ಮೂರು ವಾರಗಳ ನಂತರ ಎಡಿಸನ್ ಪೋನೋಗ್ರಫಿಯನ್ನು ಕಂಡುಹಿಡಿದರು.