Advertisement

ಇನ್ನೂ ಕೈಸೇರಿಲ್ಲ ಜನರ ಹಣ

12:40 PM Mar 21, 2018 | |

ಬೆಂಗಳೂರು: ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಹೂಡಿಕೆ ಹಗರಣ ಮಾತ್ರವಲ್ಲ. ಅಲ್ಪಾವಧಿಯಲ್ಲಿ ಹಣ ದ್ವಿಗುಣ, ಹೆಚ್ಚು ಬಡ್ಡಿ ಆಮಿಷ, ನಿವೇಶನ, ಪ್ಲ್ರಾಟ್‌ ಮಾರಾಟ ಹೆಸರಿನಲ್ಲಿ ನೂರಾರು ಕೋಟಿ ರೂ. ವಂಚನೆ ಪ್ರಕರಣಗಳು ಕಳೆದ ಒಂದು ದಶಕದಲ್ಲಿ ಹತ್ತಾರು ಬೆಳಕಿಗೆ ಬಂದಿವೆ. ಅವುಗಳ ತನಿಖೆ, ವಿಚಾರಣೆ ಮುಗಿದರೂ, ವಂಚನೆಗೊಳಗಾದವರಿಗೆ ಮಾತ್ರ ಹಣ ಕೈಸೇರಿಲ್ಲ.

Advertisement

ಇದುವರೆಗೆ ಮೋಸ ಮಾಡಿದ ಕಂಪನಿಗಳಲ್ಲಿ ಡ್ರಿಮ್ಡ್ ಜಿಕೆ, ಅಗ್ರೀಗೋಲ್ಡ್‌, ವಿನಿವಿಂಕ್‌, ಇನ್‌ವೆಸ್ಟೆಕ್‌, ಖಾಸನೀಸ ಬ್ರದರ್ಸ್‌ ಪ್ರಮುಖವಾದವು.  ಈ ಪ್ರಕರಣಗಳ ತನಿಖೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದು, ಅವರ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಿದ್ದಾರೆ. ಆದರೆ, ಹಣ ಕಳೆದುಕೊಂಡವರಿಗೆ ಅಸಲು ಸಹ ಸಿಕ್ಕಿಲ್ಲ. ಕೆಲವು ಪ್ರಕರಣಗಳಲ್ಲಿ ವಂಚನೆ ಮೊತ್ತಕ್ಕೂ ಜಪ್ತಿ ಮಾಡಿಕೊಂಡ ಆಸ್ತಿ-ಪಾಸ್ತಿ ಮೌಲ್ಯಕ್ಕೂ ಸಮವಾಗದೆ ಹಣ ಹಿಂತಿರುಗಿಸಲು ಆಗಿಲ್ಲ.

ಅಗ್ರಿಗೋಲ್ಡ್‌: 1996ರಲ್ಲಿ ಆರಂಭವಾದ ಅಗ್ರಿಗೋಲ್ಡ್‌ ಕಂಪನಿಯು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಇತರೆ ರಾಜ್ಯಗಳಲ್ಲಿ ಸುಮಾರು 32 ಲಕ್ಷ ಮಂದಿ ಗ್ರಾಹಕರನ್ನು ಹೊಂದಿದ್ದು, 6,500 ಕೋಟಿ ರೂ. ಕೊಡಬೇಕಿದೆ. ಕರ್ನಾಟಕದಲ್ಲೇ 8.62 ಲಕ್ಷ ಮಂದಿ ವಂಚನೆಗೊಳಗಾಗಿದ್ದು, 1,700 ಕೋಟಿ ಹಣ ನೀಡದೆ ಸಂಸ್ಥೆ ವಂಚಿಸಿದೆ. ಆಂಧ್ರಪ್ರದೇಶ ಹೈಕೋರ್ಟ್‌ ಆಸ್ತಿ ಹರಾಜಿಗೆ ಸೂಚಿಸಿತ್ತು. ವಿಶೇ ಷ ವೆಂದರೆ ಈ ಕಂಪನಿ ಪಿಗ್ಮಿ, ಡೆಪಾ ಸಿಟ್‌ ಮತ್ತಿ ತರೆ ಯೋಜ ನೆ ಗಳ ಮೂಲಕ ಹಣ ವಸೂಲಿ ಮಾಡಿತ್ತು.

ಕರ್ನಾಟಕದಲ್ಲಿ ಅಗ್ರಿಗೋಲ್ಡ್‌ ಕಂಪನಿಗೆ ಸೇರಿದ 530 ಎಕರೆ ಜಮೀನು ಹಾಗೂ ಅಪಾರ್ಟ್‌ಮೆಂಟ್‌ ಹಾಗೂ ನಿವೇಶನಗಳು ಹಾಗೂ 75 ಲಕ್ಷ ರೂ. ಹಣ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ಕೂಡ ಕಂಪನಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿತ್ತು. ಈ ಕಂಪ ನಿ ಯನ್ನು ಖರೀದಿಸಲು ಮತ್ತೂಂದು ಸಂಸ್ಥೆ ಮುಂದಾಗಿದೆ. ಕೋರ್ಟ್‌ ಅನುಮತಿ ಮೇರೆಗೆ ಈಗಾಗಲೇ ಎಲ್ಲ ರಾಜ್ಯಗಳಲ್ಲಿರುವ ಅಗ್ರಿಗೋಲ್ಡ್‌ ಆಸ್ತಿ ಪರಿಶೀಲಿಸಿದ್ದು, ಆಯಾ ರಾಜ್ಯಗಳಿಂದ ಆಸ್ತಿಗೆ ಸಂಬಂಧಿಸಿದಂತೆ ಎನ್‌ಒಸಿ ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. 

ವಿನಿವಿಂಕ್‌ ಸಂಸ್ಥೆ: ಬಡ್ಡಿ ಯಾಸೆ ತೋರಿಸಿ 20 ಸಾವಿರ ಮಂದಿಯ 203 ಕೋಟಿ ಪೂ. ವಂಚಿ ಸಿದೆ.  ಈ ಸಂಬಂಧ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ವಿನಿವಿಂಕ್‌ನ ಮುಖ್ಯಸ್ಥರ 11 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದರು. ಆರೋ ಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದರು. ಆರೋಪಿಗಳ ಆಸ್ತಿ ಮಾರಾಟ ಮಾಡಿ ಹಣ ಹಿಂದಿರುಗಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದ್ದರೂ ಇನ್ನೂ ಹಣ ಗ್ರಾಹಕರಿಗೆ ಸೇರಿಲ್ಲ.

Advertisement

ಇನ್‌ವೆಸ್ಟೆಕ್‌: ಈ ಕಂಪ ನಿಯ ವಂಚನೆ ಮೊತ್ತವೂ 200 ಕೋಟಿ ರೂ. ಹೆಚ್ಚಿನ ಬಡ್ಡಿ ಯಾಸೆ ತೋರಿಸಿ ಜನ ರಿಂದ ಹೂಡಿಕೆ ಮಾಡಿ ಸಿ ಕೊಂಡಿತ್ತು. ಆರೋ ಪಿ ಯ ಬಂಧ ನದ ಬಳಿಕ ಆತ 70 ಕೋಟಿ ಕೊಟ್ಟು ಪರಾ ರಿ ಯಾ ಗಿದ್ದ. ಮತ್ತೂಮ್ಮೆ ಬಂಧಿ ಸಿದ್ದ ಪೊಲೀ ಸರು ಈತನ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿ ದ್ದಾರೆ. ಆದರೂ ಗ್ರಾಹ ಕ ರಿಗೆ ಹಣ ಸಿಕ್ಕಿಲ್ಲ. ಇದೀಗ ವಿಕ್ರಂ ಇನ್‌ವೆಸ್ಟೆಮೆಂಟ್‌ ಕಂಪನಿ ಹಗರಣ ಹೊರ ಬರುತ್ತಿದ್ದಂತೆ, ಇನ್‌ವೆಸ್ಟೆಕ್‌ ಹೂಡಿಕೆದಾರರೂ ನಮಗೂ ನ್ಯಾಯ ಕೊಡಿಸಿ ಎಂದು ಠಾಣೆ ಮೆಟ್ಟಿಲೇರುತ್ತಿದ್ದಾರೆ.

ಟಿಜಿಎಸ್‌ ಮತ್ತು ಡ್ರಿಮ್ಸ್‌ ಜಿಕೆ: ಫ್ಲ್ಯಾಟ್‌ ಹಾಗೂ ನಿವೇಶನ ನೀಡುವುದಾಗಿ ಸಾವಿರಾರು ಮಂದಿಯಿಂದ ಸಾವಿರಾರು ಕೋಟಿ ರೂ. ವಂಚಿಸಿದ ಟಿಜಿಎಸ್‌ ರಿಯಲ್‌ ಎಸ್ಟೇಟ್‌ ಗ್ರೂಪ್‌ ಹಾಗೂ ಡ್ರಿಮ್ಸ್‌ ಜಿ.ಕೆ. ಕಂಪನಿ ಮಾಲೀಕ ಸಚಿನ್‌ ನಾಯಕ್‌ ಹಾಗೂ ಪತ್ನಿ ದಿಶಾ ಚೌಧರಿ ಇತರರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮಧ್ಯೆ ದಿನೇ ದಿನೆ ಆರೋಪಿಗಳ ವಿರುದ್ಧ ದೂರು ನೀಡುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತಿದೆ. ವಂಚಿಸಿರುವ ಮೊತ್ತಕ್ಕೂ, ಜಪ್ತಿಯಾಗಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲೂ ಹಣ ವಿನ್ನೂ ಗ್ರಾಹ ಕರ ಕೈ ಸೇರಿಲ್ಲ.

ಖಾಸನೀಸ ಬ್ರದರ್ಸ್‌: ಠೇವಣಿ ಹಣಕ್ಕೆ ಅಧಿಕ ಬಡ್ಡಿ ಕೊಡುವುದಾಗಿ ಕಲಘಟಗಿಯ ಹರ್ಷ ಎಂಟರ್‌ ಟೇನ್‌ಮೆಂಟ್‌ ಹೆಸರಿನಲ್ಲಿ ಸಾರ್ವಜನಿಕರಿಂದ 400 ಕೋಟಿಗೂ ಅಧಿಕ ವಂಚನೆ ಮಾಡಿದ ಖಾಸನೀಸ ಬ್ರದರ್ಸ್‌ ಹರ್ಷ, ಸಂಜು ಮತ್ತು ಸತ್ಯಬೋಧ ಹಾಗೂ ಶ್ರೀನಿವಾಸನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ಇದುವರೆಗೂ ವಂಚಿತರಿಗೆ ಹಣ ವಾಪಸ್‌ ಆಗಿಲ್ಲ.

ವಿಕ್ರಂ ಇನ್‌ವೆಸ್ಟ್‌ಮೆಂಟ್‌: ಇನ್ನು ಇತ್ತೀಚೆ ಗಷ್ಟೇ 700 ಕೋಟಿ ರೂ. ವಂಚಿಸಿದ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿ ಮಾಲೀಕರ ರಾಘವೇಂದ್ರ ಶ್ರೀನಾಥ್‌, ಸೂತ್ರಂ ಸುರೇಶ್‌ ಹಾಗೂ ಇತರರನ್ನು ಬಂಧಿಸಿದ್ದು, ಚೆನ್ನೈ, ಬೆಂಗಳೂರಿನಲ್ಲಿ ನಿವೇಶನ, ಕಂಪನಿ ಹಾಗೂ ಕೆಲ ಮೌಲ್ಯಯುತ ಆಸ್ತಿ-ಪಾಸ್ತಿ ವಶಕ್ಕೆ ಪಡೆಯಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿದೆ. ವಂಚನೆಗೊಳಗಾದವರು ನಿತ್ಯ ಠಾಣೆಗೆ ದೂರು ದಾಖಲಿಸುತ್ತಿದ್ದಾರೆ.

ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ 
1. ಬ್ಯಾಂಕುಗಳ ಸಲಹೆ ಕೇಳಿ: 
ಅನಧಿಕೃತ ಹಾಗೂ ಅಪರಿಚಿತ ಕಂಪನಿಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡುವ ಮೊದಲು ಸ್ಥಳೀಯರು ಪೊಲೀಸರು ಮತ್ತು ಆರ್‌ಬಿಐ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಂಪರ್ಕ ಮಾಡಿ ಅಭಿಪ್ರಾಯ ಕೇಳುವುದು ಒಳಿತು.

2. ಕಂಪನಿಯ ಹಿನ್ನೆಲೆ ಪರಿಚಯ ತುಂಬಾ ಮುಖ್ಯ: ದೂರು ನೀಡಿ ಪೊಲೀ ಸರು ಕ್ರಮ ಕೈಗೊ ಳ್ಳು ತ್ತಿಲ್ಲವೆಂದು ದೂರುವ ಮೊದಲೇ ಹೆಚ್ಚು ಬಡ್ಡಿ ಯಾಸೆ ತೋರಿ ಸುವ ಕಂಪ ನಿ ಗಳ ಪೂರ್ವಾ ಗ್ರಹ ತಿಳಿ ದರೆ ಒಳಿತು. 

3. ಆಮಿಷ ತೋರುವವರ ಬಗ್ಗೆ ತೀರಾ ಎಚ್ಚರವಿರಲಿ: ನೊಂದಣಿಯಾಗದೆ ಕಡಿಮೆ ಅವಧಿಯಲ್ಲಿ ಹಣದ್ವಿಗುಣ ಮಾಡುತ್ತೇವೆ. ನಿವೇಶನ, ಷೇರು ಖರೀದಿಸಿ ಎಂದು ಯಾರಾದರೂ ಒತ್ತಾಯ ಅಥವಾ ಸಂದೇಶಗಳ ಮೂಲಕ ಒತ್ತಾಯಿಸುತ್ತಿದ್ದರೆ, ಈ ಕಂಪನಿ ಬಗ್ಗೆ ಪೊಲೀ ಸ ರಿಗೆ ದೂರು ಕೊಟ್ಟು ಪರಿ ಶೀ ಲನೆ ಮಾಡಿಕೊಳ್ಳಿ. ಇಲ್ಲವೇ ಆರ್‌ಬಿಐನಲ್ಲಿ ಖಾತ್ರಿ ಮಾಡಿಕೊಳ್ಳಿ.

ವಂಚಿಸಿದ ಕಂಪನಿ ಹೆಸರು ವಂಚನೆ ಮೊತ್ತ(ಅಂದಾಜು ಕೋಟಿ ಲೆಕ್ಕದಲ್ಲಿ)
ವಿಕ್ರಂ ಇನ್‌ವೆಸ್ಟ್‌ಮೆಂಟ್‌ 700 
ಡ್ರಿಮ್ಡ್ ಜಿಕೆ, ಇತರೆ    1000 
ಅಗ್ರೀಗೋಲ್ಡ್‌        6500 
ವಿನಿವಿಂಕ್‌            203
ಇನ್‌ವೆಸ್ಟೆಕ್‌         200 
ಖಾಸನೀಸ್‌         400

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next