Advertisement
ಕಳೆದ ಹತ್ತು ವರ್ಷಗಳಿಂದಲೂ ಕಾಣದ ಮಹಾಮಳೆಯಿಂದ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ. ಮಳೆ ನೀರು ಹರಿಯಲು ರಾಜಕಾಲುವೆ ಗಳು ಬಲಾಡ್ಯರ ಪ್ರಭಾವಕ್ಕೆ ಪಾಲಾಗಿವೆ. ಕೆಲವೆಡೆಗಳಲ್ಲಿ ಮುಚ್ಚಿವೆ. ರಾಜಕಾಲುವೆ ಯಿದ್ದರೂ ಅದರ ಅಳತೆಯ ಪ್ರಮಾಣ ಕ್ಷೀಣಿಸಿ ಸಣ್ಣ ಪ್ರಮಾಣದ ಚರಂಡಿ ರೂಪ ಪಡೆದಿವೆ. ಮಳೆ ಎಲೆ ತೋಟದ ಜಮೀನು, ಮನೆಗಳಿಗೆ ನುಗ್ಗಿದ ನೀರು ನಂತರ ಪಟ್ಟಣದ ಹಲವು ಬಡಾವಣೆಗಳ ಮೂಲಕ ಹರಿವು ವೇಗಪಡೆದು ಭಿನ್ನಮಂಗಲ ಕೆರೆ ಸೇರಿದೆ.
Related Articles
Advertisement
ಜೆಸಿಬಿ ಯಂತ್ರಗಳ ಕಲರವ: ಪಟ್ಟಣದಲ್ಲಿ ಸಂಭವಿಸಿದ ಮಳೆ ಅವಾಂತರದಿಂದ ಬಡಾವಣೆ, ದೇಗುಲ ಮತ್ತು ಶಾಲಾ-ಕಾಲೇಜಿನ ಆವರಣಕ್ಕೆ ನೀರು ನುಗ್ಗಿತ್ತು. ಕಿರಿದಾದ ನೀರು ಹರಿವ ಚರಂಡಿ ಅಥವಾ ಮೋರಿ, ರಾಜಕಾಲುವೆಯನ್ನು ಅಗೆದು ಅಗಲಗೊಳಿಸಿ ನೀರು ಹೊರಹರಿಯಲು ಅನುವು ಮಾಡಿಕೊಡಲು ಜೆಸಿಬಿ ಯಂತ್ರಗಳನ್ನು ಕರೆಯಿಸಲಾಗಿತ್ತು.
ಸುಮಾರು 56 ಎಕರೆ ಪ್ರದೇಶದ ವಿಸ್ತೀರ್ಣವಿರುವ ಕೆರೆ ಮತ್ತು ಕೋಡಿಯನ್ನು ದುರಸ್ತಿಗೊಳಿಸಿಲ್ಲ. ಈ ಕೆರೆ ಒಡೆದಿರುವುದುಇದೇನು ಮೊದಲಲ್ಲ. ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ವಹಿಸಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಭೇಟಿ: ನೆಲಮಂಗಲ ಪಟ್ಟಣದ ದೊಡ್ಡಕೆರೆ ಏರಿ ಒಡೆತದ ಸುದ್ದಿ ತಿಳಿದ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ
ಮುಂಜಾನೆಯಿಂದಲೇ ಪರಿಶೀಲನೆ ನಡೆಸುವ ಮೂಲಕ ತ್ವರಿತ ಕ್ರಮಕೈಗೊಂಡಿದ್ದರಲ್ಲದೇ ಸಾರ್ವಜನಿಕರು ನಡೆಸಿದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು. ಹಾಲು, ಬ್ರೇಡ್, ವಿತರಣೆ: ಉಪಾಹಾರ ತಯಾರಿಸಲು ಅಸಾಧ್ಯ ಎಂಬುದನ್ನು ಅರಿತ ವಾಜರಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಜನರಿಗೆ ಹಾಲು, ಬ್ರೇಡ್, ಟೀ, ಕಾಫಿ, ತಿಂಡಿ ವಿತರಿಸಿ ಮಾನವೀಯತೆ ಮೆರೆದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ, ತಹಶೀಲ್ದಾರ್ ರಮೇಶ್ ಸೇರಿದಂತೆ ಹಲವಾರು ಅಧಿಕಾರಿಗಳೂ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಾಲಯ್ಯ, ರಾಜಕಾಲುವೆ ಗಳು ಒತ್ತುವರಿಯಾಗಿ ರುವುದರಿಂದಲೇ ಈ ಅವಾಂತರ ಸೃಷ್ಟಿಯಾಗಿದೆ. ಇದರ ವರದಿ ಪಡೆದು ಸೂಕ್ತ ಕ್ರಮವಹಿ ಸುವುದಲ್ಲದೇ ಹಾನಿಯಾಗಿರು ವುದಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಜನಾಕ್ರೋಶ: ಕೆರೆ ಸಂರಕ್ಷಣೆಯಲ್ಲಿ ನಿರಾಸಕ್ತಿ ಹೊಂದಿರುವ ಅಧಿಕಾರಿಗಳ ಕ್ರಮವನ್ನು ಜನರು ಆಕ್ಷೇಪಿಸಿದರು. ತ್ವರಿತ ಕ್ರಮಕೈ ಗೊಂಡು ಮನೆಗಳಿಗೆ ನೀರು ನುಗ್ಗಿರು ವುದರಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ತಾಲೂಕಿನ ಸೊಂಪುರ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಬಿದ್ದಂತಹ ಭಾರೀ ಮಳೆಗೆ ಹೋಬಳಿಯ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಹೋಬಳಿಯ ಬರಗೇನಹಳ್ಳಿ ಹಾಗೂ ಹೊನ್ನೇನಹಳ್ಳಿಯಲ್ಲಿ ಮನೆಗಳು ಕುಸಿತಗೊಂಡಿವೆ. ಮನೆ ಕುಸಿತ: ಸೋಂಪುರ ಹೋಬಳಿಯ ಬರಗೇನಹಳ್ಳಿ ಗ್ರಾಮದ ಪುಟ್ಟಗಂಗಯ್ಯ, ತಿಮ್ಮೆಗೌಡ ಹಾಗೂ ಚಿಕ್ಕಹೊನ್ನಪ್ಪಸೇರಿದಂತೆ ಮೂರು ಮನೆಗಳು, ಹೊನ್ನೇನಹಳ್ಳಿ ರೇವಮ್ಮನವರ ಮನೆ ಕುಸಿತಗೊಂಡಿದ್ದು ಯಾವುದೇ ರೀತಿ ಅನಾಹುತಗಳು ಸಂಭವಿಸಿಲ್ಲ. ಕುಸಿದ ಮನೆ ಶಬ್ಧ ಕೇಳಿಸಿಕೊಂಡ ಮನೆಯವರು ತಕ್ಷಣ ಹೊರಬಂದಿದ್ದಾರೆ.