ನರಗುಂದ: ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವ ಧಿಯಲ್ಲಿ ರಾಜ್ಯದಲ್ಲಿ ಕೈಗೊಂಡ ಹಾಗೂ ನನ್ನ ಅವಧಿ ಯಲ್ಲಿ ಮತಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಪ್ರತಿ ಗ್ರಾಮದಲ್ಲಿ ನಮ್ಮ ಪಕ್ಷಕ್ಕೆ ಅಪಾರ ಕಾರ್ಯಕರ್ತರು ಸೇರ್ಪಡೆ ಆಗುತ್ತಿರುವುದು ಸಂತಸ ತಂದಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಮಂಗಳವಾರ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಚಿಕ್ಕನರಗುಂದ ಮತ್ತು ಯಾವಗಲ್ಲ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರನ್ನು ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡು ಸಚಿವರು ಮಾತನಾಡಿದರು.
ಚಿಕ್ಕನರಗುಂದ ಗ್ರಾಪಂ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಚಿಕ್ಕನರಗುಂದ ಭಾಗದಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಯಾವಗಲ್ಲ ಗ್ರಾಮದ ಅಲ್ಪಸಂಖ್ಯಾತ ಬಂಧುಗಳ ಸೇರ್ಪಡೆ ಬಹಳ ಸಂತಸ ತಂದಿದೆ. ಚಿಕ್ಕನರಗುಂದ ಮತ್ತು ಯಾವಗಲ್ಲ ಗ್ರಾಮಗಳು ಕಾಂಗ್ರೆಸ್ ಮುಕ್ತ ಆಗಲಿವೆ ಎಂದು ತಿಳಿಸಿದರು.
ಮತಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ನಮ್ಮ ಪಕ್ಷದ ತತ್ವ, ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಬಹಳಷ್ಟು ಜನರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು 15, 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಸಂಕಲ್ಪ ಮಾಡಬೇಕೆಂದು ಕಾರ್ಯಕರ್ತರಿಗೆ ಹೇಳಿದರು.
ನರಗುಂದ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ, ರುದ್ರಗೌಡ ಮುಲ್ಕಿಪಾಟೀಲ, ಮುತ್ತನಗೌಡ ಮುಲ್ಕಿಪಾಟೀಲ, ಎ.ಬಿ.ಜ್ಞಾನೋಪಂಥ, ಎಂ.ಎಸ್. ತೋರಗಲ್ಲ, ರುದ್ರಗೌಡ ರಾಚನಗೌಡ್ರ, ಈರಣ್ಣ ಹೊಂಗಲ, ಮಂಜು ಬಾಚಿ, ಬಿ.ಸಿ.ಹನುಮಂತಗೌಡ್ರ, ಸೋಮು ಹೊಂಗಲ, ಶಿವಾನಂದ ಕುಲಕರ್ಣಿ, ಬಿ.ಟಿ.ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಸುರೇಶ ಸಾತಣ್ಣವರ, ಪ್ರಭುಗೌಡ ಮುದಿಗೌಡ್ರ ಮುಂತಾದವರಿದ್ದರು.