ಎಚ್.ಡಿ.ಕೋಟೆ: ಕೋವಿಡ್ ದಿಂದ ಮೂಲೆ ಗುಂಪಾಗಿದ್ದ ಗಿರಿಜನರ ಮಕ್ಕಳಿಗೆ ಪೀಪಲ್ ಟ್ರಿ ಸಂಸ್ಥೆಯು, ವಿವಿಧ ಆಟೋಟ ಕ್ರಿಯಾಶೀಲಚಟುವಟಿಕೆಗಳನ್ನು ಹಮ್ಮಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ.
ಎಚ್.ಡಿ.ಕೋಟೆ ತಾಲೂಕುಬಹುಭಾಗಅರಣ್ಯ,ಹಾಡಿಗಳಿಂದ ಆವೃತ್ತವಾಗಿದೆ. ಬಹುಸಂಖ್ಯೆ ಹಾಡಿ ಗಳುಅರಣ್ಯದೊಡಲ ಮಧ್ಯದಲ್ಲಿ ಸಿಲುಕಿಕೊಂಡಿವೆ. ಕೋವಿಡ್, ಲಾಕ್‌ಡೌನ್‌ನಿಂದಕಳೆದ 7 ತಿಂಗಳಿಂದ ಹಾಡಿಯ ಮಕ್ಕಳು ಕಲಿಕೆ, ಆಟೋಟಗಳಿಂದ ವಂಚಿತಾಗಿದ್ದರು. ಅರಣ್ಯದಲ್ಲೇ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಸ್ತುತ ಬಹುತೇಕ ಶಾಲೆಗಳು ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಆದರೆ, ಹಾಡಿಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲದಿರುವಾಗ ಹಾಡಿಯ ಮಕ್ಕಳಿಗೆ ಶಿಕ್ಷಣ, ಆಟೋಟ, ಮನ ರಂಜನೆಯು ಮರೀಚಿಕೆಯಾಗಿದೆ.
ಇಂತಹ ಸನ್ನಿವೇಶದಲ್ಲಿ ಪೀಪಲ್ ಟ್ರಿ ಸಂಸ್ಥೆ ಹಾಡಿ ಗಳ ವಿದ್ಯಾವಂತ ಯುವಕರನ್ನು ಗುರುತಿಸಿ ಅವರ ಮೂಲಕ ಹಾಡಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದಕಲಿಕೆ ತರಬೇತಿ ಕೊಡಿಸುವ ಮೂಲಕ ಅವರಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸುತ್ತಿದೆ. ಆರಂಭದಲ್ಲಿ ತಾಲೂಕಿನ ಕೇರಳ ಗಡಿಭಾಗದ ಮಾನಿ ಮೂಲೆ ಹಾಡಿ ಮತ್ತು ಗೋಳೂರು ಹಾಡಿಗಳ ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಬೆಳಗ್ಗಿನಿಂದ ಸಂಜೆ ತನಕ ನೃತ್ಯ, ಹಾಡುಗಳು, ನಾಟಕ ಸೇರಿದಂತೆ ಕಲಿಕೆಗೆ ಪೂರಕವಾದ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ತಾಲೂಕಿನ 22 ಹಾಡಿಗಳಲ್ಲಿ ಆದಿವಾಸಿಗರ ಮಕ್ಕಳ ಬೌದ್ಧಿಕ ಮಟ್ಟದ ಬೆಳವಣಿಗೆಗೆ ಪೂರಕವಾದ ತರಬೇತಿ ನೀಡಲಾಗುತ್ತಿದೆ. ನಂತರ ಹಂತ ಹಂತವಾಗಿ ತಾಲೂಕಿನ ಎಲ್ಲಾ ಹಾಡಿಗಳ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿ ತರುವ ಪ್ರಯತ್ನ ನಡೆಯುತ್ತಿದೆ.
ಅರಣ್ಯ ಮಧ್ಯದ ಗುಡಿಸಲುಗಳಲ್ಲೇ ಕುಳಿತು ಶಿಕ್ಷಣದಿಂದ ವಂಚಿತರಾಗಿದ್ದ ಆದಿವಾಸಿ ಮಕ್ಕಳು ಉತ್ಸಹದಿಂದ ನೃತ್ಯ, ನಾಟಕ, ಹಾಡುಗಳು ಮತ್ತಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಜೀವಿಕ ಉಮೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಹಾಡಿಯಲ್ಲಿ ಮಕ್ಕಳಿಗೆ ವಿವಿಧ ಶೈಕ್ಷಣಿಕ ತರಬೇತಿ ನೀಡುತ್ತಿದ್ದಾರೆ.
ಸಾಮಾಜಿಕ ಅಂತರ: ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿ ಮತ್ತು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸ್ಯಾನಿ ಟೈಸರ್ ಬಳಕೆ, ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ನಿಯಮ ಪಾಲನೆ ಮಾಡುವ ಮೂಲಕ ತರಬೇತಿ ನೀಡುತ್ತಿರುವುದು ವಿಶೇಷವಾಗಿದೆ. ಕೊರೊನಾದಿಂದ ಸಮಾಜದ ಪರಿಚಯವಿಲ್ಲದಂತೆ ಅತಂತ್ರರಾಗಿದ್ದ ಮಕ್ಕಳ ಮೊಗದಲ್ಲಿ ಪೀಪಲ್ ಟ್ರಿ ಸಂಸ್ಥೆಯ ನಗು ಮೂಡಿಸಿದೆ.
-ಎಚ್.ಬಿ.ಬಸವರಾಜು