Advertisement

ಇಂದಿಗೂ ನಮ್ಮ ಸೇನೆಯ ಬಗ್ಗೆ ಜನರಿಗೆ ಅನುಮಾನ

12:30 AM Mar 03, 2019 | Team Udayavani |

ಹೊಸದಿಲ್ಲಿ: ಕೆಲವು ಪಕ್ಷಗಳು ಹಾಗೂ ಕೆಲವು ವ್ಯಕ್ತಿಗಳಿಗೆ ನಮ್ಮ ಸೇನೆಯ ಬಗ್ಗೆ ಅನುಮಾನಗಳಿರುವುದು ಅತ್ಯಂತ ದುರದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಭಯೋತ್ಪಾದನೆಯ ವಿರುದ್ಧ ಭಾರತ ಕ್ರಮ ಕೈಗೊಳ್ಳುತ್ತಿರುವ ಈ ಸಮಯದಲ್ಲಿ ಕೆಲವರು ಸೇನಾ ಬಲದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ ಎಂದು ಅವರು ಶನಿವಾರ ಹೊಸದಿಲ್ಲಿಯಲ್ಲಿ ನಡೆದ ಇಂಡಿಯಾ ಟುಡೇ ಸಮ್ಮೇಳನದಲ್ಲಿ ಹೇಳಿದ್ದಾರೆ. ಈಗ ನಮ್ಮ ದೇಶದ ಪ್ರತಿ ಯೋಧನೂ ನಮಗೆ ಅತ್ಯಂತ ಪ್ರಮುಖ. ಈ ಹಿಂದೆ ಹಲವು ಯೋಧರು ಹುತಾತ್ಮರಾಗಿದ್ದರೂ, ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಸನ್ನಿವೇಶ ಬದಲಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಭಾರತದಲ್ಲಿನ ಕೆಲವು ವ್ಯಕ್ತಿಗಳ ಕಾಮೆಂಟ್‌ ಮತ್ತು ಲೇಖನಗಳನ್ನು ಭಾರತದ ವಿರುದ್ಧ ಪಾಕಿಸ್ಥಾನದಲ್ಲಿ ಸಾಕ್ಷ್ಯವನ್ನಾಗಿ ಬಳಸಲಾಗುತ್ತದೆ. ಮೋದಿ ಬಗ್ಗೆ ಇವರ ವಿರೋಧವು ಭಾರತದ ವಿರೋಧವಾಗಿ ಪರಿವರ್ತನೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇಂದು ಮೋದಿ ಅಮೇಠಿಗೆ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರವಾದ ಉತ್ತರಪ್ರದೇಶದ ಅಮೇಠಿಗೆ ಪ್ರಧಾನಿ ಮೋದಿ ಅವರು ಭಾನುವಾರ ಭೇಟಿ ನೀಡಲಿದ್ದಾರೆ. 2014ರ ಬಳಿಕ ಮೊದಲ ಬಾರಿಗೆ ಅವರು ಅಮೇಠಿಗೆ ತೆರಳಲಿದ್ದು, ಅಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಸಾರ್ವಜನಿಕ ಸಭೆಯನ್ನೂ ನಡೆಸಲಿದ್ದಾರೆ.

ಅಜ್ಮಿರ್‌ ದರ್ಗಾಗೆ ಚಾದರ್‌: ಇದೇ ವೇಳೆ, ರಾಜಸ್ಥಾನದ ಅಜ್ಮಿರ್‌ ಶರೀಫ್ ದರ್ಗಾದಲ್ಲಿ ಸದ್ಯದಲ್ಲೇ 807ನೇ ಉರೂಸ್‌ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದರ್ಗಾಗೆ ಚಾದರ್‌ವೊಂದನ್ನು ಸಮರ್ಪಿಸಿದ್ದಾರೆ. ದರ್ಗಾ ಸಮಿತಿಯ ಪ್ರಮುಖರು ಶನಿವಾರ ಮೋದಿ ಅವರನ್ನು ಭೇಟಿಯಾದ ವೇಳೆ, ಚಾದರ್‌ ಅನ್ನು ಹಸ್ತಾಂತರಿಸಲಾಗಿದೆ. ಈ ಬಗ್ಗೆ ಪ್ರಧಾನಿಯೇ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next