ಬೇಲೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಜಾರಿಗೆ ತಂದಿರುವ ಮಹತ್ತರ ಶಕ್ತಿ ಯೋಜನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವವಿಖ್ಯಾತ ಚನ್ನಕೇಶವ ದೇವಲಾಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಯಿಂದ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೆ ಗುಂಪು ಗುಂಪಾಗಿ ದೇವಾಲಯವನ್ನು ವೀಕ್ಷಿಸಿ ದೇವರ ದರ್ಶನ ಪಡೆದಿದ್ದಾರೆ.
ರಾಜ್ಯದ ದೂರದ ಸ್ಥಳಗಳಿಂದ ಕೆಎಸ್ ಅರ್‌ಟಿ ಬಸ್Õಗಳಲ್ಲಿ ಟಿಕೆಟ್ ಪಡೆದು ಹಲವಾರು ಜನರು ದೇಗುಲವನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಆದರೆ, ಸರ್ಕಾರದ ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣ ಸಿಕ್ಕಿರುವುದರಿಂದ ಮಹಿಳೆಯರು ಹೆಚ್ಚಾಗಿ ದೂರದ ಊರುಗಳಿಂದ ದೇವಾಲಯವನ್ನು ವೀಕ್ಷಿಸಲು ಬರುತ್ತಿದ್ದಾರೆ. ಈ ಯೋಜನೆ ಜಾರಿ ಆಗುವ ಮುನ್ನಾ ಮಳೆ ಗಾಲದಲ್ಲಿ ಜನರು ಅಷ್ಟಾಗಿ ದೇವಾಲಯಕ್ಕೆ ಬರುತ್ತಿರಲಿಲ್ಲ. ಮಳೆಗಾಲ ಮುಗಿದ ನಂತರ ಪ್ರವಾಸಿಗರು ಬರುತ್ತಿದ್ದರು. ಇದರ ಜತೆಯಲ್ಲಿ ಶಾಲಾ ಮಕ್ಕಳು ಮತ್ತು ಹೊರ ರಾಜ್ಯದ ಪ್ರವಾಸಿಗರು ಬೇಲೂರು ದೇವಾಲಯವನ್ನು ವೀಕ್ಷಿಸಿ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶೃಂಗೇರಿ, ಹೊರನಾಡು, ಕಟೀಲು, ಉಡುಪಿ ಹೇಗೆ ನಾನಾ ಕ್ಷೇತ್ರಗಳಿಗೆ ತೆರಳುತ್ತಿದ್ದರು.
ಕೈ ಪರ ಮಹಿಳಾ ಶಕ್ತಿ: ರಾಜ್ಯದ ಮೂಲೆಮೂಲೆಗಳಿಂದ ಮಹಿಳೆಯರ ದಂಡು ದೇವಾಲಯಕ್ಕೆ ಭೇಟಿ ನೀಡುತ್ತಿದೆ. ಇದರಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸಹ ಹೆಚ್ಚಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯನ್ನು ಮಹಿಳೆಯರು ಸಂಪೂರ್ಣ ಬೆಂಬ ಲಿಸಿದ್ದು ಸಿಎಂ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಯೋಜನೆಯನ್ನು ಮಹಿಳೆಯರು ಶ್ಲಾಘಿಸಿದ್ದಾರೆ.
ಸರ್ಕಾರಕ್ಕೆ ಅಭಿನಂದನೆ: ದಾವಣಗೆರೆ ಪಟ್ಟಣದ ವಿಮಲಾ ಉದಯವಾಣಿಯೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈ ಯೋಜನೆ ಜಾರಿಯಾಗದಿದ್ದರೆ ಬಸ್Õ ಚಾರ್ಚ್ ನೀಡಿ ಬರಲು ಸಾಧ್ಯವಾಗುತ್ತಿಲ್ಲ. ಮೂವರು ಮಹಿಳೆ ಯರು ಒಟ್ಟಿಗೆ ಬಂದಿದ್ದು ದೇವಾಲಯವನ್ನು ಸಂಪೂರ್ಣ ನೋಡಿದ್ದೇವೆ. ಬೇಲೂರು, ಹಳೇಬೀಡು ದೇವಾಲ ಯ ಗಳು ವಿಶ್ವದಲ್ಲಿ ಪ್ರಸಿದ್ಧಿಯಾಗಿವೆ ಎಂದು ಕೇಳಿದ್ದೆವು. ಆದರೆ, ಹತ್ತಿರದಿಂದ ನೋಡುವ ಭಾಗ್ಯವನ್ನು ಸರ್ಕಾರ ಉಚಿತ ಪ್ರಯಾಣ ಮಾಡುವ ಮೂಲಕ ಕಲ್ಪಿಸಿರುವುದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಅಭಿನಂದಿಸು ವುದಾಗಿ ತಿಳಿಸಿದ್ದಾರೆ. ಸರ್ಕಾರ ಜಾರಿಗೊಳಿಸಿರುವ ಯೋಜನೆಯನ್ನು ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡುತ್ತಿರುವುದು ಶಕ್ತಿ ಯೋಜನೆಯಲ್ಲಿ ಕಂಡುಬಂದಿದೆ.. ಮಳೆಗಾಲ ಮುಗಿದ ನಂತರ ಈ ಯೋಜನೆ ಲಾಭ ಇನ್ನು ಹೆಚ್ಚಿನ ಮಹಿಳೆಯರು ಪಡೆದು ದೇಗುಲಕ್ಕೆ ಭೇಟಿ ನೀಡುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.
ದಾಸೋಹದಲ್ಲಿ ನಿತ್ಯ 2500 ಮಂದಿಗೆ ಬಫೆ ವ್ಯವಸ್ಥೆ : ದೇವಾಲಯದಲ್ಲಿ ಪ್ರತಿ ದಿನ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿತ್ತು. ಶಕ್ತಿ ಯೋಜನೆ ಜಾರಿಯಾದ ನಂತರ ಭಕ್ತರ ಸಂಖ್ಯೆ ಹೆಚ್ಚಿದೆ. ಈ ಸಂಬಂಧ ದಾಸೋಹ ಟೆಂಡರ್ ಪಡೆದಿರುವ ಎ.ಎಂ.ನಾಗರಾಜ್ ಉದಯವಾಣಿಯೊಂದಿಗೆ ಮಾತನಾಡಿ, ಈ ಹಿಂದೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಿತ್ತು. ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ನಂತರ ಪ್ರತಿ ದಿನ 2500 ಸಾವಿರ ಜನ ದಾಸೋಹ ಪಡೆಯುತ್ತಿದ್ದಾರೆ. ದಿಢೀರನೆ ಜನ ಸಂಖ್ಯೆ ಹೆಚ್ಚುತ್ತಿರುವುದರಿಂದ ಊಟ ಬಡಿಸಲು ಸಾಧ್ಯ ಆಗುತ್ತಿಲ್ಲ. ಪ್ರತಿ ದಿನ 1 ರಿಂದ 3 ಗಂಟೆವರೆಗೆ ಊಟ ಬಡಿಸಲಾಗುತ್ತಿದೆ. ದಾಸೋಹದಲ್ಲಿ 12 ಜನ ಕೆಲಸ ಮಾಡುತ್ತಿದ್ದೇವೆ. ಬೆಳಗ್ಗೆ ಪಟ್ಟಣದ ಕೆಲವು ಸ್ನೇಹಿತರು ಬಂದು ಊಟ ಬಡಿಸಲು ಸಹಾಯ ಮಾಡುತ್ತಾರೆ. ಅದರೆ ರಾತ್ರಿ ವೇಳೆ ಬಡಿಸಲು ಅಗುತ್ತಿಲ್ಲ. ಆದರಿಂದ ಬಫೆ ಪದ್ಧತಿ ಜಾರಿ ಮಾಡಿದ್ದು ದಾಸೋಹದಲ್ಲಿ ಯಾವುದೆ ಅಡ್ಡಿಯಿಲಲ್ಲದೆ ಬಂದತಹ ಭಕ್ತರಿಗೆ ದಾಸೋಹ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
– ಡಿ.ಬಿ.ಮೋಹನ್‌ಕುಮಾರ್