ಶಿರ್ವ: ಶಿರ್ವ ಮತ್ತು ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಗಳಿರುವುದರಿಂದ ಜಿಲ್ಲಾಧಿಕಾರಿ ಯವರ ಆದೇಶ ದಂತೆ ಜೂ.2 ರಿಂದ 7ರ ವರೆಗೆ 5 ದಿನಗಳ ಕಾಲ ಇದ್ದ ಸಂಪೂರ್ಣ ಲಾಕ್ಡೌನ್ ಅಗತ್ಯ ವಸ್ತುಗಳ ಖರೀದಿಗೆ ಸಡಿಲಗೊಂಡ ಹಿನ್ನೆಲೆಯಲ್ಲಿ ಶಿರ್ವ ಮತ್ತು ಮೂಡುಬೆಳ್ಳೆಪೇಟೆ ಹಾಗೂ ಪರಿಸರದ ಅಂಗಡಿಗಳಲ್ಲಿ ಭಾರೀ ಜನಸಂದಣಿ ಇತ್ತು.
ಶಿರ್ವ ಪೊಲೀಸರ ಸೂಚನೆಯಂತೆ ಹೆಚ್ಚಿನ ಅಂಗಡಿಗಳಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು.
ರಸ್ತೆಯಲ್ಲಿ ವಾಹನಗಳ ಸಾಲು ಸಾಲು ಇದ್ದು ಸೋಮವಾರ ಮುಂಜಾನೆಯಿಂದಲೇ ಎಲ್ಲಾ ಅಂಗಡಿಗಳ ಮುಂದೆ ಜನರು ಜಮಾಯಿಸಿದ್ದು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದರು.
ಶಿರ್ವ ಮತ್ತು ಬೆಳ್ಳೆ ಗ್ರಾ.ಪಂ. ಆಡಳಿತದಿಂದ ರವಿವಾರವೇ ಜನರಲ್ಲಿ ಲಾಕ್ಡೌನ್ ಸಡಿಲಗೊಂಡ ಸಮಯದಲ್ಲಿ ನೂಕುನುಗ್ಗಲು ಮಾಡದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಲು ನಾಗರಿಕರಲ್ಲಿ ವಿನಂತಿ ಮಾಡಲಾಗಿತ್ತು. ಜನರೂ ಸಹಕಾರ ನೀಡಿದ್ದು 10 ಗಂಟೆಯೊಳಗೆ ಖರೀದಿಸಿ ಮನೆ ಸೇರಿದ್ದಾರೆ.