Advertisement
ಇದು ಅತ್ಯಂತ ಹಳೆಯ ಮಾತು. ಆದರೂ ಇದು ಎಲ್ಲಕಾಲಕ್ಕೂ ಅನ್ವಯಿಸುತ್ತದೆ. ಎಲ್ಲ ರೈತರೂ ಟೊಮೆಟೊ ಬೆಳೆದು ಅದರ ಬೆಲೆ ಕುಸಿದಾಗ, ಎಲ್ಲ ತಂದೆ ತಾಯಿಗಳೂ ಮಕ್ಕಳು ಇದನ್ನೇ ಓದಬೇಕೆಂದು ಹಠ ಹಿಡಿದು ಕುಳಿತಾಗ, ಕೊನೆಗೆ ಅಕ್ಷಯ ತೃತೀಯ ಎಂದು ಚಿನ್ನದಂಗಡಿ ಮುಂದೆ ಕ್ಯೂ ನಿಂತು ಕೊಳ್ಳುವಾಗ…. ಇಂಥವರನ್ನು ಕಂಡಾಗ ಜನಮರುಳ್ಳೋ, ಜಾತ್ರಿ ಮರುಳ್ಳೋ ಎಂಬು ಮಾತು ತಪ್ಪದೇ ನೆನಪಾಗುತ್ತದೆ.
Related Articles
Advertisement
ಮಧ್ಯರಾತ್ರಿಯವರೆಗೂ ಅಂಗಡಿ ತೆರೆದು ಗ್ರಾಹಕರನ್ನು ನಿಭಾಯಿಸಲು ಹೈರಾಣಾಗುತ್ತಿದ್ದ ವ್ಯಾಪಾರಿಗಳು ಈಗ ಇಂಥ ಪರಿಸ್ಥಿತಿಯಲ್ಲಿ ಇಲ್ಲ. ಅಕ್ಷಯ ತೃತೀಯ ಕೂಡ ಉಳಿದ ದಿನದಂತೆ (ಅಂದರೆ- ಹತ್ತರಲ್ಲಿ ಹನ್ನೊಂದು ಎಂಬಂತೆ) ಆಗಿದೆ ಅಷ್ಟೇ. ಮತ್ತೆ ಅಕ್ಷಯ ತೃತೀಯ ಬಂದಿದೆ. ಚಿನ್ನ ಬಳಕೆಗೆ ಬೇಕಾ? ಅಂದರೆ, ಮದುವೆಗೆ ಬೇಕಾಗಿದೆ. ಬಹಳ ದಿನಗಳಿಂದ ಖರೀದಿಸಬೇಕು ಎಂದುಕೊಂಡಿದ್ದೆ. ಹೀಗೆಲ್ಲಾ ಯೋಚಿಸುತ್ತಿದ್ದೀರಾ? ಒಂದು ಮಾತು ಕೇಳಿ.
ಚಿನ್ನ ಖರೀದಿಗೆ ಯಾವ ದಿನದ ಹಂಗಿಲ್ಲ. ಹೂಡಿಕೆಯಾಗಿ ಚಿನ್ನವನ್ನು ಈಗ ಯಾರೂ ನೋಡುವುದಿಲ್ಲ. ವರ್ಷದಿಂದ ವರ್ಷಕ್ಕೆ ಚಿನ್ನದ ಮೇಲಿನ ಹೂಡಿಕೆ, ಲಾಭ ಕೊಡುವ ಬದಲು ನಷ್ಟವನ್ನು ತರುತ್ತಿದೆ. ಮೊದಲು ಚಿನ್ನವನ್ನು ಕೊಳ್ಳುವುದು, ಅದನ್ನು ಇಟ್ಟುಕೊಳ್ಳುವುದು, ಹಣವನ್ನು ಇಟ್ಟುಕೊಂಡಂತೆ ಎನ್ನುವ ಭಾವನೆ ಇತ್ತು. ಆದರೆ ಈಗ ಹಾಗಲ್ಲ. ಮಕ್ಕಳ ಕಾಲಕ್ಕೆ ಆಗುತ್ತದೆ ಎಂದು ಚಿನ್ನ ಖರೀದಿಸುವವರು ಈಗ ಕಡಿಮೆ ಆಗಿದ್ದಾರೆ.
ಚಿನ್ನವನ್ನು ಪೇಪರ್ ರೀತಿಯಲ್ಲಿ ಹೇಗೆ ಬ್ಯಾಂಕಿನಲ್ಲಿ ನಾವು ಇಟ್ಟ ಹಣವನ್ನು ಪಾಸ್ ಬುಕ್‌ನಲ್ಲಿ ನೋಡಿಕೊಂಡು ಸಂತೋಷ ಪಡುತ್ತೇವೋ ಹಾಗೆ, ನಾವು ಖರೀದಿಸಿದ ಚಿನ್ನಕ್ಕೆ ಪ್ರತಿಯಾಗಿ ಕೊಡುವ ಸರ್ಟಿಫಿಕೇಟ್ ಕೂಡ ಲಭ್ಯ ಇದೆ. ಮತ್ತೀಗ ಅಕ್ಷಯ ತೃತೀಯ ಬಂದಿದೆ. ಚಿನ್ನ ಕೊಳ್ಳಬೇಕು ಎಂದು ಮುಗಿಬೀಳಬೇಡಿ. ಬಳಕೆಗೆ ಬೇಕು ಅನ್ನಿಸಿದರೆ ಮಾತ್ರ ಖರೀದಿಸಿ. ಹೂಡಿಕೆಗೆ ಮಾತ್ರ ಕೊಳ್ಳಬೇಡಿ.
* ಸುಧಾಶರ್ಮ ಚವತ್ತಿ