ಹೈದರಾಬಾದ್: ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ ಎಂಬುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿಕೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಮತ್ತೆ ಬಿಎಸ್‌ವೈ ಜಪ; ರಾಜಕಾರಣದ ಲೆಕ್ಕಾಚಾರ ಬದಲಾಗುವ ಸಾಧ್ಯತೆ
ಸಿಎಂ ಕೆಸಿಆರ್ ಬುಧವಾರ (ಆಗಸ್ಟ್ 17), 2014ರಲ್ಲಿ ನೂತನ ರಾಜ್ಯ ರಚನೆಯಾದ ಮೇಲೆ ಟಿಆರ್ ಎಸ್ ಅಧಿಕಾರದ ಗದ್ದುಗೆ ಏರಿತ್ತು ನಂತರ 2016ರಲ್ಲಿ ನೂತನವಾಗಿ ರಚನೆಯಾದ ನೈರುತ್ಯ ತೆಲಂಗಾಣದ ಹೊಸ ಜಿಲ್ಲೆ ವಿಕಾರಾಬಾದ್ ನ ನೂತನ ಕಲೆಕ್ಟರೇಟ್ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಗಡಿ ಭಾಗದ ತಾಂಡೂರು ನೆರೆಯ ಕರ್ನಾಟಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಅದೇ ರೀತಿ ಕೆಲವು ಗಡಿ ಪ್ರದೇಶದಲ್ಲಿರುವ ಜನರು ರಾಯಚೂರನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಇಲ್ಲವೇ ತೆಲಂಗಾಣದ ರಾಜ್ಯದಲ್ಲಿ ಜಾರಿಗೊಳಿಸಿರುವ ಜನ ಕಲ್ಯಾಣ ಯೋಜನೆಗಳನ್ನು ನಮಗೂ ನೀಡಿ ಎಂದು ಬೇಡಿಕೆ ಆಗ್ರಹಿಸುತ್ತಿದ್ದಾರೆ ಎಂಬುದಾಗಿ ಕೆಸಿಆರ್ ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಉಚಿತ ಕುಡಿಯುವ ನೀರಿನ ಭಗೀರಥ ಯೋಜನೆ, ಗರ್ಭಿಣಿಯರಿಗೆ, ತಾಯಂದಿರಿಗೆ ಕೆಸಿಆರ್ ಕಿಟ್ಸ್, ಉಚಿತ ವಿದ್ಯುತ್, ಎಕರೆಗೆ 10,000 ರೂ. ವಾರ್ಷಿಕ ಕೃಷಿ ಪ್ರೋತ್ಸಾಹ ಧನದಂತಹ ಜನಪ್ರಿಯ ಕೊಡುಗೆಗಳನ್ನು ನೀಡಿರುವುದಾಗಿ ಕೆಸಿಆರ್ ಈ ಸಂದರ್ಭದಲ್ಲಿ ಹೇಳಿದರು.