Advertisement

ಅಮೇಥಿಯ ಜನರು ಯಾರ ಬಳಿಯೂ ಕೈಚಾಚಿದವರಲ್ಲ : ಪ್ರಿಯಾಂಕಾ

09:08 AM Apr 29, 2019 | Vishnu Das |

ಅಮೇಥಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರತಿನಿಧಿಸುತ್ತಿರುವ,ಕಣಕ್ಕಿಳಿದಿರುವ ಉತ್ತರಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದು ,ಬಿಜೆಪಿಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

Advertisement

ಅಮೇಥಿಯಲ್ಲಿ ಬಿಜೆಪಿ ಮತದಾರರಿಗೆ ಮಾಧ್ಯಮಗಳ ಮುಂದೆಯೇ ಹಣ, ಸೀರೆಗಳು ಮತ್ತು ಶೂಗಳನ್ನು ಹಂಚುತ್ತಿದೆ. ಅಮೇಥಿಯ ಜನರು ಎಂದಿಗೂ ಯಾರ ಬಳಿಯೂ ಕೈ ಚಾಚಿದವರಲ್ಲ. ನಾನು 12 ವರ್ಷದ ಹುಡುಗಿಯಾಗಿದ್ದಾಗಿನಿಂದ ಇಲ್ಲಿಗೆ ಬರುತ್ತಿದ್ದೇನೆ, ಅಮೇಥಿ ಮತ್ತು ರಾಯ್‌ಬರೇಲಿಯ ಜನರು ಹೆಚ್ಚು ಘನತೆ ಉಳ್ಳವರು ಎಂದರು.

ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಬಿಜೆಪಿಯಿಂದ ಕಣಕ್ಕಿದಿದ್ದು ಜಿದ್ದಾಜಿದ್ದಿನ ಕಣವಾಗಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next